ನ್ಯೂಸ್ ನಾಟೌಟ್: ಪ್ರವಾಸೋದ್ಯಮವಾಗಿ ಬೆಳಸಬೇಕು ಎನ್ನುವ ಕನಸಿನೊಂದಿಗೆ ಭರ್ಜರಿ ಬೋಟಿಂಗ್ ಉತ್ಸವವನ್ನು ಸುಳ್ಯ ತಾಲೂಕಿನ ಅರಂಬೂರಿನಲ್ಲಿ ಆಯೋಜಿಸಲಾಗಿದೆ. ಮಂಗಳವಾರ ಫೆಬ್ರವರಿ 13ಕ್ಕೆ ಬೋಟಿಂಗ್ ಉತ್ಸವಕ್ಕೆ ಅರಂಬೂರಿನ ಪಯಸ್ವಿನಿ ನದಿಯ ತೂಗು ಸೇತುವೆ ಬಳಿ ಚಾಲನೆ ನೀಡಲಾಯಿತು.
ಕಾರ್ಲ ಕರಾವಳಿ ಅಡ್ವೆಂಚರ್ಸ್ ಕಾರ್ಕಳ ಪ್ರಾಯೋಜಕತ್ವದಲ್ಲಿ, ಜೆಸಿಐ ಕಾರ್ಕಳ, ಜೆಸಿಐ ಸುಳ್ಯ ಪಯಸ್ವಿನಿ, ಜೆಸಿಐ ಸುಳ್ಯ ಸಿಟಿ, ಜೆಸಿಐ ಕಡಬ, ಜೆಸಿಐ ಪಂಜ ಪಂಚಶ್ರೀ, ರೋಟರಿ ಕ್ಲಬ್ ಸುಳ್ಯ, ರೋಟರಿ ಕ್ಲಬ್ ಸುಳ್ಯ ಸಿಟಿ, ಶ್ರೀ ಮೂಕಾಂಬಿಕಾ ಭಜನಾ ಮಂದಿರ ಅರಂಬೂರು, ಸುವರ್ಣ ಮಹೋತ್ಸವ ಸಮಿತಿ ಅರಂಬೂರು ಇವರ ಸಹಭಾಗಿತ್ವದಲ್ಲಿ ಬೋಟಿಂಗ್ ಉತ್ಸವಕ್ಕೆ ಚಾಲನೆ ನೀಡಲಾಯಿತು.
ಅರಂಬೂರು ಭಜನಾ ಮಂದಿರದ ಸುವರ್ಣ ಮಹೋತ್ಸವ ಸಮಿತಿಯ ಗೌರವಾಧ್ಯಕ್ಷ ಮತ್ತು ಕೃಷ್ಣ ಫ್ಲೈವುಡ್ ಮಾಲೀಕ ಕೃಷ್ಣ ಕಾಮತ್ ಚಾಲನೆ ನೀಡಿ ಶುಭ ಹಾರೈಸಿದರು. ಸ್ಥಳೀಯ ಹಲವಾರು ಮಂದಿ ಸ್ಪೀಡ್ ಬೋಟ್ನಲ್ಲಿ ಕುಳಿತು ಬೋಟಿಂಗ್ ಖುಷಿಯನ್ನು ಅನುಭವಿಸಿದರು. ಆಲೆಟ್ಟಿ ಗ್ರಾಮಪಂಚಾಯತ್ ಸದಸ್ಯ ಸುದೇಶ್ ಅರಂಬೂರು, ರತೀಶ್ ಅರಂಬೂರು, ಜೆಸಿಐ ಕಾರ್ಕಳ ಮತ್ತು ಕಾರ್ಲ ಕರಾವಳಿ ಅಡ್ವೆಂಚರ್ಸ್ ಇದರ ಮಾಲೀಕ ಪ್ರಚಿತ್ ಕುಮಾರ್ ಕಾರ್ಕಳ, ಜೆಸಿಐ ಸುಳ್ಯ ಪಯಸ್ವಿನಿ (ರಿ) ಅಧ್ಯಕ್ಷ ಗುರುಪ್ರಸಾದ್ ನಾಯಕ್, ಜೆಸಿಐ ಸುಳ್ಯ ಪಯಸ್ವಿನಿ (ರಿ) ಉಪಾಧ್ಯಕ್ಷೆ ಶಸ್ಮಿ ಭಟ್, ಜೆಸಿಐ ಸುಳ್ಯ ಸಿಟಿ ಇದರ ಅಧ್ಯಕ್ಷ ವಿಷ್ಣುಪ್ರಕಾಶ್ ನಾರ್ಕೋಡು, ಜೆಸಿ ಗುರುರಾಜ್, ಕೆ.ಎನ್. ಮುಸ್ತಾಫ ಮಲೆನಾಡು ಚಾರಿಟೇಬಲ್ ಟ್ರಸ್ಟ್ ಗೌರವಾಧ್ಯಕ್ಷ, ಕರ್ಣಾಟಕ ಕೆವಿಜಿ ಬ್ಯಾಂಕ್ ಮ್ಯಾನೇಜರ್ ಸುಭಾಷ್, ಗ್ರಂಥಪಾಲಕಿ ಸಾವಿತ್ರಿ ಕನೆಮರಡ್ಕ, ಹೆಮ್ಮರ ಗ್ರೂಪ್ ಮಾಲೀಕ ಉದಯಕುಮಾರ್ ಅರಂಬೂರು, ಶರತ್, ಜೆಸಿ ಕಾರ್ಯದರ್ಶಿ ಪ್ರಕಾಶ್, ಜೆಸಿ ಮಂಜುನಾಥ್, ಜೆಸಿ ಅಭಿಷೇಕ್ ಗುತ್ತಿಗಾರು ಮತ್ತು ಸ್ಥಳೀಯರು ಉಪಸ್ಥಿತರಿದ್ದರು.
ಕಾರ್ಲ ಕರಾವಳಿ ಅಡ್ವೆಂಚರ್ಸ್ ಬೋಟಿಂಗ್ ಫೆಬ್ರವರಿ 13ರಿಂದ ಫೆಬ್ರವರಿ 18ರ ತನಕ ಬೆಳಗ್ಗೆ 7ರಿಂದ ಅಪರಾಹ್ನ 6:30ರವರೆಗೆ ಅರಂಬೂರು ತೂಗುಸೇತುವೆ ಬಳಿಯಲ್ಲಿ ನಡೆಯಲಿದೆ. ಸುಳ್ಯದ ಜನತೆ ಇದರ ಪ್ರಯೋಜನವನ್ನು ಪಡೆದುಕೊಳ್ಳಬಹುದು.