ನ್ಯೂಸ್ ನಾಟೌಟ್ :ಇದು ಡಿಜಿಟಲ್ ಯುಗ.ಹೀಗಾಗಿ ಎಲ್ಲವೂ ಆನ್ಲೈನ್ಮಯ ಆಗ್ಬಿಟ್ಟಿದೆ.ಬ್ಯಾಂಕ್ ಕೆಲಸಗಳಿಂದ ಹಿಡಿದು ಒಂದು ತರಕಾರಿ ತರುವುದಕ್ಕೂ ಡಿಜಿಟಲ್ ಪೇಮೆಂಟ್ಸ್ ಬಳಕೆ ಹೆಚ್ಚಿದೆ. ಹೀಗಾಗಿ ಎತ್ತ ಹೋದ್ರು ಫೋನ್ಗಳ ಅವಶ್ಯಕತೆ ಇದ್ದೇ ಇದೆ.
ಆಧಾರ್ ಕಾರ್ಡ್, ಪಡಿತರ ಚೀಟಿ, ಪಾವತಿ, ದಾಖಲಾತಿ ನೋಂದಣಿ, ಅರ್ಜಿ, ಬ್ಯಾಂಕ್ ವಿವರ ಹೀಗೆ ಹತ್ತು ಹಲವಾರು ಕೆಲಸಗಳು ಈಗ ನಡೆಯುತ್ತಿರುವುದು ಆನ್ಲೈನ್ನಲ್ಲಿ ಮಾತ್ರ. ಆನ್ಲೈನ್ ವಹಿವಾಟುಗಳು ಬಹುಸಂಖ್ಯೆಯಲ್ಲಿ ಚಾಲ್ತಿಯಲ್ಲಿರುವುದರಿಂದ ಈ ವ್ಯವಸ್ಥೆ ಈಗ ಎಲ್ಲಾ ನಾಗರಿಕರಿಗೂ ಅನುಕೂಲವೇ ಆಗಿದೆ. ಆದರೆ ವಿದ್ಯೆ ಇರುವವರಿಗೆ ಇದು ಹೆಚ್ಚು ಅನುಕೂವಾಗುತ್ತಿದೆ.
ಪಾಪ ಗ್ರಾಮೀಣ ಭಾಗದಲ್ಲಿ ವಯಸ್ಸಾದ ವೃದ್ಧರೂ ಏನೂ ತಿಳಿಯದೇ ತೊಂದರೆಗೀಡಾಗುತ್ತಿದ್ದಾರೆ. ಇದರ ಬಗ್ಗೆ ಇಂದಿಗೂ ಹೆಚ್ಚಿನ ಮಾಹಿತಿ ಇಲ್ಲ. ಇದ್ದರೂ ಅದನ್ನು ಹೇಗೆ ಅರ್ಥೈಸಿಕೊಳ್ಳಬೇಕು ಎಂಬುದು ತಿಳಿಯುತ್ತಿಲ್ಲ. ಓದಲು, ಬರೆಯಲು ಬಾರದ ವೃದ್ಧರು ನಾಡಕಛೇರಿ, ಆಧಾರ್ ಕಛೇರಿಗಳಿಗೆ ಹೋದರೆ ಭಾರಿ ಕಷ್ಟವನ್ನೇ ಎದುರಿಸಬೇಕಾಗುತ್ತದೆ.ಇದೀಗ ಇಲ್ಲೊಬ್ಬ ಹಿರಿಯರು ತಮ್ಮ ಆಧಾರ್ ಲಿಂಕ್ ಆಗಿರುವ ಫೋನ್ ತೆಗೆದುಕೊಂಡು ಬನ್ನಿ ಎಂದರೆ, ಮನೆಯಲ್ಲಿದ್ದ ಲ್ಯಾಂಡ್ ಲೈನ್ನ್ನೇ ತೆಗೆದುಕೊಂಡು ಬಂದಿದ್ದಾರೆ..!
ಆಧಾರ್ ಕೇಂದ್ರದಲ್ಲಿ ಕೆಲಸ ಮಾಡುತ್ತಿದ್ದ ಯುವತಿಯೊಬ್ಬಳು ಅಜ್ಜನಿಗೆ ನೀವು ಬರುವಾಗ ಒಟಿಪಿಗಾಗಿ ನಿಮ್ಮ ಆಧಾರ್ ಲಿಂಕ್ ಸಂಖ್ಯೆ ನೋಂದಣಿಯಾಗಿರುವ ಫೋನ್ ತನ್ನಿ ಎಂದು ಹೇಳಿ ಕಳಿಸಿದ್ದಾಳೆ. ಇದನ್ನು ಆಲಿಸಿದ ವೃದ್ಧ ತಮ್ಮ ಮನೆಯಲ್ಲಿದ್ದ ಲ್ಯಾಂಡ್ಲೈನ್ ಫೋನ್ ಅನ್ನು ನೇರವಾಗಿ ಯುವತಿಗೆ ತಂದುಕೊಟ್ಟಿದ್ದಾರೆ.ಇದ್ಯಾಕೆ ಎಂದು ಕೇಳಿದ್ರೆ, ಫೋನ್ ತರಲು ಹೇಳಿದ್ರಲ್ಲ ಎಂದು ಹೇಳಿದ್ದಾರೆ. ಇದನ್ನು ಕಂಡ ಯುವತಿ ಮತ್ತಿತರರು ನಸುನಕ್ಕಿದ್ದಾರೆ.ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಪಾಪ ಎಷ್ಟು ಮುಗ್ಧರು, ಅವರಿಗೆ ಯಾರಾದರೂ ಹೇಳಿಕೊಡಿ ಎಂದೆಲ್ಲಾ ಕಮೆಂಟ್ ಮಾಡಿ, ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.