ನ್ಯೂಸ್ ನಾಟೌಟ್ : ಸಿಎಂ ಸಿದ್ದರಾಮಯ್ಯ ಮೊದಲ ಪರಿಪೂರ್ಣ ಬಜೆಟ್ ಮಂಡಿಸುತ್ತಿದ್ದು. ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸುತ್ತಿರುವ 15ನೇ ಆಯವ್ಯಯ ಇದಾಗಿದೆ. ಲೋಕಸಭಾ ಚುನಾವಣೆ ಸನ್ನಿಹಿತವಾಗಿರುವುದರಿಂದ ಈ ಬಜೆಟ್ ಮೇಲೆ ರಾಜ್ಯದ ಜನರ ನಿರೀಕ್ಷೆ ಅಪಾರವಿದ್ದು, ಈಗಾಗಲೇ ಬಜೆಟ್ನಲ್ಲಿ ವಿವಿಧ ಇಲಾಖೆಗಳಿಗೆ ಎಷ್ಟು ಅನುದಾನ ಹಂಚಿಕೆ ಮಾಡಲಾಗಿದೆ ಎಂಬ ಲೆಕ್ಕಾಚಾರ ಹೊರ ಬಿದ್ದಿದೆ.
ಅಳೆದು ತೂಗಿ ಲೆಕ್ಕಾಚಾರ ಮಂಡಿಸುತ್ತಿರುವ ಸಿದ್ದರಾಮಯ್ಯ ಐದು ಗ್ಯಾರಂಟಿ ಯೋಜನೆಗೆ 52 ಸಾವಿರ ಕೋಟಿ ಮೀಸಲಿಟ್ಟಿದ್ದಾರೆ ಎಂಬುವುದು ಉಲ್ಲೇಖನೀಯ. ಒಟ್ಟು 3,71, 383 ಕೋಟಿ ರೂ. ಗಾತ್ರದ ಈ ಬಜೆಟ್ನಲ್ಲಿ ಯಾವ ಇಲಾಖೆಗೆ ಎಷ್ಟೆಷ್ಟು ಸಿಕ್ಕಿದೆ ಎಂಬ ಮಾಹಿತಿ ಇಲ್ಲಿದೆ. ವಿವಿಧ ಇಲಾಖೆಗಳಿಗೆ ಅನುದಾನ ಹಂಚಿಕೆ
- ಶಿಕ್ಷಣ- 44422ಕೋಟಿ
- ಮಹಿಳಾ ಮತ್ತು ಮಕ್ಕಳ ಕಲ್ಯಾಣ-34409ಕೋಟಿ
- ಇಂಧನ-23159 ಕೋಟಿ
- ಗ್ರಾಮೀಣಾಭಿವೃದ್ಧಿ-211600 ಕೋಟಿ
- ಒಳಾಡಳಿತ ಸಾರಿಗೆ-19777 ಕೋಟಿ
- ನೀರಾವರಿ-19179 ಕೋಟಿ
- ನಗರಾಭಿವೃದ್ಧಿ -18155 ಕೋಟಿ
- ಕಂದಾಯ-16170 ಕೋಟಿ
- ಆರೋಗ್ಯ -15145 ಕೋಟಿ
- ಸಮಾಜ ಕಲ್ಯಾಣ-13334 ಕೋಟಿ
- ಲೋಕೋಪಯೋಗಿ-10424 ಕೋಟಿ
- ಆಹಾರ ಮತ್ತು ನಾಗರೀಕ ಪೂರೈಕೆ-9963 ಕೋಟಿ
- ಕೃಷಿ ತೋಟಗಾರಿಕೆ-6688 ಕೋಟಿ
- ಪಶುಸಂಗೋಪನೆ-3307 ಕೋಟಿ
- ಇತರೆ-124593 ಕೋಟಿ ಹಂಚಿಕೆ
ಲೋಕಸಭೆ ಚುನಾವಣೆ ಹೊಸ್ತಿಲಲ್ಲಿ ಸಿದ್ದರಾಮಯ್ಯ ಅವರ ಬಜೆಟ್ ಮೇಲು ಸಾಕಷ್ಟು ನಿರೀಕ್ಷೆಗಳು ಹುಟ್ಟಿಸಿವೆ. 2024-25ನೇ ಸಾಲಿನ ಬಜೆಟ್ನಲ್ಲಿ ಪಂಚ ಗ್ಯಾರಂಟಿ ವೆಚ್ಚದ ಮಧ್ಯೆ ಅಭಿವೃದ್ಧಿಗೆ ವೇಗ ಕೊಡುವ ಅನಿವಾರ್ಯತೆ ಇದೆ. ಇತ್ತ ನೆಗುದಿಗೆ ಬಿದ್ದಿದ್ದ ನೀರಾವರಿ ಯೋಜನೆಗಳು, ಸರ್ಕಾರಿ ನೌಕರರು, ರೈತರು ಸೇರಿದಂತೆ ವಿವಿಧ ವಲಯಗಳಿಂದ ಭಾರಿ ನಿರೀಕ್ಷೆ ವ್ಯಕ್ತವಾಗಿದೆ. ಇತ್ತ ಹೆಚ್ಚು ಬಹುಮತದಿಂದ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಮುಂಬರುವ ಲೋಕಸಭಾ ಚುಣಾವಣೆಯಲ್ಲಿ ಹೆಚ್ಚು ಸ್ಥಾನಗಳನ್ನ ಗೆಲ್ಲುವ ತವಕದಲ್ಲಿರು ರಾಜ್ಯ ಆಡಳಿತಾರೂಢ ಕಾಂಗ್ರೆಸ್ ಜನರನ್ನು ಸೆಳೆಯಲು ಹಲವು ತಂತ್ರಗಳನ್ನು ಮಾಡುತ್ತಿದೆ. ಹೀಗಾಗಿ ಇಂದು ಸಿದ್ದರಾಮಯ್ಯ ಅವರು ಬೆಳಗ್ಗೆ 10.15ಕ್ಕೆ ಮಂಡಿಸುತ್ತಿರುವ 15ನೇ ಬಜೆಟ್ ಸಾಕಷ್ಟು ಮಹತ್ವದ್ದಾಗಿದೆ.