ನ್ಯೂಸ್ ನಾಟೌಟ್ :ಬರೋಬ್ಬರಿ 4.1 ಕೆಜಿ ಚಿನ್ನದಿಂದ ವಿಶ್ವದ ಅತ್ಯಂತ ದುಬಾರಿ ಶರ್ಟ್ ವಿನ್ಯಾಸಗೊಳಿಸಲಾದ ಹೊಂದಿರುವ ವ್ಯಕ್ತಿಯೊಬ್ಬ ಇದೀಗ ಭಾರಿ ಸುದ್ದಿಯಾಗಿದ್ದಾನೆ.ಮಹಾರಾಷ್ಟ್ರ ಮೂಲದ ಪ್ರಸಿದ್ಧ ಉದ್ಯಮಿ ಮತ್ತು ರಾಜಕಾರಣಿ ಪಂಕಜ್ ಪರಾಖ್ ಅವರು ವೈರಲ್ ಆಗಿರುವ ವ್ಯಕ್ತಿ.
ಈ ದುಬಾರಿ ಶರ್ಟ್ 2016 ರಲ್ಲಿಯೇ ಗಿನ್ನೆಸ್ ವಿಶ್ವ ದಾಖಲೆ ಮಾಡಿದ್ದರು. 4.10 ಕೆಜಿ ತೂಕದ ಗೋಲ್ಡನ್ ಶರ್ಟ್ ಈಗ 1,78,00,000 ಕೋಟಿ ರೂ. ಮೌಲ್ಯದ್ದಾಗಿದೆ ಮತ್ತು ಪರಾಖ್ ಅವರ ಶ್ರೀಮಂತ ಸಂಗ್ರಹದ ಒಂದು ಭಾಗವಾಗಿದೆ.ಇದರಲ್ಲಿ ಚಿನ್ನದ ಗಡಿಯಾರ, ಹಲವಾರು ಚಿನ್ನದ ಸರಗಳು, ದೊಡ್ಡ ಚಿನ್ನದ ಉಂಗುರಗಳು, ಚಿನ್ನದ ಮೊಬೈಲ್ ಕವರ್ ಮತ್ತು ಚಿನ್ನದ ಚೌಕಟ್ಟಿನ ಕನ್ನಡಕಗಳು ಸೇರಿವೆ.
2014 ರಲ್ಲಿ ಪಂಕಜ್ ಪರಾಖ್ ಅವರ 45 ನೇ ಹುಟ್ಟುಹಬ್ಬಕ್ಕೆ ಈ ದುಬಾರಿ ಶರ್ಟ್ ಅನ್ನು ನಾಸಿಕ್ನ ಬಫ್ನಾ ಜ್ಯುವೆಲ್ಲರ್ಸ್ನಿಂದ ವಿನ್ಯಾಸಗೊಳಿಸಿದ್ದರು.ಇದಕ್ಕೆ ಸುಮಾರು 20 ಆಯ್ದ ಕುಶಲಕರ್ಮಿಗಳ ತಂಡವು ಕೆಲಸ ಮಾಡಿತ್ತು. ಎರಡು ತಿಂಗಳುಗಳಲ್ಲಿ 3,200 ಗಂಟೆಗಳ ಕಾಲ ಶ್ರಮ ವಹಿಸಿ ಈ ಶರ್ಟ್ ಅನ್ನು ವಿನ್ಯಾಸಗೊಳಿಸಲಾಗಿದೆ. ಈ ಶರ್ಟನ್ನು ಒಳಭಾಗದಿಂದ ಆರಾಮದಾಯಕ ಮತ್ತು ದೇಹಕ್ಕೆ ಹಾನಿಯಾಗದಂತೆ ವಿನ್ಯಾಸಗೊಳಿಸಲಾಗಿದ್ದು, ಒಳಭಾಗದಲ್ಲಿ ಬಟ್ಟೆಯನ್ನು ಹೊಂದಿದೆಯಂತೆ. ಹೊರಭಾಗದಲ್ಲಿ ಚಿನ್ನದಿಂದ ವಿನ್ಯಾಸಗೊಳಿಸಲಾಗಿತ್ತಾದರೂ ಈ ಶರ್ಟ್ ಅನ್ನು ವಾಶ್ ಕೂಡ ಮಾಡಬಹುದಾಗಿದೆ.
ಮುಂಬೈನಿಂದ ಸುಮಾರು 260 ಕಿಮೀ ದೂರದಲ್ಲಿರುವ ಯೋಲಾ ಪಟ್ಟಣದ ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷದ ಉಪ ಮೇಯರ್ ಆಗಿ ಗುರುತಿಸಿಕೊಂಡಿರುವ ಪಂಕಜ್ ಪರಾಖ್ ಇದೀಗ ದುಬಾರಿ ಶರ್ಟ್ನಿಂದಲೇ’ದಿ ಮ್ಯಾನ್ ವಿತ್ ದಿ ಗೋಲ್ಡನ್ ಶರ್ಟ್’ ಎಂಬ ಖ್ಯಾತಿಯನ್ನು ಗಳಿಸಿಕೊಂಡಿದ್ದಾರೆ ಅನ್ನೊದು ವಿಶೇಷ..!
————————