ವಿಧಾನಸೌಧದಲ್ಲೇ ಶಾಸಕರಿಗೆ ಮಧ್ಯಾಹ್ನದ ಬಿಸಿಯೂಟ ಫ್ರೀ..! ಸ್ಪೀಕರ್ ಯು.ಟಿ ಖಾದರ್ ಈ ನಿರ್ಧಾರಕ್ಕೆ ಕಾರಣವೇನು..?

ನ್ಯೂಸ್ ನಾಟೌಟ್: ವಿಧಾನಸೌಧದಲ್ಲೇ ಶಾಸಕರುಗಳಿಗೆ ಮಧ್ಯಾಹ್ನದ ಬಿಸಿಯೂಟ ನೀಡಲಾಗುವುದು ಎಂದು ಸ್ಪೀಕರ್ ಖಾದರ್ ಇಂದು(ಫೆ.19) ಸದನದಲ್ಲಿ ಘೋಷಣೆ ಮಾಡಿದ್ದಾರೆ. ಈಗಾಗಲೇ ಬೆಳಗ್ಗೆ ತಿಂಡಿಯ ವ್ಯವಸ್ಥೆ ಮಾಡಿರುವ ಸ್ಪೀಕರ್, ಇದೀಗ ತಿಂಡಿ ಜೊತೆಗೆ ಊಟವೂ ಫ್ರೀ ಎಂದು ಹೇಳಿದ್ದಾರೆ. ಶಾಸಕರಿಗೆ ಮಧ್ಯಾಹ್ನದ ಊಟಕ್ಕೂ ವಿಧಾನಸೌಧದಲ್ಲೇ ವ್ಯವಸ್ಥೆ ಮಾಡಲಾಗುವುದು. ನೀವು ಎಲ್ಲಿ ಹೋದರೂ ಇಲ್ಲಿಗಿಂತ ಬೆಸ್ಟ್‌ ಊಟ ನಿಮಗೆ ಸಿಗಲ್ಲ ಎಂದು ಖಾದರ್ ಅಭಿಪ್ರಾಯಪಟ್ಟಿದ್ದಾರೆ. ಶಾಸಕರು ಸಮಯಕ್ಕೆ ಸರಿಯಾಗಿ ಬರದೇ ಮಧ್ಯಾಹ್ನದ ಕಲಾಪ ಆರಂಭ ವಿಳಂಬ ಆಗುತ್ತಿದೆ. ಈ ಹಿನ್ನೆಲೆಯಲ್ಲಿ ಸ್ಪೀಕರ್ ಈ ಘೋಷಣೆಯನ್ನು ಮಾಡಿದ್ದಾರೆ ಎನ್ನಲಾಗಿದೆ. ಈ ಹಿಂದೆಯೂ ಶಾಸಕರು ಲೇಟಾಗಿ ಬಂದಿದ್ದಾಗ ಸ್ಪೀಕರ್ ಪ್ರಶ್ನೆ ಮಾಡಿದ್ದರು. ಈ ವೇಳೆ ಶಾಸಕರು ಬಾಲಿಶವಾದ ಉತ್ತರಗಳನ್ನು ನೀಡಿದ್ದರು. ಒಬ್ಬರು ಶರ್ಟ್ ಚೇಂಜ್ ಮಾಡಿ ಬರುವಾಗ ತಡವಾಯಿತು. ಮೀಟಿಂಗ್ ರೂಂನಲ್ಲಿ ಕಾಯ್ತಾ ಇದ್ದೆವು, ಹೀಗಾಗಿ ನಮಗೆ ಗೊತ್ತಾಗಿಲ್ಲ ಅಂತೆಲ್ಲ ಹೇಳಿದ್ದರು. ಹೀಗೆ ಶಾಸಕರು ಕಲಾಪಕ್ಕೆ ತಡವಾಗಿ ಬರುತ್ತಿರುವುದರಿಂದ ಬೇಸತ್ತು ಸ್ಪೀಕರ್ ಈ ನಿರ್ಧಾರಕ್ಕೆ ಬಂದಿದ್ದಾರೆ ಎನ್ನಲಾಗಿದೆ. ಸ್ಪೀಕರ್ ಮಾತಿಗೆ ಮಾಜಿ ಸಚಿವ ಆರಗ ಜ್ಞಾನೆಂದ್ರ ತಮಾಷೆ ಮಾಡಿದ್ದು, ಜೊತೆಗೆ ಹಾಸಿಗೆ, ದಿಂಬು ಕೊಟ್ಬಿಡಿ, ಇಲ್ಲೇ ಸುಖವಾಗಿ ನಿದ್ದೇನೂ ಮಾಡಿಬಿಡ್ತೀವಿ ಎಂದಿದ್ದಾರೆ.