ಸುಳ್ಯ:ಕೆ.ವಿ.ಜಿ. ಕಾನೂನು ಕಾಲೇಜು ಮಹಾವಿದ್ಯಾಲಯದಲ್ಲಿ ಫೆ. 15ರಂದು ವಾರ್ಷಿಕ ಕ್ರೀಡೋತ್ಸವ ನಡೆಯಿತು.ಕಾರ್ಯಕ್ರಮದ ಉದ್ಘಾಟನೆಯನ್ನು ನೆಹರೂ ಸ್ಮಾರಕ ಪದವಿ ಕಾಲೇಜಿನ ನಿವೃತ್ತ ದೈಹಿಕ ಶಿಕ್ಷಕ ರಾಧಾಕೃಷ್ಣ ಮಾಣಿಬೆಟ್ಟು ನೆರವೇರಿಸಿದರು.
ಬಳಿಕ ಮಾತನಾಡಿದ ಅವರು “ಸದೃಢ ದೈಹಿಕ ಹಾಗೂ ಮಾನಸಿಕ ಬೆಳವಣಿಗೆಗೆ ಕ್ರೀಡೆ, ವ್ಯಾಯಾಮ ಹಾಗೂ ಯೋಗಾಸನ ಅತೀ ಅವಶ್ಯಕ” ಎಂದರು.ಈ ಸಂದರ್ಭ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ A.O.L.E (R) ಇದರ ಅಧ್ಯಕ್ಷ ಡಾ| ಕೆ.ವಿ ಚಿದಾನಂದರು ಮಾತನಾಡಿ “ಆರೋಗ್ಯಕರ ಜೀವನಕ್ಕೆ ಪ್ರತಿದಿನ ಕ್ರೀಡೆಯಲ್ಲಿ ಭಾಗವಹಿಸುವುದು ಮುಖ್ಯ” ಎಂದರು. ಈ ವೇಳೆ ಪಥಸಂಚಲನದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಎಲ್ಲಾ ನಾಲ್ಕು ತಂಡಗಳಿಗೆ ನಗದು ಬಹುಮಾನ ನೀಡಿ ಪ್ರೋತ್ಸಾಹಿಸಲಾಯಿತು.
ಕಾರ್ಯಕ್ರಮದ ಸಂಯೋಜಕ ಲಕ್ಷೀಕಾಂತ್ ಸ್ವಾಗತಿಸಿ,ಪ್ರಾಂಶುಪಾಲ ಉದಯಕೃಷ್ಣ ಬಿ.ವಂದಿಸಿದರು. ವಿದ್ಯಾರ್ಥಿನಿಯರಾದ ಶೃತಿ ರಾಧಾಕೃಷ್ಣನ್, ಚಂದನಾ ಪಿ.ಸ್, ರಮ್ಯ ಕೆ.ಎಮ್ ಪ್ರಾರ್ಥಿಸಿದರು. ವೃಂದಾ ಪ್ರಕಾಶ್ ಕಾರ್ಯಕ್ರಮ ನಿರೂಪಿಸಿದರು.ಕಾಲೇಜಿನ ಬೋಧಕ, ಬೋಧಕೇತರ ವೃಂದದವರು ಉಪಸ್ಥಿತರಿದ್ದರು.