ನ್ಯೂಸ್ ನಾಟೌಟ್ : ಪೊಲೀಸರೆಂದ್ರೆ ಶಿಸ್ತಿನಿಂದ ಇರುತ್ತಾರೆ.ಗಂಭೀರವಾಗಿರುತ್ತಾರೆ ಎಂಬುದನ್ನು ನೀವು ಕೇಳಿರುತ್ತೀರಿ.ಅದರಲ್ಲೂ ಖಾಕಿ ಕಲರ್ ಡ್ರೆಸ್ ಹಾಕಿದ್ರೆ ಅವರ ಬಳಿ ಹೋಗೋದಕ್ಕೂ ಕೆಲವರು ಭಯ ಪಡುವವರಿದ್ದಾರೆ.ಆದರೆ ಇಲ್ಲೊಂದು ಕಡೆ ಪೊಲೀಸರು ಖಾಕಿ ಡ್ರೆಸ್ ಹಾಕಿಕೊಂಡೇ ನಿಗಿನಿಗಿ ಕೆಂಡಗಳಿರುವ ಬೆಂಕಿಯಲ್ಲಿ (Fire walking ritual) ಹೆಜ್ಜೆ ಹಾಕುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ತೆಲಂಗಾಣ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ (Telangana police superstition) ಇಂತಹ ದುಸ್ಸಾಹಸಕ್ಕೆ ಕೈ ಹಾಕಿದವರು. ನಲ್ಲಗೊಂಡ ಜಿಲ್ಲೆಯ ನಾರ್ಕೆಟ್ ಪಲ್ಲಿ ಮಂಡಲದಲ್ಲಿ ವಾರ್ಷಿಕ ಚೆರುವುಗುತ್ತು ಜಾತ್ರೆಯ ಅಂಗವಾಗಿ ಸಮವಸ್ತ್ರ ಧರಿಸಿದ ಪೊಲೀಸರು ಈ ಕಾರ್ಯದಲ್ಲಿ ಭಾಗವಹಿಸಿದ್ದರು. ಗಮನಾರ್ಹವೆಂದರೆ ಈ ಘಟನೆಗೂ ತನ್ನ ಇಲಾಖೆಗೂ ಯಾವುದೇ ಸಂಬಂಧವಿಲ್ಲ ಎಂದು ತೆಲಂಗಾಣ ಪೊಲೀಸ್ ಇಲಾಖೆ ಸ್ಪಷ್ಟಪಡಿಸಿದೆ.
ನಲ್ಲಗೊಂಡ (Nalgonda) ಜಿಲ್ಲೆಯ ಪಾರ್ವತಿ ಜಡೆ ರಾಮಲಿಂಗೇಶ್ವರ ಸ್ವಾಮಿ ಜಾತ್ರೆ ಉತ್ಸವಗಳಲ್ಲಿ ಭಕ್ತರು ಅಗ್ನಿಗುಂಡದ ಮೇಲೆ ನಡೆದುಕೊಂಡು ಹೋಗುವ ಸಂಪ್ರದಾಯವಿದೆ. ಹಲವು ವರ್ಷಗಳಿಂದ ಈ ಕಾರ್ಯಕ್ರಮ ನಡೆಯುತ್ತಿದೆ. ಆದರೆ ಮೌಢ್ಯಾಚರಣೆ ನಿಲ್ಲಿಸಬೇಕಾದ ಪೊಲೀಸರೇ ಸಾಮಾನ್ಯ ಭಕ್ತರ ಜತೆಗೆ ಅಗ್ಗಿಕುಂಡದಲ್ಲಿ ಹೆಜ್ಜೆ ಹಾಕುವ ಮೂಲಕ ಚರ್ಚೆಗೆ ಆಸ್ಪದ ನೀಡಿದ್ದಾರೆ.ಈ ಬಗ್ಗೆ ಭಾರಿ ಚರ್ಚೆಗಳು ನಡಿತಿದ್ದು,ಸಮವಸ್ತ್ರ ಧರಿಸಿ ಇಂತಹ ಕಾರ್ಯಕ್ರಮದಲ್ಲಿ ಪಾಲ್ಗೊಳ್ಲೋದು ಎಷ್ಟು ಸರಿ ಎಂಬ ಪ್ರಶ್ನೆ ಎದ್ದಿದೆ.
ಚೆರುವುಗಟ್ಟು ದೇಗುಲ ಹೈದರಾಬಾದ್ನಿಂದ 60 ಕಿಲೋಮೀಟರ್ ದೂರದಲ್ಲಿದೆ. ಈ ದೇವಾಲಯವು ಬಹಳ ಪ್ರಸಿದ್ಧವಾಗಿದೆ. ಶಕ್ತಿಶಾಲಿ ಶಿವ ದೇವಾಲಯ ಇಲ್ಲಿದೆ. ಪ್ರತಿ ತಿಂಗಳ ಅಮವಾಸ್ಯೆ ರಾತ್ರಿಯಲ್ಲಿ ಜನರು ಈ ದೇವಾಲಯಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಭೇಟಿ ನೀಡುತ್ತಾರೆ. ಈ ಸ್ಥಳವನ್ನು ಅತ್ಯಂತ ಪವಿತ್ರವೆಂದು ಪರಿಗಣಿಸಲಾಗಿದೆ. ದೇಗುಲದಲ್ಲಿ ಸೇವೆ ಮಾಡುತ್ತಾ ಸ್ನಾನ ಮಾಡಿದರೆ ಪವಾಡ ನಡೆಯುತ್ತೆ ಎಂಬುದು ಜನರ ನಂಬಿಕೆ. ಮದುವೆಯಾಗದಿರುವವರು ಅಥವಾ ಮಕ್ಕಳನ್ನು ಹೊಂದಲು ಪ್ರಯತ್ನಿಸುತ್ತಿರುವವರು ಇಲ್ಲಿನ ಶಿವನಿಗೆ ಮೊರೆಹೋಗುತ್ತಾರೆ.