- +91 73497 60202
- [email protected]
- November 22, 2024 7:52 PM
ಒಂದೇ ದ್ವಿಚಕ್ರ ವಾಹನದ ಮೇಲೆ 300 ಕೇಸ್, 3 ಲಕ್ಷ ರೂ. ದಂಡ..! ಇಲ್ಲಿದೆ ಸಂಪೂರ್ಣ ಕಹಾನಿ
ನ್ಯೂಸ್ ನಾಟೌಟ್: ಸಂಚಾರಿ ನಿಯಮ ಉಲ್ಲಂಘಿಸಿದ್ದಕ್ಕೆ ಸಿಲಿಕಾನ್ ಸಿಟಿಯ ಬೈಕ್‌ವೊಂದರ ಮೇಲೆ ಬರೋಬ್ಬರಿ 300 ಪ್ರಕರಣ ದಾಖಲಾಗಿದೆ ಎಂದು ವರದಿ ತಿಳಿಸಿದೆ. ಈ ಎಲ್ಲಾ ಪ್ರಕರಣಗಳು ಸೇರಿ ಒಟ್ಟು 3 ಲಕ್ಷ ರೂ. ದಂಡ ಬಿದ್ದಿದೆ ಎಂದು ವರದಿ ತಿಳಿಸಿದೆ. ಬೆಂಗಳೂರಲ್ಲಿ ಅತಿ ಹೆಚ್ಚು ಸಂಚಾರಿ ನಿಯಮ ಉಲ್ಲಂಘಿಸಿದ ಬೈಕ್ ಇದು ಎಂಬ ಕುಖ್ಯಾತಿಯನ್ನೂ ಪಡೆದಿದೆ ಎನ್ನಲಾಗಿದೆ. ಬೈಕ್ ಬೆಲೆ 30,000 ರೂ., ಆದರೆ ನಗರದಲ್ಲಿ ಸಂಚಾರಿ ನಿಯಮ ಉಲ್ಲಂಘನೆ ಮಾಡಿರೋದರಲ್ಲಿ ಬೆಂಗಳೂರಿಗೆ ಮೊದಲನೇಯವರು ಸುಧಾಮ ನಗರದ ವೆಂಕಟರಮನ್ ಎನ್ನಲಾಗಿದೆ. ಇವರ, KA05KF7969 ನಂಬರಿನ ಆಕ್ಟಿವಾ ಹೊಂಡಾ ಬೈಕ್‌ನ ಮೇಲೆ ಬರೋಬ್ಬರಿ 300 ಕೇಸ್‌ಗಳು ದಾಖಲಾಗಿದೆ. ಒನ್ ವೇ ಸಂಚಾರ, ಸಿಗ್ನಲ್ ಜಂಪ್, ಮೊಬೈಲ್‌ನಲ್ಲಿ ಮಾತನಾಡುತ್ತಾ ವಾಹನ ಚಲಾವಣೆ, ಫುಟ್‌ಪಾಥ್ ರೈಡಿಂಗ್.. ಪೊಲೀಸ್ ಮ್ಯಾನ್ಯೂವಲ್‌ನಲ್ಲಿ ಯಾವ್ಯಾವ ಕಾನೂನುಗಳು ಉಲ್ಲಂಘನೆ ಎಂದು ಎನಿಸಿಕೊಳ್ಳುತ್ತೋ ಅದೆಲ್ಲಾ ಈ ವೆಂಕಟರಾಮನ್ ಮಾಡಿಬಿಟ್ಟಿದ್ದಾರೆ ಎನ್ನಲಾಗಿದೆ. ಬೈಕ್ ಮೇಲಿರುವ ಕೇಸ್ ಪರಿಶೀಲನೆ ಮಾಡಿ, ವಿಲ್ಸನ್ ಗಾರ್ಡನ್‌ನ ಸುಧಾಮ ನಗರದಲ್ಲಿರುವ ವೆಂಕಟರಮನ್ ಮನೆಗೆ ಸಂಚಾರಿ ಪೊಲೀಸರು ನೋಟಿಸ್ ನೀಡಿದ್ದಾರೆ. ಎಸ್.ಆರ್ ನಗರ, ವಿಲ್ಸನ್ ಗಾರ್ಡನ್ ಸೇರಿದಂತೆ ಹಲವೆಡೆ ಸಂಚಾರ ನಿಯಮ ಉಲ್ಲಂಘನೆ ಮಾಡಿರೋದು ಸಿಗ್ನಲ್‌ನಲ್ಲಿರೋ ಕ್ಯಾಮೆರಾಗಳಲ್ಲಿ ಸೆರೆಯಾಗಿದೆ. ವೆಂಕಟರಮನ್ ಬೈಕ್ ಮೇಲೆ 300 ಕೇಸ್‌ಗಳಿಂದ ಒಟ್ಟು ದಂಡದ ಮೊತ್ತ 3,20,000 ರೂ. ಆಗಿದೆ ಎನ್ನಲಾಗಿದೆ.
© 2021 Newsnotout | Website Developed By serverhug.
ನಮ್ಮ ವಾಟ್ಸಪ್ ಗ್ರೂಪ್ಗೆ ಸೇರಿ