ನ್ಯೂಸ್ ನಾಟೌಟ್: ದೇಶಾದ್ಯಂತ ಮಂಗನ ಕಾಯಿಲೆ ಅತ್ಯಂತ ವೇಗವಾಗಿ ಹಬ್ಬುತ್ತಿದೆ ಎಂದು ವರದಿಯಾಗಿದೆ. ಸಹಜವಾಗಿ ಈ ಸುದ್ದಿಯಿಂದ ಜನ ಭಯಭೀತರಾಗಿದ್ದಾರೆ.
ಮಂಗನ ಖಾಯಿಲೆ, ಅಥವಾ Kyasanur Forest Disease (KFD) ಅಂತ ಜ್ವರವನ್ನು ಕರೆಯಲಾಗುತ್ತದೆ. ಅರಣ್ಯ ಪ್ರದೇಶಗಳಲ್ಲಿ ವಾಸವಿರುವ ಕೋತಿಯ ವೈರಸ್ ಗಳಿಂದ ಇದುವೇಗವಾಗಿ ಹಬ್ಬುತ್ತದೆ. ಜ್ವರ, ತಲೆನೋವು, ಸ್ನಾಯು ನೋವು, ವಾಂತಿ ಮುಂತಾದ ರೋಗ ಲಕ್ಷಣಗಳನ್ನು ಹೊಂದಿದೆ. ಸದ್ಯ ೪೯ಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗಿದೆ.
ಎರಡು ಮಂದಿ ಸಾವಿಗೀಡಾಗಿದ್ದಾರೆ ಎಂದು ತಿಳಿದು ಬಂದಿದೆ. ಈ ಬಗ್ಗೆ ಆತಂಕ ಬೇಡ ಕಟ್ಟೆಚ್ಚರ ವಹಿಸಿ ಎಂದು ಜಿಲ್ಲಾ ವೈದ್ಯಾಧಿಕಾರಿ ಪಿ ದಿನೇಶ್ ಮಾದ್ಯಮಗಳಿಗೆ ತಿಳಿಸಿದ್ದಾರೆ. ಹೇಗೆ ಹರಡುತ್ತದೆ ? ಮಂಗನ ಖಾಯಿಲೆ ಅಥವಾ Kyasanur Forest Disease (KFD), ಇದೊಂದು Haemaphysalis ಕುಲಕ್ಕೆ ಸೇರಿದ ಉಣ್ಣಿಯಾಗಿದ್ದು ರೋಗಗ್ರಸ್ತ ಕೋತಿಯ ದೇಹದಲ್ಲಿದ್ದ ಉಣುಗು(Tick) ಕೋತಿಯ ಮರಣಾನಂತರ ಉದುರಿ ಗಾಳಿಯ ಮೂಲಕ ಜಾನುವಾರುಗಳಿಗೆ ಹರಡುತ್ತದೆ. ಅಲ್ಲಿಂದ ನೇರವಾಗಿ ಮನುಷ್ಯನ ದೇಹಕ್ಕೆ ಅಂಟಿಕೊಳ್ಳುತ್ತದೆ.
ಈ ರೋಗವು ಮನುಷ್ಯನಿಂದ ಮನುಷ್ಯನಿಗೆ ಹರಡುವುದಿಲ್ಲ ಎನ್ನುವುದು ಸಮಾಧಾನಕರ ವಿಚಾರ. ಪರಿಹಾರವೇನು? ಈ ರೋಗವನ್ನು ರಕ್ತ ಪರೀಕ್ಷೆಯ ಮೂಲಕ ಪತ್ತೆ ಮಾಡಲಾಗುತ್ತದೆ. ಜ್ವರ ಕಾಣಿಸಿಕೊಳ್ಳುತ್ತಿದ್ದಂತೆಯೆ ನಿರ್ಲಕ್ಷ್ಯಿಸದೆ ವೈದ್ಯರನ್ನು ಭೇಟಿಯಾಗಿ. ದೇಹದಲ್ಲಿ ನಿರ್ಜಲೀಕರಣವಾಗದಂತೆ ಎಚ್ಚರವಹಿಸಿ ಶುದ್ಧವಾದ, ಕಾಯಿಸಿದ ನೀರನ್ನು ಹೆಚ್ಚು ಸೇವಿಸುವುದು ಉತ್ತಮ.
ದೇಹ ನಿರೋಧಕ ಶಕ್ತಿ ಹೆಚ್ಚಿಸುವ ಆಹಾರವನ್ನು ಸೇವಿಸಿ. ಮನೆಯಿಂದ ಹೊರಗೆ ಹೋಗುವಾಗ ದೇಹ ಪೂರ್ತಿ ಮುಚ್ಚುವಂತಹ ಬಟ್ಟೆಯನ್ನು ಧರಿಸಿ ಹಾಗೂ ಆದಷ್ಟು ಕಾಲಿಗೆ ಬೂಟ್ ಧರಿಸಿ ಉಣುಗು ಕಚ್ಚುವುದರಿಂದ ರಕ್ಷಿಸಿಕೊಳ್ಖಬಹುದು. ಮಲಗುವಾಗ ಸೊಳ್ಳೆ ಪರದೆಯನ್ನು ಬಳಸಿ. ದನದ ಹಾಲು ಬಳಸುವಾಗ ಎಚ್ಚರವಹಿಸುವುದು ಉತ್ತಮ. ಏಕೆಂದರೆ ಜಾನುವಾರುಗಳಿಗೆ ಉಣುಗು ಕಚ್ಚುವ ಸಂಭವ ಹೆಚ್ಚಾಗಿರುವುದರಿಂದ ಕಾಯಿಲೆ ಹರಡುವ ಸಂಭವವಿರುತ್ತದೆ. ಹಾಗಾಗಿ ಮೇಲೆ ಉಲ್ಲೇಖಿಸಿರುವ ಯಾವುದೇ ರೋಗ ಲಕ್ಷಣಗಳು ಕಂಡು ಬಂದರೂ ನಿರ್ಲಕ್ಷಿಸದೆ ವೈದ್ಯರನ್ನು ಭೇಟಿಯಾಗಬೇಕೆಂದು ವೈದ್ಯರು ತಿಳಿಸಿದ್ದಾರೆ.