ನ್ಯೂಸ್ ನಾಟೌಟ್ : ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಉದ್ಘಾಟನೆಗೊಂಡಿದೆ. ಶ್ರೀರಾಮ ವಿರಾಜಮಾನನಾಗಿ ಕೆಲವು ದಿನಗಳಷ್ಟೇ ಕಳೆದಿದೆ. ಇನ್ನು ಈ ಬಾಲಕ ರಾಮನ ಮೂರ್ತಿ ನಿರ್ಮಿಸಿದ ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ ಇಡೀ ವಿಶ್ವದಾದ್ಯಂತ ವೈರಲಾದರು..
ಆ ಮುದ್ದು ಬಾಲಕ ರಾಮನ ಮೂರ್ತಿಯು ಎಲ್ಲರನ್ನು ಆಕರ್ಷಿಸಿತ್ತು ಮಾತ್ರವಲ್ಲ ಆ ಮೂರ್ತಿಯ ಕಣ್ಣುಗಳು ಹೊಳೆಯುವಂತಿದೆ.ಇದೀಗ ಅದೇ ಶ್ರೀರಾಮನನ್ನು ಹೋಲುವ ಪುರಾತನ ವಿಷ್ಣು ಮೂರ್ತಿಯೊಂದು ಪತ್ತೆಯಾಗಿದೆ..!ಅಂದ್ರೆ ನಿಮ್ಗೆ ಅಚ್ಚರಿಯಾಗದಿರದು.. ಹೌದು,ಖಂಡಿತವಾಗಲೂ , ಕಾಕತಾಳಿಯವೋ ಏನೋ .. ರಾಯಚೂರು ಜಿಲ್ಲೆಯ ದೇವಸೂಗುರು ಬಳಿಯ ಕೃಷ್ಣಾ ನದಿಯಲ್ಲಿ ಪುರಾತನ ಮೂರ್ತಿಗಳು ಪತ್ತೆಯಾಗಿ ಎಲ್ಲರನ್ನು ಆಶ್ಚರ್ಯಚಕಿತರನ್ನಾಗಿಸಿದೆ. ಸೇತುವೆ ಕಾಮಗಾರಿ ನಡೆಯುತ್ತಿದ್ದಾಗ ಈ ವಿಸ್ಮಯ ಕಂಡು ಜನ ಸಾಗರೋಪಾದಿಯಲ್ಲಿ ಬಂದು ಈ ದೃಶ್ಯ ನೋಡಿ ಪುಳಕಿತರಾಗುತ್ತಿದ್ದಾರೆ.
ಇದೀಗ ಸದ್ಯ ಆ ವ್ಯಾಪ್ತಿಯಲ್ಲಿ ಈ ಬಗ್ಗೆ ಚರ್ಚೆಗಳು ಶುರುವಾಗಲಾರಂಭಿಸಿವೆ.ವಿಷ್ಣುವಿನ ಮೂರ್ತಿ ಕಂಡು ಭಕ್ತರು ಪುಳಕಿತರಾದರೂ ಕೂಡ ಇದು ಇತ್ತೀಚಿಗೆ ಅಯೋಧ್ಯೆಯಲ್ಲಿ ಪ್ರತಿಷ್ಠಾಪನೆಯಾದ ಶ್ರೀರಾಮನ ಮೂರ್ತಿಯನ್ನು ಹೋಲುತ್ತದೆ ಅನ್ನೋದು ಭಕ್ತರ ನಂಬಿಕೆ.ಆದರೆ ಇದು ಪ್ರಾಚೀನ ಮೂರ್ತಿಯಾಗಿದ್ದು, ಅಯೋಧ್ಯೆಯಲ್ಲಿ ಬಾಲಕ ರಾಮ ನಿಂತ ಭಂಗಿಯಲ್ಲಿದೆ ಎಂದು ಹೇಳಲಾಗಿದೆ. 2 ಕೈಗಳಿದ್ದು, ಒಂದರಲ್ಲಿ ಬಿಲ್ಲು, ಮತ್ತೊಂದರಲ್ಲಿ ಬಾಣ ಹಿಡಿದು ನಿಂತಂತಿದೆ.
ಇನ್ನು ಶ್ರೀರಾಮನ ಸುತ್ತ ಶ್ರೀ ಮಹಾವಿಷ್ಣುವಿನ ದಶಾವತಾರದ ಚಿಕ್ಕ ವಿಗ್ರಹಗಳನ್ನು ಕೆತ್ತಲಾಗಿತ್ತು.ಇದೀಗ ಕೃಷ್ಣಾ ನದಿಯಲ್ಲಿ ಸಿಕ್ಕ ವಿಷ್ಣುವಿನ ವಿಗ್ರಹವೂ ಅದಕ್ಕೆ ಹೋಲಿಕೆಯಾಗುತ್ತಿದೆ. ಈ ವಿಗ್ರಹದ ಮೇಲೂ ದಶಾವತಾರದ ಶಿಲ್ಪಗಳಿವೆ.ಇನ್ನು ನದಿಯಲ್ಲಿ ಶಿವ ಲಿಂಗ ಕೂಡ ಸಿಕ್ಕಿದೆ. ವಿಗ್ರಹಗಳನ್ನು ಸುರಕ್ಷಿತವಾಗಿ ನದಿಯಿಂದ ಸಿಬ್ಬಂದಿ ಹೊರತೆಗೆದಿದ್ದು, ಕೂಡಲೇ ಸ್ಥಳೀಯ ಆಡಳಿತಕ್ಕೆ ಮಾಹಿತಿಯನ್ನು ನೀಡಿದ್ದಾರೆ.