ನ್ಯೂಸ್ ನಾಟೌಟ್ : ಪ್ರೇಮ ವಿವಾಹಗಳಿಗೆ ಹೆಸರುವಾಸಿಯಾಗಿರುವ ಮಹಾರಾಷ್ಟ್ರದ ಗ್ರಾಮವೊಂದು ಈಗ ಎಲ್ಲರಿಗೂ ಅಚ್ಚರಿಯ ತಾಣವಾಗಿದೆ. ಚಂದ್ರಾಪುರದ ಕಾರಂಜಿ ಗ್ರಾಮ ಪ್ರೇಮ ವಿವಾಹಗಳಿಗೆ ಹೆಸರುವಾಸಿಯಾಗಿದೆ. ಕಾರಂಜಿ ಗ್ರಾಮದಲ್ಲಿ ಕಳೆದ ನಾಲ್ಕು ದಶಕಗಳಲ್ಲಿ 200ಕ್ಕೂ ಹೆಚ್ಚು ಪ್ರೇಮ ವಿವಾಹಗಳು ನಡೆದಿವೆ.
ವಿಧಾನಸಭೆಯ ವಿರೋಧ ಪಕ್ಷದ ನಾಯಕ ವಿಜಯ್ ವಡೆತ್ತಿವಾರ್ ಕೂಡ ಇದೇ ಗ್ರಾಮದ ನಿವಾಸಿ. ಅವರದ್ದೂ ಕೂಡ ಪ್ರೇಮ ವಿವಾಹ ಎನ್ನುತ್ತಾರೆ ಗ್ರಾಮಸ್ಥರು. 11 ಸದಸ್ಯ ಬಲದ ಗ್ರಾ.ಪಂ.ನಲ್ಲಿ ಸರ್ಪಂಚ್, ಉಪ ಸರ್ಪಂಚ್ ಸೇರಿದಂತೆ ಆರು ಮಂದಿ ಪ್ರೇಮ ವಿವಾಹವಾಗಿದ್ದಾರೆ. ನಾವು ಅದೆಷ್ಟೇ ಆಧುನಿಕತೆಗೆ ಒಗ್ಗಿಕೊಂಡರೂ ಕೂಡ ಹಲವೆಡೆ ಇಂದಿಗೂ ಪ್ರೇಮ ವಿವಾಹಗಳಿಗೆ ಸಾಮಾಜಿಕ ಮನ್ನಣೆ ಸಿಗುತ್ತಿಲ್ಲ.
ಆದರೆ, ಚಂದ್ರಾಪುರ ಜಿಲ್ಲೆಯ ಗೊಂಡಪಿಂಪ್ರಿ ತಾಲೂಕಿನ ಕಾರಂಜಿ ಗ್ರಾಮವು ಇದಕ್ಕೆ ತದ್ವಿರುದ್ಧವಾಗಿದೆ. ಕಳೆದ 40 ವರ್ಷಗಳಲ್ಲಿ ಈ ಗ್ರಾಮದಲ್ಲಿ 200ಕ್ಕೂ ಹೆಚ್ಚು ಪ್ರೇಮ ವಿವಾಹಗಳು ನಡೆದಿವೆ. ಮೊದಲು ಈ ಗ್ರಾಮ ಅಪರಾಧ ಪ್ರಕರಣಗಳಿಂದ ಕುಖ್ಯಾತಿ ಪಡೆದುಕೊಂಡಿತ್ತು. ಇದೀಗ ಪ್ರೀತಿಗೆ ಹೆಸರುವಾಸಿಯಾಗಿದೆ. ಪ್ರೇಮವಿವಾಹದಲ್ಲಿ ಹಲವು ಸವಾಲುಗಳು ಎದುರಾಗುತ್ತವೆ.
ಆದರೆ, ಪ್ರೀತಿ ಮೂಲಕ ಪ್ರೇಮವಿವಾಹದ ಸಮಸ್ಯೆಗಳನ್ನು ಬಗೆಹರಿಸಿದ್ದಾರೆ. ಈ ಹಿನ್ನೆಲೆ, ಸಮಾಜ, ಗುಂಪು ಅಥವಾ ಕುಟುಂಬಗಳಲ್ಲಿ ಯಾವುದೇ ತರನಾದ ಉದ್ವಿಗ್ನತೆ ಉದ್ಭವಿಸಲಿಲ್ಲ. ಇದರಿಂದ ಗ್ರಾಮದಲ್ಲಿ ಸದಾ ಶಾಂತಿ, ಸುವ್ಯವಸ್ಥೆ ಹಾಗೂ ಸಂತಸದ ವಾತಾವರಣವಿದೆ. ಒಂದೆಡೆ ಪ್ರೇಮವಿವಾಹಗಳಿಗೆ ಸಾಮಾಜಿಕ ಮನ್ನಣೆ ಸಿಗುತ್ತಿಲ್ಲ, ಇನ್ನೊಂದೆಡೆ ಪ್ರೇಮವಿವಾಹಗಳ ಸಂಖ್ಯೆ ಹೆಚ್ಚುತ್ತಿದೆ.
ಈ ಗ್ರಾಮವು ಚಂದ್ರಾಪುರದಿಂದ 50 ಕಿ.ಮೀ ದೂರದಲ್ಲಿದೆ. ಕಳೆದ 4 ದಶಕಗಳಲ್ಲಿ 200ಕ್ಕೂ ಹೆಚ್ಚು ಜೋಡಿಗಳ ಪ್ರೇಮ ವಿವಾಹವಾಗಿವೆ. ಈ ಪೈಕಿ ಹೆಚ್ಚಿನವು ಅಂತರ್ಜಾತಿ ವಿವಾಹಗಳು. ಈ ಗ್ರಾಮವು ಹಿಂದೆ ಅಪರಾಧ ಚಟುವಟಿಕೆಗಳಿಂದ ಗುರುತಿಸಿಕೊಂಡಿತ್ತು. ಆದರೆ ನಿಧಾನವಾಗಿ ಈ ಗ್ರಾಮ ಪ್ರೀತಿಯ ಹಾದಿ ಹಿಡಿಯಿತು. ಸದ್ಯ ಸಮಿತಿಗಳ ಮೂಲಕ ಗ್ರಾಮದಲ್ಲಿನ ಹಲವು ವಿವಾದಗಳನ್ನು ಬಗೆಹರಿಸಲಾಗಿದೆ.