ನ್ಯೂಸ್ ನಾಟೌಟ್ : ಡಿಸಿಎಂ ಡಿಕೆ ಶಿವಕುಮಾರ್ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳುತ್ತಿದ್ದ ಸಂದರ್ಭದಲ್ಲಿ ಜನರು ಜೈ ಶ್ರೀ ರಾಮ ಎಂದು ಘೋಷಣೆ ಕೂಗಿದ ಘಟನೆ ಬಗ್ಗೆ ವರದಿಯಾಗಿದೆ.ಸುತ್ತೂರು ಜಾತ್ರಾ ಮಹೋತ್ಸವ ಕಾರ್ಯಕ್ರಮದ ವೇದಿಕೆಗೆ ಬರುತ್ತಿದ್ದಂತೆ ಡಿಕೆ ಶಿವಕುಮಾರ್ ಜನರತ್ತ ಕೈ ಬೀಸಿದರು. ಈ ವೇಳೆ ಒಂದು ಗುಂಪು ಜೋರಾಗಿ ಜೈಶ್ರೀರಾಮ ಎಂದು ಘೋಷಣೆ ಕೂಗಿದೆ.
ಬಳಿಕ ಭಾಷಣಕ್ಕೆ ಡಿಕೆ ಶಿವಕುಮಾರ್ ತೆರಳುವ ವೇಳೆಯಲ್ಲಿಯೂ ಕೂಡ ಯುವಕರ ಗುಂಪು ಮತ್ತೆ ಜೈ ಶ್ರೀರಾಮ ಎಂದು ಕೂಗಿದೆ. ಇದನ್ನು ಕೇಳಿಸಿಕೊಂಡ ಡಿಕೆ ಶಿವಕುಮಾರ್ ಅವರು ನಾನು ಭಾಷಣ ಶುರು ಮಾಡಬಹುದಾ? ಇನ್ಯಾವುದೇ ಜೈಕಾರ ಇದೆಯಾ ಎಂದು ಹೇಳಿದರು.ಬಳಿಕ ಭಾಷಣ ಆರಂಭ ಮಾಡಿದರು.
ಧಾರ್ಮಿಕ ಚಟುವಟಿಕೆಗಳ ಜತೆಗೆ ಜನರಿಗೆ ಹೊಸ ವಿಚಾರಗಳನ್ನೂ ಜಾತ್ರೆ ಮೂಲಕ ತಿಳಿಸುವ ಕಾರಣದಿಂದಲೇ ಹತ್ತೂರಿಗಿಂತ ಸುತ್ತೂರು ಜಾತ್ರೆ ಉತ್ತಮ ಎನ್ನುವ ಮಾತು ಜನಜನಿತವಾಗಿದೆ ಎಂದು ಡಿಕೆ ಶಿವಕುಮಾರ್ ಹೇಳಿದರು.ಮೈಸೂರು ಮಾತ್ರವಲ್ಲದೇ ಕರ್ನಾಟಕದ ನಾನಾ ಭಾಗ, ಹೊರ ರಾಜ್ಯ, ದೇಶಗಳಲ್ಲೂ ಶಿಕ್ಷಣ ಸಂಸ್ಥೆಗಳ ಮೂಲಕ ಸುತ್ತೂರು ಮಠ ಜನರ ಹೃದಯದೊಂದಿಗೆ ಬೆಸೆದುಕೊಂಡಿದೆ ಎಂದು.ಸುಮಾರು ಹತ್ತು ಶತಮಾನಗಳ ಗತ ಇತಿಹಾಸ ಹೊಂದಿರುವ ಸುತ್ತೂರು ಮಠವು ತ್ರಿವಿಧ ದಾಸೋಹದ ಮೂಲಕ ಸಾಮಾಜಿಕ ಕಾರ್ಯದಲ್ಲಿ ತೊಡಗಿಕೊಂಡಿರುವುದು ಶ್ಲಾಘನೀಯ ಎಂದು ಡಿಕೆ ಶಿವಕುಮಾರ್ ಹೇಳಿದರು.ಇದೇ ಕಾರ್ಯಕ್ರಮದಲ್ಲಿ ಸುತ್ತೂರು ಮಠದ ಶ್ರೀಗಳು, ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಹಾಗೂ ಬಿಜೆಪಿ ನಾಯಕ ಸಿಟಿ.ರವಿ ಪಾಲ್ಗೊಂಡಿದ್ದರು.