ನ್ಯೂಸ್ನಾಟೌಟ್: ಜಾನ್ ಚೀಕ್ಸ್ ಎಂಬಾತ ಜನವರಿ 6, 2024ರಂದು ಪವರ್ ಬಾಲ್ ಕಂಪನಿಯ ಲಾಟರಿ ಖರೀದಿಸಿದ್ದಾರೆ. ಈ ಲಾಟರಿಯ ಮೊದಲ ಬಹುಮಾನ ಮೊತ್ತ $340. ಭಾರತೀಯ ರೂಪಾಯಿಗಳಲ್ಲಿ 2,800 ಕೋಟಿ ರೂಪಾಯಿ. ಫೆಬ್ರವರಿಯಲ್ಲಿ ಪವರ್ ಬಾಲ್ ಲಾಟರಿಯ ಫಲಿತಾಂಶ ಘೋಷಣೆಯಾಗಿದೆ. ಫಲಿತಾಂಶ ಘೋಷಣೆಯ ಲೈವ್ ಕಾರ್ಯಕ್ರಮ ವೀಕ್ಷಿಸಲು ಜಾನ್ ಚೀಕ್ಸ್ ಮರೆತಿದ್ದಾರೆ.
ಎರಡು ದಿನದ ಬಳಿಕ ತಾನು ಖರೀದಿಸಿದ ಲಾಟರಿ ಟಿಕೆಟ್ ಏನಾಗಿದೆ ಎಂದು ಪರಿಶೀಲಿಸಲು ಜಾನ್ ಚೀಕ್ಸ್ ಮುಂದಾಗಿದ್ದಾರೆ. ಇದಕ್ಕಾಗಿ ಪವರ್ ಬಾಲ್ ಕಂಪನಿಯ ವೆಬ್ಸೈಟ್ಗೆ ತೆರಳಿ ಲಾಟರಿ ಫಲಿತಾಂಶದ ನಂಬರ್ ಪರಿಶೀಲನೆ ಮಾಡಿದ್ದಾರೆ. ಈ ವೇಳೆ ಬಹುಮಾನದ ಲಿಸ್ಟ್ನಲ್ಲಿ ತಾನು ಖರೀದಿಸಿದ ನಂಬರ್ ಇರುವುದು ಗಮನಿಸಿದ್ದಾರೆ. ಒಂದೆಡೆ ಸಂಭ್ರಮ, ಮತ್ತೊಂದೆಡೆ ಇದು ನಿಜವೋ ಅನ್ನೋ ಅನುಮಾನ. ನಾಲ್ಕು ಬಾರಿ ನಂಬರ್ ಪರಿಶೀಲನೆ ನಡೆಸಿ ಖಚಿತಪಡಿಸಿದ್ದಾರೆ. ಮರುದಿನ ಬೆಳಗ್ಗೆ ಲಾಟರಿ ಎಜೆನ್ಸಿ ಕಂಪನಿಗೆ ತೆರಲಿ ತಮ್ಮ ಲಾಟರಿ ನೀಡಿದ್ದಾರೆ.
ಬಳಿಕ ಬಹುಮಾನ ಮೊತ್ತ ನೀಡುವಂತೆ ಸೂಚಿಸಿದ್ದಾರೆ. ಲಾಟರಿ ಪರಿಶೀಲಿಸಿದ ಸಿಬ್ಬಂದಿಗಳು ಈ ಲಾಟರಿ ಕಸದ ಬುಟ್ಟಿಗೆ ಎಸೆಯಿರಿ. ಇದರಲ್ಲಿ ಯಾವುದೇ ಬಹುಮಾನವಿಲ್ಲ ಎಂದಿದ್ದಾರೆ. ಆಘಾತಗೊಂಡ ಚಾನ್ ಚೀಕ್ಸ್ ವೆಬ್ಸೈಟ್ನಲ್ಲಿ ನೀವೇ ಹಾಕಿದ್ದೀರಿ. ಇದೀಗ ಬಹುಮಾನ ನೀಡಿ ಎಂದು ಪಟ್ಟುಹಿಡಿದ್ದಾನೆ. ಆದರ ಕಂಪನಿ ಜಾನ್ ಚೀಕ್ಸ್ಗೆ ಲಾಟರಿ ಮೊತ್ತ ನೀಡಲು ನಿರಾಕರಿಸಿದೆ.
ವೆಬ್ಸೈಟ್ನಲ್ಲಿ ವಿಜೇತರ ನಂಬರ್ ಹಾಕುವಾಗ ತಪ್ಪಾಗಿದೆ. ಇದು ಟೈಪ್ ಮಿಸ್ಟೇಕ್ ಎಂದು ಕಂಪನಿ ಹೇಳಿದೆ. ಇದರಿಂದ ಆಕ್ರೋಶಗೊಂಡ ಜಾನ್ ಚೀಕ್ಸ್ ಕೋರ್ಟ್ ಮೆಟ್ಟಿಲೇರಿದ್ದಾರೆ. ಸಾವಿರಾರು ಕೋಟಿ ರೂಪಾಯಿ ವಿಜೇತ ನಂಬರ್ ಮಿಸ್ಟೇಕ್ ಆಗಲು ಹೇಗೆ ಸಾಧ್ಯ? ಇದೀಗ ದುಬಾರಿ ಮೊತ್ತ ನೀಡಲು ಕಂಪನಿ ಹಿಂದೇಟು ಹಾಕುತ್ತಿದೆ ಎಂದು ಜಾನ್ ಚೀಕ್ಸ್ ವಾದ ಮಂದಿಟ್ಟಿದ್ದಾರೆ. ಮುಂದಿನ ವಿಚಾರಣೆ ಫೆಬ್ರವರಿ 23ಕ್ಕೆ ನಡೆಯಲಿದೆ ಎಂದು ವರದಿ ತಿಳಿಸಿದೆ.