ನ್ಯೂಸ್ ನಾಟೌಟ್ : ಕೆಲ ಸಮಯಗಳ ಹಿಂದೆ ತನ್ನ ಪತ್ನಿ ದಿನಕ್ಕೆ ಆರು ಬಾರಿ ಸ್ನಾನ ಮಾಡ್ತಾಳೆಂದು ಗಂಡ ಹೆಂಡತಿಗೆ ವಿಚ್ಛೇದನ ನೀಡಿರುವ ಘಟನೆ ಬಗ್ಗೆ ವರದಿಯಾಗಿತ್ತು.ಇದೀಗ ಗಂಡ ಸ್ನಾನವೇ ಮಾಡೋದಿಲ್ಲವೆಂದು ಹೇಳಿ ಹೆಂಡ್ತಿ ನನಗೆ ವಿಚ್ಛೇದನ ಬೇಕು ಎಂದು ಕೇಸ್ ದಾಖಲಿಸಿರುವ ಘಟನೆ ಬಗ್ಗೆ ವರದಿಯಾಗಿದೆ.
ಬೇಸಿಗೆ ಕಾಲದಲ್ಲಿ ದಿನಕ್ಕೆ ಮೂರು ಮೂರು ಬಾರಿಯಾದರೂ ಸ್ನಾನ ಮಾಡಬೇಕು ಎಂದೆನಿಸೋದು ಸಹಜ.ಆದರೆ ಈ ಮಹಿಳೆಯ ಪತಿ ಮಾತ್ರ ಯಾವ ಶೆಕೆಯಾದ್ರೂ ಇರ್ಲಿ,ಬೆವರು ಇಳಿತಿರ್ಲಿ ಸ್ನಾನವನ್ನಂತು ಮಾಡೋದೇ ಇಲ್ವಂತೆ. ಇದಕ್ಕಾಗಿ ಹೆಂಡ್ತಿ ರೊಚ್ಚಿಗೆದ್ದು, ಗಂಡನ ವಿರುದ್ಧ ದೂರು ನೀಡಿದ್ದಾಳೆ.
ಟರ್ಕಿಯ ಈ ಮಹಿಳೆ ದೂರಿಗೆ ಪೊಲೀಸರೇ ಬೆಚ್ಚಿ ಬಿದ್ದಿದ್ದಾರೆ.ಎಂಥೆಂಥ ಕೇಸ್ ಗಳನ್ನು ನೋಡಿದ್ದೇವೆ.ಆದರೆ ಇದೊಂದು ವಿಚಿತ್ರ ಕೇಸ್ ಎನ್ನುತ್ತಾ ಸದ್ಯ ಪೊಲೀಸರಿಗೆ ಇದು ತುಂಬಾ ತಲೆ ನೋವಾಗಿ ಪರಿಣಮಿಸಿದೆ.ಆಕೆ ನೀಡಿದ ದೂರಿನಲ್ಲಿ “ನನ್ನ ಗಂಡ ಸ್ನಾನ ಮಾಡದಿರೋದಕ್ಕೆ ಬೆವರು ವಾಸನೆ ಬರುತ್ತಿದೆ.ವಾರಕ್ಕೆ ಎರಡು ಬಾರಿ ಹಲ್ಲುಜ್ಜುತ್ತಾರೆ.೫ ದಿನ ಒಂದೇ ಬಟ್ಟೆ ಉಡುತ್ತಾರೆ.ಅಪರೂಪಕ್ಕೆ ಎಂಬಂತೆ ಸ್ನಾನ ಮಾಡುತ್ತಾರೆ ” ಎಂದಿದ್ದಾಳೆ.