33 ಕೋಟಿ ರೂಪಾಯಿ ಲಾಟರಿ ಗೆದ್ದ ಭಾರತೀಯ ಯಾರು..? ಅಬುಧಾಬಿ ಲಾಟರಿ ಟಿಕೆಟ್ ಉಚಿತವಾಗಿ ಸಿಕ್ಕಿದ್ದೇಗೆ..?

ನ್ಯೂಸ್ ನಾಟೌಟ್ : ಭಾರತೀಯ ವ್ಯಕ್ತಿಯೊಬ್ಬರು ಬಿಗ್ ಟಿಕೆಟ್ ಅಬುಧಾಬಿ ವೀಕ್ಲಿ ಡ್ರಾದಲ್ಲಿ 15 ಮಿಲಿಯನ್ ದಿರ್ಹಮ್ (ಸುಮಾರು 33 ಕೋಟಿ ರೂ.) ಗೆದ್ದಿದ್ದಾರೆ ಎಂದು ವರದಿ ತಿಳಿಸಿದೆ. ದುಬೈನಲ್ಲಿ ನೆಲೆಸಿರುವ ಈ ವ್ಯಕ್ತಿಯನ್ನು ಕೇರಳ ಮೂಲದ 40 ವರ್ಷದ ರಾಜೀವ್ ಅರಿಕ್ಕಟ್ ಎಂದು ಗುರುತಿಸಲಾಗಿದೆ. ಈ ವ್ಯಕ್ತಿಯನ್ನು ಕೇರಳ ಮೂಲದ 40 ವರ್ಷದ ರಾಜೀವ್ ಅರಿಕ್ಕಟ್ ಎಂದು ಗುರುತಿಸಲಾಗಿದೆ. ರಾಜೀವ್​ ತಮಗೆ ಉಚಿತವಾಗಿ ಸಿಕ್ಕಿದ್ದ ಲಾಟರಿಯಲ್ಲಿ ಬರೋಬ್ಬರಿ 33 ಕೋಟಿ ರೂ.ಗಳ ಜಾಕ್​ಪಾಟ್​ ಸಿಕ್ಕಿದೆ. ಮೂರು ವರ್ಷಗಳಿಂದ ಲಾಟರಿಯಲ್ಲಿ ಭಾಗವಹಿಸುತ್ತಿದ್ದ ಅವರಿಗೆ ಈ ಬಾರಿ ಅದೃಷ್ಟ ಒಲಿದುಬಂದಿದೆ. ಸ್ಥಳೀಯ ಮಾಧ್ಯಮಗಳ ವರದಿ ಪ್ರಕಾರ, ರಾಜೀವ್ ಪ್ರಸ್ತುತ ಅಲ್ ಐನ್‌ನಲ್ಲಿರುವ ಆರ್ಕಿಟೆಕ್ಚರಲ್ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ರಾಜೀವ್ ಅರಿಕ್ಕಟ್ ಹಲವಾರು ವರ್ಷಗಳಿಂದ ಯುಎಇಯಲ್ಲಿ ಕೆಲಸ ಮಾಡುತ್ತಿದ್ದಾರೆ. ರಾಜೀವ್​ಗೆ ಪತ್ನಿ ಹಾಗೂ ಇಬ್ಬರು ಮಕ್ಕಳಿದ್ದಾರೆ. ಕಳೆದ ಮೂರು ವರ್ಷಗಳಿಂದ ಲಾಟರಿ ಟಿಕೆಟ್‌ಗಳನ್ನು ಖರೀದಿಸುವ ಮೂಲಕ ರಾಜೀವ್ ತಮ್ಮ ಅದೃಷ್ಟವನ್ನು ಪರೀಕ್ಷಿಸುತ್ತಿದ್ದರು. ಈ ಬಾರಿ ಅವರಿಗೆ ಆರು ಟಿಕೆಟ್ ಸಿಕ್ಕಿತ್ತು. ಈ ಬಾರಿ 2 ಬಿಗ್​ ಟಿಕೆಟ್ ಖರೀದಿಸಿದ್ದಕ್ಕೆ ಸ್ಪೆಷಲ್ ಆಫರ್ ಆಗಿ ನಾಲ್ಕು ಟಿಕೆಟ್​ಳು ಉಚಿತವಾಗಿ ಸಿಕ್ಕಿದ್ದವು. ಪ್ರತಿ ಬಾರಿಯೂ ನಾನು ಲಾಟರಿ ಗೆಲ್ಲುತ್ತೇನೆ ಎಂಬ ವಿಶ್ವಾಸದಿಂದ ಖರೀದಿಸುತ್ತಿದ್ದೆ. ಈ ಬಾರಿ ಐದಾರು ಟಿಕೆಟ್ ಇದ್ದಿದ್ದರಿಂದ ಆ ನಂಬಿಕೆ ಇನ್ನಷ್ಟು ಹೆಚ್ಚಾಯಿತು. ನನ್ನ ಹೆಂಡತಿ ಮತ್ತು ನಾನು 7 ಮತ್ತು 13 ಸಂಖ್ಯೆಯ ಟಿಕೆಟ್‌ಗಳನ್ನು ಒಟ್ಟಿಗೆ ಖರೀದಿಸಿದೆವು. ಅವು ನನ್ನ ಮಕ್ಕಳ ಹುಟ್ಟುಹಬ್ಬದ ದಿನಾಂಕವಾಗಿತ್ತು ಎಂದು ತಿಳಿಸಿದ್ದಾರೆ. ರಾಫೆಲ್ ಡ್ರಾ ಸಂಖ್ಯೆ 260 ರಲ್ಲಿ ರಾಜೀವ್ ಖರೀದಿಸಿದ್ದ ಟಿಕೆಟ್ ಸಂಖ್ಯೆ 037130 ನಲ್ಲಿ ಜಾಕ್​ಪಾಟ್​ ಬಂದಿದೆ. ಕಳೆದ ಮೂರು ವರ್ಷಗಳಿಂದ ಬಿಗ್ ಟಿಕೆಟ್ ಡ್ರಾದಲ್ಲಿ ಭಾಗವಹಿಸುತ್ತಿದ್ದ ಅವರಿಗೆ ಕೊನೆಗೂ ಅದೃಷ್ಟ ಇಂದು ಬದಲಾಗಿದೆ. ಈ ಬಾರಿ ಅವರು ತಮ್ಮ ಇಬ್ಬರು ಪುತ್ರಿಯರ ಜನ್ಮ ದಿನಾಂಕವನ್ನು ಹೊಂದಿರುವ ಟಿಕೆಟ್ ಅನ್ನು ಆಯ್ಕೆ ಮಾಡಿದ್ದರಿಂದ ತಮ್ಮ ಅದೃಷ್ಟ ಬದಲಾಗಿದೆ ಎಂದಿದ್ದಾರೆ.