ನ್ಯೂಸ್ ನಾಟೌಟ್ : ಬಿಗ್ ಬಾಸ್ ಕನ್ನಡ ಸೀಸನ್ -10 ಇತ್ತೀಚೆಗೆ ಮುಕ್ತಾಯ ಕಂಡಿದೆ. ಡ್ರೋಣ್ ಪ್ರತಾಪ್ ಅವರು ರನ್ನರ್ ಅಪ್ ಆಗಿ ಹೊರ ಬಂದಿದ್ದಾರೆ.ಸದ್ಯ ಮೀಡಿಯಾಗಳಲ್ಲಿ ಸಂದರ್ಶನದಲ್ಲಿ ಬ್ಯುಸಿಯಾಗಿದ್ದರೂ ಕೆಲವೊಂದು ಕಡೆಯಿಂದ ಆಫರ್ಗಳು ಕೂಡ ಇವರನ್ನರಸಿ ಬರುತ್ತಿವೆ.
ಹೌದು, ಮಾಹಿತಿ ಪ್ರಕಾರ ಬಿಗ್ ಬಾಸ್ ನಲ್ಲಿ ರನ್ನರ್ ಅಪ್ ಆಗಿ ಮಿಂಚಿದ ಡ್ರೋನ್ ಪ್ರತಾಪ್ ಅವರು ಮತ್ತೊಂದು ರಿಯಾಲಿಟೀ ಶೋ ಮೂಲಕ ಜನರೆದುರು ಬರೋದಕ್ಕೆ ರೆಡಿಯಾಗಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
ನಿಮ್ಗೆಲ್ಲಾ ʼಗಿಚ್ಚಿ ಗಿಲಿ ಗಿಲಿʼ ಕಾರ್ಯಕ್ರಮದ ಬಗ್ಗೆ ಗೊತ್ತಿದೆ. ಕಳೆದೆರೆಡು ಸೀಸನ್ ಬಳಿಕ ಇದೀಗ ಮೂರನೇ ಸೀಸನ್ ಆರಂಭಕ್ಕೆ ದಿನಗಣನೆ ಆರಂಭಗೊಂಡಿದೆ.ಹೀಗಾಗಿ ಈ ಕಾರ್ಯಕ್ರಮದಲ್ಲಿ ಈ ಬಾರಿ ಹೊಸ ಸ್ಪರ್ಧಿಗಳು ಭಾಗಿಯಾಗಲಿದ್ದಾರೆ ಎನ್ನಲಾಗಿದೆ. ಇದರಲ್ಲಿ ಈಗಷ್ಟೇ ಬಿಗ್ ಬಾಸ್ ಕಾರ್ಯಕ್ರಮ ಮುಗಿಸಿರುವ ಸ್ಪರ್ಧಿಗಳು ಕೂಡ ಇರಲಿದ್ದಾರೆ ಎನ್ನುವ ಬಗೆಗಿನ ಸುದ್ದಿ ಹರಿದಾಡುತ್ತಿದೆ.
ಸದ್ಯ ಬಂದಿರೋ ಮಾಹಿತಿ ಪ್ರಕಾರ ಬಿಗ್ ಬಾಸ್ ರನ್ನರ್ ಅಪ್ ಡ್ರೋನ್ ಪ್ರತಾಪ್ ಅವರು ʼಗಿಚ್ಚಿ ಗಿಲಿ ಗಿಲಿ ಸೀಸನ್ -3ʼ ರಿಯಾಲಿಟಿ ಶೋನಲ್ಲಿ ಸ್ಪರ್ಧಿಯಾಗಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ. ಆ ಮೂಲಕ ಹಾಸ್ಯಗಾರನಾಗಿಯೂ ಪ್ರತಾಪ್ ಅವರು ಗುರುತಿಸಿಕೊಳ್ಳಲು ಸಿದ್ಧರಾಗಿದ್ದಾರೆ.
ಇವರು ಮಾತ್ರವಲ್ಲದೆ ಫಿನಾಲೆಯಲ್ಲಿ 6ನೇ ಸ್ಥಾನವನ್ನು ಪಡೆದುಕೊಂಡ ತುಕಾಲಿ ಸಂತೋಷ್ ಹಾಗೂ ರ್ಯಾಪರ್ ಇಶಾನಿ ಕೂಡ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎನ್ನಲಾಗಿದೆ.ಈ ಬಾರಿ ಕಾರ್ಯಕ್ರಮದಲ್ಲಿ ಸಾಧುಕೋಕಿಲಾ, ಶ್ರುತಿ ಜೊತೆ ಕೋಮಲ್ ಕುಮಾರ್ ಕೂಡ ಕಾರ್ಯಕ್ರಮದ ತೀರ್ಪುಗಾರರಾಗಿ ಕಾಣಿಸಿಕೊಳ್ಳಲಿದ್ದಾರೆ. ನಿರಂಜನ್ ದೇಶಪಾಂಡೆ ಕಾರ್ಯಕ್ರಮವನ್ನು ನಿರೂಪಣೆ ಮಾಡಲಿದ್ದಾರೆ. ಇದೇ ಫೆ. 3 ರಿಂದ ಶನಿ- ಭಾನು ರಾತ್ರಿ 8 ಗಂಟೆಗೆ ಕಾರ್ಯಕ್ರಮ ಪ್ರಸಾರ ಕಾಣಲಿದೆ.