ನ್ಯೂಸ್ ನಾಟೌಟ್: ಮಂಗನಕಾಯಿಲೆ (ಕೆಎಫ್ಡಿ) ಪ್ರಕರಣ ಉಡುಪಿ ಜಿಲ್ಲೆಯಿಂದ ಶುಕ್ರವಾರ(ಫೆ.೨೩)ರಂದು ವರದಿಯಾಗಿದ್ದು, ಬೈಂದೂರು ತಾಲೂಕು ವಂಡ್ಸೆ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯ ಕೆಂಚನೂರು ಗ್ರಾಮದ 58 ವರ್ಷ ಪ್ರಾಯದ ಮಹಿಳೆಯಲ್ಲಿ ಸೋಂಕು ಪತ್ತೆಯಾಗಿದೆ ಎಂದು ವರದಿ ತಿಳಿಸಿದೆ.
ಒಬ್ಬಂಟಿಯಾಗಿ ವಾಸಿಸುವ ಈ ಮಹಿಳೆ ಸೌದೆಗಾಗಿ ಕಾಡಿಗೆ ಹೋಗುವುದನ್ನು ಬಿಟ್ಟರೆ ಇನ್ನೆಲ್ಲಿಗೂ ಹೋದ ದಾಖಲೆಯಿಲ್ಲ. ಆಕೆಯ ಮನೆಯ ಆಸುಪಾಸಿನಲ್ಲಿ ಇತರ ಸಂಬಂಧಿಕರು ವಾಸವಾಗಿದ್ದರೂ ಯಾರಲ್ಲೂ ಸೋಂಕು ಪತ್ತೆಯಾಗಿಲ್ಲ.
ಮಹಿಳೆಯನ್ನು ಉಡುಪಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತಿದ್ದು, ಚೇತರಿಸಿಕೊಳ್ಳುತಿದ್ದಾರೆ ಎಂದು ಉಡುಪಿ ಡಿಎಚ್ಓ ಮಾಹಿತಿ ನೀಡಿದ್ದಾರೆ. ಇಂದು ಸಂಜೆ ಇನ್ನಿಬ್ಬರ ಸ್ಯಾಂಪಲ್ಗಳು ಇಲಾಖೆಯ ಕೈಸೇರಿದ್ದು, ಅವುಗಳ ಪರೀಕ್ಷೆ ನಾಳೆ ನಡೆಯಲಿದೆ ಎಂದು ವರದಿ ತಿಳಿಸಿದೆ.