ನ್ಯೂಸ್ ನಾಟೌಟ್: ಭಾರತದ ಕ್ರಿಕೆಟಿಗ ಕರಾವಳಿಯ ರಾಹುಲ್ ಈಗ ಕನ್ನಡ ಭಾಷೆಯ ಮೇಲಿನ ಅಭಿಮಾನವನ್ನು ವ್ಯಕ್ತಪಡಿಸುವ ವಿಡಿಯೋವೊಂದು ಸಕತ್ ವೈರಲ್ ಆಗಿದೆ.ಇದೀಗ ಇದು ಎಲ್ಲರ ಮೆಚ್ಚುಗೆಗೂ ಪಾತ್ರವಾಗಿದೆ.ಹಾಗಾದರೆ ಆ ವಿಡಿಯೋದಲ್ಲಿ ಅಂಥದ್ದೇನಿದೆ ಅನ್ನೋದನ್ನು ನೋಡೋಣ ಬನ್ನಿ..
ಸ್ಟಾರ್ ಸ್ಪೋರ್ಟ್ಗಾಗಿ ಐಪಿಎಲ್ ಪ್ರೋಮೊ ಶೂಟ್ ಮಾಡುವ ಸಂದರ್ಭದಲ್ಲಿ ಈ ಕನ್ನಡದ ಬಗ್ಗೆ ಮಾತನಾಡಿದ್ದಾರೆ. ವಿಡಿಯೋದಲ್ಲಿ ಹುಡುಗನೊಬ್ಬ ಡೈಲಾಗ್ ಹಾಳೆಯನ್ನು ಕೆಎಲ್ ರಾಹುಲ್ಗೆ ಕೊಡುತ್ತಾರೆ. ಅದನ್ನು ನೋಡಿದ ಕೆಎಲ್ ರಾಹುಲ್ ಇಷ್ಟೊಂದು ಡೈಲಾಗ್ಗಳನ್ನು ಹೇಗೆ ನೆನಪಿಟ್ಟುಕೊಳ್ಳಲಿ ಎಂದು ಕೇಳುತ್ತಾರೆ.
ಉರು ಹೊಡೆಯಲು ಬಂದಿದ್ದರೆ ಇನ್ನೂ ಹೆಚ್ಚಾಗಿ ಓದಿರುತ್ತಿದ್ದೆ, ಮ್ಯಾಚ್ ಡೇ ಪ್ರೋಮೋ ಇಂಗ್ಲಿಷ್, ಮ್ಯಾಚ್ ಡೇ ಪ್ರೋಮೋ ಹಿಂದಿ, ಮ್ಯಾಚ್ ಡೇ ಪ್ರೋಮೋ ಕನ್ನಡ ಎನ್ನುವಾಗ ಡೈಲಾಗ್ ಶೀಟ್ ಕೊಟ್ಟ ಹುಡುಗ, ಕನ್ನಡ್ ಎನ್ನುತ್ತಾನೆ. ಅದು ಕನ್ನಡ್ ಅಲ್ಲ ಕನ್ನಡ ನಿಮಗೆ ಎಷ್ಟು ಬಾರಿ ಹೇಳಬೇಕು ಎಂದು ರೇಗುತ್ತಾರೆ. ಕನ್ನಡ್ ಅಲ್ಲ ಕನ್ನಡ ಹೇಳು ಎಂದು ಆ ಹುಡುಗನ ಬಳಿ ಹೇಳಿಸುತ್ತಾರೆ.ಇನ್ನು ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಓಡಾಡಿದ್ದು ಇರೋ ಒಂದು ಹೃದಯಾನ ಎಷ್ಟು ಸಾರಿ ಗೆಲ್ತಿಯಾ ಗುರು ಎಂದು ಕನ್ನಡಿಗರು ರಾಹುಲ್ರನ್ನು ಹೊಗಳಿದ್ದಾರೆ. ಇನ್ನೂ ಕೆಲವರು ಈ ವಿಡಿಯೋ ನೋಡಿದ ಬಳಿಕ ಕೆಎಲ್ ರಾಹುಲ್ ಅವರ ಮೇಲಿನ ಅಭಿಮಾನ ಮತ್ತಷ್ಟು ಹೆಚ್ಚಾಯಿತು ಎಂದು ಕಾಮೆಂಟ್ ಮಾಡಿದ್ದಾರೆ.ಅಂತು ಸ್ಟಾರ್ ಕ್ರಿಕೆಟಿಗನ ಕನ್ನಡ ಪ್ರೇಮಕ್ಕೆ ಎಲ್ಲೆಡೆಯಿಂದ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.