ನ್ಯೂಸ್ ನಾಟೌಟ್: ಇಂದು ರಾಜ್ಯಾದ್ಯಾಂತ ರವಿಕೆ ಪ್ರಸಂಗ ಕನ್ನಡ ಸಿನಿಮಾ(ಫೆ.16ರಂದು ಶುಕ್ರವಾರ) ತೆರೆ ಕಂಡಿದೆ.ಮಹಿಳಾ ಪ್ರದಾನ ಚಿತ್ರ ಇದಾಗಿದ್ದು,ಹಲವು ನಿರೀಕ್ಷೆಗಳನ್ನು ಹುಟ್ಟು ಹಾಕಿತ್ತು.ಇದೀಗ ಈ ಚಿತ್ರಕ್ಕೆ ಸಿನಿ ಪ್ರಿಯರಿಂದ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ.
ಪ್ರತಿಯೊಬ್ಬ ಹೆಣ್ಣುಮಕ್ಕಳಿಗೆ ಸೀರೆ ಉಡೋದಂದ್ರೆ ಇಷ್ಟ. ಹೀಗಾಗಿ ಸೀರೆ ಅಂದ ಮೇಲೆ ರವಿಕೆಯನ್ನು ಯಾವ ರೀತಿ ಹೊಲಿಸೋದು, ಹೇಗಿದ್ದರೆ ಚೆನ್ನ ಎಂದೆಲ್ಲಾ ಕನಸು ಕಾಣುತ್ತಿರುತ್ತಾಳೆ.ಸೀರೆ ಉಟ್ಟ ನಾರಿ ಲಕ್ಷಣವಾಗಿ ಕಾಣೋದೇ ಆಕೆಯ ರವಿಕೆಯಿಂದ.ಹೀಗಾಗಿ ಆಕೆ ರವಿಕೆ ಮೇಲೆ ವಿಶೇಷ ಪ್ರೀತಿ ಹೊಂದಿರುತ್ತಾಳೆ.
ಸೀರೆ ತಂದ ಬಳಿಕ ಟೈಲರ್ ಬಳಿ ಹೋಗಿ ಅದರ ಅಳತೆ ಸರಿಯಾಗಿರಬೇಕು ಎಂದು ಸಾಕಷ್ಟು ಸಲ ಟೈಲರ್ ಜತೆ ಚರ್ಚಿಸುತ್ತಾಳೆ.ಕೊನೆಗೆ ಟೈಲರ್ ಮಾಡಿದ ಎಡವಟ್ಟಿನಿಂದಾಗಿ ಆಕೆಯ ರವಿಕೆ ಮೇಲೆ ಇಟ್ಟಿದ್ದ ಕನಸು ನುಚ್ಚು ನೂರಾಗುತ್ತೆ.ಮುಂದೆ ಏನೆಲ್ಲ ತಿರುವುಗಳನ್ನು ಪಡೆದುಕೊಳ್ಳುತ್ತೆ ಅನ್ನೋದೇ ಈ ಚಿತ್ರದ ಕಥಾ ಹಂದರವಾಗಿದೆ.ತುಳು ನಾಡಿನಲ್ಲಿಯೇ ಈ ಚಿತ್ರದ ಶೂಟಿಂಗ್ ನಡೆದಿದ್ದು, ತುಳುನಾಡಿನವರೇ ಆದ ಬಿಗ್ ಬಾಸ್ ಖ್ಯಾತಿಯ , ಬ್ರಹ್ಮಗಂಟು ಧಾರಾವಾಹಿ ನಟಿ ಗೀತಾ ಭಾರತಿ ಭಟ್ ಈ ಚಿತ್ರದಲ್ಲಿ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ.ಇನ್ನು ನ್ಯಾಯಾಧೀಶೆಯ ಪಾತ್ರದಲ್ಲಿ ಸುಮನ್ ರಂಗನಾಥ್ ಕಾಣಿಸಿಕೊಂಡಿದ್ದು,ಚಿತ್ರಕ್ಕೆ ಹೊಸ ಮೆರುಗು ಬಂದಿದೆ.
ಒಟ್ಟಾರೆ, ಮಹಿಳೆ ಹಾಗೂ ಟೈಲರ್ ನಡುವೆ ರವಿಕೆಗಾಗಿ ನಡೆಯುವ ಮುಖ್ಯ ವಿಷಯವೇ “ರವಿಕೆ ಪ್ರಸಂಗ”. ಈ ಬಗ್ಗೆ ಜನ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಒಳ್ಳೆಯ ಚಿತ್ರವೆನ್ನುವ ಅಭಿಪ್ರಾಯನ್ನೇ ನೀಡಿದ್ದಾರೆ.ಈ ಚಿತ್ರದ ಸಂಭಾಷಣೆ ಮಂಗಳೂರು ಕನ್ನಡದಲ್ಲಿದ್ದು, ಪ್ರೇಕ್ಷಕರಿಗೆ ಒಂಚೂರು ಬೋರಾಗದ ರೀತಿಯಲ್ಲಿ ಕಥೆಯನ್ನು ಹೆಣೆಯಲಾಗಿದೆ ಎಂದು ಹೇಳಿದ್ದಾರೆ.ಸಾನ್ವಿಯಾಗಿ ಗೀತಾ ಭಾರತಿ ಭಟ್ ಅಭಿನಯದ ಬಗ್ಗೆ ಎರಡು ಮಾತಿಲ್ಲವೆಂದೇ ಹೇಳಬಹುದು. ದೃಷ್ಟಿ ಸಂಸ್ಥೆಯ ನಿರ್ಮಾಣದಲ್ಲಿ ಮೂಡಿಬಂದಿರುವ ಕನ್ನಡದ ಹೊಸ ಮನರಂಜನಾತ್ಮಕ ಚಿತ್ರ “ರವಿಕೆ ಪ್ರಸಂಗ” ಚಿತ್ರದುದ್ದಕ್ಕೂ ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುವಲ್ಲಿ ಯಶಸ್ವಿಯಾಗಿದೆ ಎಂದು ಹೇಳ್ಕೊಂಡಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿಯೂ ಚಿತ್ರದ ಬಗ್ಗೆ ಪಾಸಿಟಿವ್ ಆಗಿಯೇ ಜನ ಮಾತಾನಾಡಿಕೊಳ್ಳುತ್ತಿದ್ದಾರೆ. ಈ ಬಗ್ಗೆ ವ್ಯಕ್ತಿಯೊಬ್ಬರು ಟ್ವಿಟ್ಟರ್ನಲ್ಲಿ ʻದಕ್ಷಿಣ ಕನ್ನಡದ ಭಾಷೆ, ಸಂಸ್ಕೃತಿ ಮತ್ತು ಜೀವನ ಶೈಲಿಯ ಸಾರದೊಂದಿಗೆ ಸೊಗಸಾಗಿ ಮೂಡಿ ಬಂದಿದೆʼʼ ಎಂದು ಹೇಳಿದ್ದಾರೆ.ʻವಿವಾಹದ ಸುತ್ತ ಉಂಟಾಗುವ ಕೌಟುಂಬಿಕ ಒತ್ತಡ ಹೀಗೆ ಅನೇಕ ವಿಚಾರಗಳ ಸಂದೇಶವಿದೆʼʼ ಎಂದು ಮತ್ತೊಬ್ಬರು ಬರೆದುಕೊಂಡಿದ್ದಾರೆ.