ನ್ಯೂಸ್ ನಾಟೌಟ್: ಪ್ರತಿಷ್ಠಿತ ಕೆ.ವಿ.ಜಿ. ವಿದ್ಯಾಸಂಸ್ಥೆಗಳಲ್ಲೊಂದಾದ ಸುಳ್ಯದ ನೆಹರೂ ಮೆಮೋರಿಯಲ್ ಪದವಿ ಪೂರ್ವ ಕಾಲೇಜಿನ ( N.M.P.U.C) ವಿದ್ಯಾರ್ಥಿ JEE ಮೈನ್ಸ್ ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕ ಪಡೆದು JEE ಅಡ್ವಾನ್ಸ್ ಪರೀಕ್ಷೆಗೆ ಅರ್ಹತೆ ಪಡೆದುಕೊಂಡಿದ್ದಾರೆ.
ವಿದ್ಯಾರ್ಥಿಯ ಹೆಸರು ಸೃಜನ್ ಕೆ.ಎಲ್ (18 ವರ್ಷ). ಇವರು ಸುಳ್ಯದ ಹಳೆಗೇಟಿನ ನಿವಾಸಿಯಾಗಿದ್ದಾರೆ. ಕೊಡಗಿನ ಭಾಗಮಂಡಲದ ತಣ್ಣಿಮನಿಯ ಉದ್ಯಮಿ ಲೋಕೇಶ್ ಕೆ.ಎಸ್ ಹಾಗೂ ಪುಷ್ಪಲತಾ ದಂಪತಿ ಪುತ್ರ.
ಸೃಜನ್ ಕೆ.ಎಲ್ N.M.P.U.C ಯಲ್ಲಿ ದ್ವಿತೀಯ ವರ್ಷದ ವಿಜ್ಞಾನ ಅಧ್ಯಯನ ನಡೆಸುತ್ತಿದ್ದಾರೆ. ಜೆ.ಇ.ಇ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿ ಅಡ್ವಾನ್ಸ್ ಪರೀಕ್ಷೆ ಬರೆಯಲು ಅರ್ಹರಾಗಿದ್ದಾರೆ. ಮುಂದೆ ಏರೋ ಸ್ಪೇಸ್ ಇಂಜಿನಿಯರಿಂಗ್ ಓದುವ ಗುರಿ ಹೊಂದಿದ್ದಾರೆ. ಸಾಧಕ ವಿದ್ಯಾರ್ಥಿಯನ್ನು ಸಂಸ್ಥೆ ವತಿಯಿಂದ ಅಭಿನಂದಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.