ನ್ಯೂಸ್ ನಾಟೌಟ್ : ಸಾಮಾನ್ಯವಾಗಿ ಸಭೆ ನಡೆಯೋ ಹೊತ್ತಿಗೆ ತನ್ನ ಪರ ಘೋಷಣೆ ಕೂಗದೇ ಇತರರ ಪರ ಘೋಷಣೆ ಕೂಗಿದಾಗ ಬಂದ ಅತಿಥಿಗಳಿಗೆ ಇರಿಸು ಮುರುಸಾಗೋದು ಸಾಮಾನ್ಯ.ಆದರೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಏನು ಮಾಡಿದ್ರು ಗೊತ್ತಾ? ನರೇಂದ್ರ ಮೋದಿ ಪರ ಘೋಷಣೆಯನ್ನು ಕೂಗುತ್ತಿದ್ದ ಜನಸಮೂಹದತ್ತ ನಡೆದು ಶೇಕ್ ಹ್ಯಾಂಡ್ ಮಾಡಿದ್ದಾರೆ..!
ಈ ದೃಶ್ಯ ಕಂಡು ಬಂದಿದ್ದು, ಛತ್ತೀಸ್ಗಢದ ಕೊರ್ಬಾ ಜಿಲ್ಲೆಯಲ್ಲಿ.. ಹೌದು, ರಾಹುಲ್ ಗಾಂಧಿಯವರು ಎಂಟ್ರಿಯಾಗುತ್ತಿದ್ದಂತೆ ನರೇಂದ್ರ ಮೋದಿ ಪರ ಘೋಷಣೆಗಳನ್ನು ಕೂಗುವುದಕ್ಕೆ ಜನ ಆರಂಭಿಸಿದರು.ಆಗ ರಾಹುಲ್ ಆವರು ಜನಸಮೂಹದತ್ತ ನಡೆದು ಅವರಿಗೆ ಶೇಕ್ ಹ್ಯಾಂಡ್ ಮಾಡಿದ್ದಾರೆ.ಘಟನೆಯ ವಿಡಿಯೋವನ್ನು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಹಂಚಿಕೊಂಡಿರುವ ಕಾಂಗ್ರೆಸ್, “ಪ್ರೀತಿಯಲ್ಲಿ ದೊಡ್ಡ ಶಕ್ತಿ ಇದೆ. ಬಿಜೆಪಿ ಕಾರ್ಯಕರ್ತರು ಭಾರತ್ ಜೋಡೋ ನ್ಯಾಯ ಯಾತ್ರೆ ವಿರುದ್ಧ ಪ್ರತಿಭಟನೆಗೆ ನಿಂತಿದ್ದರು. ಆದರೆ ಯಾತ್ರೆ ಅಲ್ಲಿಗೆ ಸಾಗಿದಾಗ, ರಾಹುಲ್ ಗಾಂಧಿ ಅವರನ್ನು ಭೇಟಿಯಾದಾಗ ಈ ಸನ್ನಿವೇಶ ನಡೆಯಿತು ಎಂದು ಹೇಳಿದೆ.
ವೀಡಿಯೊದಲ್ಲಿ,ಕೇಸರಿ ಸ್ಕಾರ್ಫ್ ಮತ್ತು ಭಗವಾನ್ ಹನುಮಾನ್ ಚಿತ್ರವಿರುವ ಧ್ವಜಗಳನ್ನು ಹಿಡಿದುಕೊಂಡು ‘ಜೈ ಶ್ರೀ ರಾಮ್’ ಮತ್ತು ‘ಮೋದಿ ಮೋದಿ’ ಎಂದು ಘೋಷಣೆಗಳನ್ನು ಕೂಗುವ ಗುಂಪು ಸೇರಿದಂತೆ ದೊಡ್ಡ ಸಂಖ್ಯೆಯ ಜನರು ರಸ್ತೆಯಲ್ಲಿ ಸಾಲುಗಟ್ಟಿ ನಿಂತಿರುವುದನ್ನು ಕಾಣಬಹುದು.ಅವರನ್ನು ನೋಡಿದ ರಾಹುಲ್ ಗಾಂಧಿ, ತಮ್ಮ ವಾಹನದಿಂದ ಇಳಿದು ಅವರ ಬಳಿಗೆ ತೆರಳಿ ಹಸ್ತಲಾಘವ ಮಾಡಿದರು. ನಂತರ ಅವರು ತಮ್ಮ ವಾಹನಕ್ಕೆ ಹಿಂತಿರುಗಿ ಗುಂಪಿಗೆ ಪ್ಲೇಯಿಂಗ್ ಕಿಸ್ ನೀಡಿದ್ದಾರೆ.
ಇದಕ್ಕೂ ಮುನ್ನ ಕೊರ್ಬಾದ ಸೀತಾಮಡಿಯಲ್ಲಿ ಸಭೆಯನ್ನುದ್ದೇಶಿಸಿ ಮಾತನಾಡಿದ ಗಾಂಧಿ, ಬಿಜೆಪಿ ಆಡಳಿತದಲ್ಲಿ ಜನರು ನಿರುದ್ಯೋಗ ಮತ್ತು ಹಣದುಬ್ಬರದಿಂದ ಕಂಗಾಲಾಗಿದ್ದಾರೆ ಎಂದು ಆರೋಪಿಸಿದ್ದರು.ಜನರು ಎಚ್ಚೆತ್ತುಕೊಳ್ಳುವಂತೆ ಕೇಳಿಕೊಂಡ ಕಾಂಗ್ರೆಸ್ ನಾಯಕ, ಆಡಳಿತ ವ್ಯವಸ್ಥೆಯಿಂದ ಜನಸಾಮಾನ್ಯರ ದರೋಡೆ ಮತ್ತು ದಾರಿ ತಪ್ಪಿಸಲಾಗುತ್ತಿದೆ ಎಂದು ಹೇಳಿದರು.