ನ್ಯೂಸ್ ನಾಟೌಟ್ :ಇದೀಗ ಬೇಸಿಗೆ ಸಮಯವಾಗಿರೋದ್ರಿಂದ ಬೀಡಿ , ಸಿಗರೇಟು ಸೇದುವವರು ಪರಿಸರದ ಬಗ್ಗೆ ಯೋಚನೆ ಮಾಡಬೇಕಾಗಿದೆ.ಕೆಲವು ಸಂದರ್ಭಗಳಲ್ಲಿ ಬೀಡಿ ಸಿಗರೇಟು ಸೇದಿ ಹುಲ್ಲು ಇರುವ ಪ್ರದೇಶಕ್ಕೆ ಬಿಸಾಡುವುದರಿಂದ ದೊಡ್ಡ ಅನಾಹುತಗಳೇ ಹೆಚ್ಚಾಗೋದಕ್ಕೆ ಕಾರಣವಾಗಬಹುದು. ಇದೀಗ ಚಾರ್ಮಾಡಿ ಘಾಟಿಯ ಚಿಕ್ಕಮಗಳೂರು ಅರಣ್ಯ ಇಲಾಖೆ ವ್ಯಾಪ್ತಿಯ ಬಾರಿಮಲೆ ಎಸ್ಟೇಟ್ ಪ್ರದೇಶದಲ್ಲಿ ಬೆಂಕಿ ಕಾಣಿಸಿಕೊಂಡು ಆತಂಕ ಸೃಷ್ಟಿ ಮಾಡಿದೆ.ಸ್ಥಳೀಯರು ಅರಣ್ಯ ಪ್ರದೇಶದಲ್ಲಿ ಒಣ ಹುಲ್ಲು ಹಾಗೂ ಗಿಡಗಂಟಿಗಳಿಗೆ ಹಚ್ಚಿರುವ ಬೆಂಕಿ ವ್ಯಾಪಿಸಿರುವ ಶಂಕೆ ವ್ಯಕ್ತವಾಗಿದೆ.
ಒಣ ಹುಲ್ಲನ್ನು ನಾಶ ಮಾಡುವ ಉದ್ದೇಶದಿಂದ ಹಚ್ಚುವ ಬೆಂಕಿ ಕಾಳ್ಗಿಚ್ಚಿಗೂ ಕಾರಣವಾಗುತ್ತದೆ. ಪ್ರಸ್ತುತ ಅರಣ್ಯದ ಅಂಚಿನವರೆಗೂ ಪಸರಿಸಿದ ಬೆಂಕಿಯನ್ನು ಆರಿಸಲಾಗಿದ್ದು ಯಾವುದೇ ಅಪಾಯದ ಸ್ಥಿತಿ ಇಲ್ಲ ಎಂದು ಅರಣ್ಯ ಇಲಾಖೆ ತಿಳಿಸಿದೆ.ಈ ಬಗ್ಗೆ ಸ್ಥಳೀಯರು ಎಚ್ಚೆತ್ತುಕೊಳ್ಳುವ ಅಗತ್ಯವಿದೆ.