ನ್ಯೂಸ್ ನಾಟೌಟ್ : ಕರಿಮಣಿ ಮಾಲೀಕ ನಾನಲ್ಲ ಹಾಡು ವೈರಾಲಾಗಿದ್ದೇ ತಡ ಇದೀಗ ಎತ್ತ ಹೋದ್ರು ಅದೇ ಸದ್ದು ಗುಂಯ್ಗುಡುತ್ತಿದೆ. ಭಾರಿ ಸದ್ದು ಮಾಡಿರೋ ಈ ಹಾಡು ಇದೀಗ ಸೀರಿಯಲ್ನತ್ತ ಹೆಜ್ಜೆ ಇಟ್ಟಿದೆ.ಅಂದ್ರೆ ಕರಿಮಣಿ ಅನ್ನೋ ಹೆಸರನ್ನೇ ಟೈಟ್ಲ್ಗೆ ಇಡಲಾಗಿದೆ.
ಕನ್ನಡ ಕಿರುತೆರೆಯಲ್ಲಿ ಹೊಚ್ಚ ಹೊಸ ಧಾರಾವಾಹಿಗಳು ಬ್ಯಾಕ್ ಟೂ ಬ್ಯಾಕ್ ಎಂಟ್ರಿ ಕೊಡ್ತಾನೆ ಇದೆ.ಇದೀಗ ಬೇರೆ ಬೇರೆ ವಾಹಿನಿಯವರು ವೀಕ್ಷಕರ ಪ್ರೀತಿ ಗೆಲ್ಲಲು ನಾನಾ ರೀತಿಯ ಸರ್ಕಸ್ ಗಳನ್ನು ಮಾಡುತ್ತಲೇ ಇರುತ್ತಾರೆ. ವಾಹಿನಿಯಂತು ಒಳ್ಳೆ ಒಳ್ಳೆ ಸ್ವಂತ ಕಥೆಗಳನ್ನ ಆರಿಸಿ ಕಿರುತೆರೆಯ ಪ್ರೇಕ್ಷಕರ ಮುಂದೆ ತಂದಿಡುತ್ತಿದ್ದಾರೆ.ಇದೀಗ ಮತ್ತೊಂದು ಹೊಸ ಕಥೆ ಸದ್ಯದಲ್ಲೇ ಕೈ ಜೋಡಿಸಲಿದೆ.ಅದುವೇ ಕರಿಮಣಿ. ಹೌದು ಕರಿಮಣಿ ಧಾರಾವಾಹಿಯನ್ನ ವೃದ್ಧಿ ಕ್ರಿಯೇಷನ್ಸ್ ಅವರು ನಿರ್ಮಾಣ ಮಾಡಲಿದ್ದಾರೆ. ಕರಿಮಣಿ ಕತೆಯ ತಿರುಳು ಬಹಳಷ್ಟು ಟ್ವಿಸ್ಟ್ಗಳನ್ನು ಒಳಗೊಂಡಿದ್ದು ಎಲ್ಲಾ ಕಥೆಗಳಿಗಿಂತ ಭಿನ್ನವಾಗಿರೋದಂತೂ ಸತ್ಯ.
ಈಗಾಗ್ಲೇ ಕರಿಮಣಿ ಧಾರಾವಾಹಿಯ ಎರಡು ಪ್ರೋಮೋಗಳು ಸಹ ಅದ್ಧೂರಿಯಾಗಿ ಮೂಡಿ ಬಂದಿದ್ದು, ವೀಕ್ಷಕರ ಫೇವರಿಟ್ ಆಗಿದೆ.ಕರಿಮಣಿ ಧಾರಾವಾಹಿಯು ಇದೇ ತಿಂಗಳು 19ನೇ ತಾರೀಖಿನಿಂದ ಪ್ರತಿ ದಿನ ರಾತ್ರಿ 9.30ಕ್ಕೆ ಕಲರ್ಸ್ನಲ್ಲಿ ಪ್ರಸಾರವಾಗಲಿದೆ. ಕರಿಮಣಿ ಧಾರಾವಾಹಿಯ ತಂಡಕ್ಕೆ ಒಂದೊಳ್ಳೆ ಟೈಮ್ ಸ್ಲಾಟ್ ಸಿಕ್ಕಿದೆ. ಇನ್ನೇನಿದ್ರು ಕನ್ನಡಿಗರು ಈ ಧಾರಾವಾಹಿಯನ್ನ ನೋಡಲು ಬಾಕಿ ಇದೆ ಅಷ್ಟೇ..