ನ್ಯೂಸ್ ನಾಟೌಟ್ : ೧೦ರ ಎಳೆವಯಸ್ಸಲ್ಲೇ ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿಯೇ ಸಾಧನೆ ಮಾಡಿದ ಸುಳ್ಯ ತಾಲೂಕಿನ ಹೆಮ್ಮೆಯ ಪ್ರತಿಭೆ ಸೋನಾ ಅಡ್ಕಾರ್ ಅವರಿಗೆ ‘ಸ್ವಸ್ತಿಕ್ ಕಲಾ ಪ್ರಶಸ್ತಿ’ ನೀಡಿ ಗೌರವಿಸಲಾಗಿದೆ.ಕಲೆ ಬಗ್ಗೆ ಅಪಾರ ಆಸಕ್ತಿ ಹೊಂದಿರುವ ಈ ಬಾಲಕಿ ಈಗಾಗ್ಲೇ ಭಾರತೀಯ ಕಲಾಪ್ರಕಾರ ಡ್ಯಾನ್ಸ್ , ಯೋಗ , ಹುಲಿ ವೇಷದಲ್ಲಿ ಭಾರಿ ಜನಮನ್ನಣೆ ಗಳಿಸಿದ್ದಾಳೆ.ಇದೀಗ ಬಾಲಪ್ರತಿಭೆಯನ್ನರಸಿ ಪ್ರಶಸ್ತಿ-ಸನ್ಮಾನಗಳು ಅರಸಿ ಬರುತ್ತಿವೆ.
ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ವಿಜೇತ ಸಂಸ್ಥೆ ಸ್ವಸ್ತಿಕ್ ಕಲಾ ಕೇಂದ್ರ (ರಿ) ಜಲ್ಲಿಗುಡ್ಡೆ ಬಜಾಲ್, ಮಂಗಳೂರು 20ನೇ ವರ್ಷದ ವಿಂಶತಿ ಸಾಂಸ್ಕೃತಿಕ ವೈಭವ 2024ರ ಫಿಲ್ಮಿ, ಜಾನಪದ, ಪಾಶ್ಚಾತ್ಯ,ಭಾರತೀಯ ಕಲಾಪ್ರಕಾರ ಡ್ಯಾನ್ಸ್ , ಯೋಗ , ಹುಲಿ ವೇಷದಲ್ಲಿ ಅಮೋಘ ಸಾಧನೆ ಮಾಡಿ ರಾಜ್ಯ , ರಾಷ್ಟ್ರಮಟ್ಟ, ಅಂತರಾಷ್ಟ್ರೀಯ ಮಟ್ಟದಲ್ಲಿಯೇ ಗುರುತಿಸಿಕೊಂಡಿರುವ ಈ ಬಾಲಕಿಯನ್ನು ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಈಕೆ ಜಾಲ್ಸೂರು ಗ್ರಾಮದ ಅಡ್ಕಾರ್ ಮನೆತನದ ಶರತ್ ಅಡ್ಕಾರ್ ಹಾಗೂ ಶೋಭಾ ಶರತ್ ಅಡ್ಕಾರ್ ರವರ ಸುಪುತ್ರಿ. ಈಕೆ ಸುಳ್ಯದ ಸೈಂಟ್ ಜೋಸೆಫ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ 5ನೇ ತರಗತಿಯಲ್ಲಿ ಓದುತ್ತಿದ್ದು,ನೃತ್ಯ ಮತ್ತು ಹುಲಿವೇಷ ಕುಣಿತವನ್ನು ತರುಣ್ ರಾಜ್ ಮಂಗಳೂರು ಹಾಗೂ ಯೋಗವನ್ನು ಸಂತೋಷ್ ಮುಂಡೊಕಜೆಯವರಲ್ಲಿ ಕಲಿಯುತ್ತಿದ್ದಾಳೆ.ಈವರೆಗೆ 10ಕ್ಕಿಂತಲೂ ಹೆಚ್ಚು ಕಡೆ ಈಕೆಯ ಪ್ರತಿಭೆಯನ್ನು ಗುರುತಿಸಿ ಸನ್ಮಾನಿಸಿ ಗೌರವಿಸಲಾಗಿದೆ.