ನ್ಯೂಸ್ ನಾಟೌಟ್ : ಫೆ.14 ಈ ದಿನವನ್ನು ಪ್ರೇಮಿಗಳ ದಿನ ಎಂದು ಕರೆದರೂ , ಭಾರತ ದೇಶಕ್ಕೆ ಕರಾಳ ದಿನವೂ ಹೌದು.ಏಕೆಂದರೆ ಇದೇ ದಿನ 5 ವರ್ಷಗಳ ಹಿಂದೆ ಭಾರತೀಯ ಸೇನೆ ಭದ್ರತಾಪಡೆಗಳ ಮೇಲೆ ನಡೆದ ದಾಳಿಯಲ್ಲಿ 40 ಸಿಆರ್ಪಿಎಫ್ ಯೋಧರು ಹುತಾತ್ಮರಾಗಿದ್ದರು. ಇಡೀ ಭಾರತವೇ ಶೋಕಾಚರಣೆ ಆಚರಿಸಿ, ಮರುಕ ವ್ಯಕ್ತಪಡಿಸಿತ್ತು.
ಕರ ಬಾಂಬರ್ ಸ್ಫೋಟಕಗಳನ್ನು ತುಂಬಿದ ವಾಹನವೊಂದು ಕೇಂದ್ರೀಯ ಮೀಸಲು ಪೊಲೀಸ್ ಪಡೆಯ (CRPF) ಯೋಧರನ್ನು ಕೂರಿಸಿಕೊಂಡು ಹೋಗುತ್ತಿದ್ದ ಬಸ್ಗೆ ಡಿಕ್ಕಿ ಹೊಡೆದ ನಂತರ 40 ಸಿಆರ್ಪಿಎಫ್ ಯೋಧರು ಸಾವನ್ನಪ್ಪಿದ್ದರು. ಹಲವಾರು ಯೋಧರು (Warriors) ಗಾಯಗೊಂಡರು. ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ಅವಂತಿಪೋರಾದಲ್ಲಿ ಈ ಭಯೋತ್ಪಾದಕ ದಾಳಿ ನಡೆದಿತ್ತು.
ವರದಿಗಳ ಪ್ರಕಾರ,ವಾಹನವನ್ನು ಗುರಿಯಾಗಿಸಿಕೊಂಡು ಭದ್ರತಾ ಪಡೆಗಳ ಬೆಂಗಾವಲು ಪಡೆಯಲ್ಲಿ 70 ಕ್ಕೂ ಹೆಚ್ಚು ವಾಹನಗಳು ಇದ್ದವು. ಈ ವಾಹನವನ್ನು ಜೈಶ್-ಎ-ಮೊಹಮ್ಮದ್ ಭಯೋತ್ಪಾದಕರು ಓಡಿಸುತ್ತಿದ್ದರು. ನಂತರ ಅವರನ್ನು ಆದಿಲ್ ಅಹ್ಮದ್ ದಾರ್ ಎಂದು ಗುರುತಿಸಲಾಯಿತು. ಈ ವಾಹನವು ಸುಮಾರು 80 ಕಿಲೋ ಗ್ರಾಂಗಳಷ್ಟು ಆರ್ಡಿಎಕ್ಸ್ ಸ್ಫೋಟಕವನ್ನು ಹೊಂದಿತ್ತು. ಇದನ್ನು ಈ ಆತ್ಮಾಹುತಿ ದಾಳಿಯಲ್ಲಿ ಬಳಸಲಾಯಿತು.ಶ್ರೀನಗರ-ಜಮ್ಮು ಹೆದ್ದಾರಿಯಲ್ಲಿ ಈ ಘಟನೆ ನಡೆದಾಗ ಬೆಂಗಾವಲು ಪಡೆಯಲ್ಲಿ 2,500ಕ್ಕೂ ಹೆಚ್ಚು ಸಿಆರ್ಪಿಎಫ್ ಸಿಬ್ಬಂದಿ ಪ್ರಯಾಣಿಸುತ್ತಿದ್ದರು ಎಂದು ವರದಿಗಳು ತಿಳಿಸಿವೆ.
ಹುತಾತ್ಮರಾದ ಸಿಆರ್ಪಿಎಫ್ ಜವಾನರ ಅಧಿಕೃತ ಪಟ್ಟಿಯ ಪ್ರಕಾರ, ಹೆಚ್ಚಿನ ಸಂಖ್ಯೆಯ ಸಾವು ನೋವುಗಳು ಉತ್ತರ ಪ್ರದೇಶದಿಂದ (12) ವರದಿಯಾಗಿದೆ. ಹುತಾತ್ಮರಾದ ಸಿಆರ್ಪಿಎಫ್ ಸಿಬ್ಬಂದಿಗಳಲ್ಲಿ ನಾಲ್ವರು ಪಂಜಾಬ್ನಿಂದ ಬಂದವರು ಮತ್ತು ಐವರು ರಾಜಸ್ಥಾನದವರು. ಮಹಾರಾಷ್ಟ್ರ, ತಮಿಳುನಾಡು, ಕೇರಳ, ಬಿಹಾರ, ಒಡಿಶಾ ಮತ್ತು ಪಶ್ಚಿಮ ಬಂಗಾಳ ಮತ್ತು ಜಮ್ಮು ಮತ್ತು ಕಾಶ್ಮೀರದ ಯೋಧರು ಹುತಾತ್ಮರಾದವರಲ್ಲಿ ಸೇರಿದ್ದಾರೆ.