ನ್ಯೂಸ್ ನಾಟೌಟ್ :ಕರ್ನಾಟಕ ರಾಜ್ಯ ಸರ್ಕಾರ ಮಹಿಳೆಯರಿಗೆ ಉಚಿತ ಪ್ರಯಾಣ ಯೋಜನೆ ಸೇರಿದಂತೆ ಗೃಹ ಲಕ್ಷ್ಮೀ ಯೋಜನೆಯ ಸೌಭಾಗ್ಯವನ್ನು ನೀಡಿದೆ.ಇದೀಗ ಕೇಂದ್ರ ಸರ್ಕಾರದಿಂದಲೂ ಮಹಿಳೆಯರಿಗೆ ಶುಭ ಸುದ್ದಿ..! ಹೌದು, ಮಹಿಳೆಯರಿಗಾಗಿ ಕೇಂದ್ರ ಸರ್ಕಾರವೂ ವಿಶೇಷ ಯೋಜನೆಯೊಂದನ್ನು ತರೋದಕ್ಕೆ ಸಿದ್ಧವಾಗಿದೆ.ಈ ಯೋಜನೆಯಡಿಯಲ್ಲಿ ಮಹಿಳೆಯರು ಬರೋಬ್ಬರಿ ತಿಂಗಳಿಗೆ ೩೫ ಸಾವಿರ ರೂಪಾಯಿಗಳ ಲಾಭವನ್ನು ಪಡೆದುಕೊಳ್ಳ ಬಹುದು. ಹಾಗಾದರೆ ಅದ್ಯಾವ ಯೋಜನೆ ಅದರ ಪ್ರಯೋಜನವೇನು ಅನ್ನೋದನ್ನ ನೋಡೋಣ ಬನ್ನಿ..
ವಿಶ್ವವಿದ್ಯಾಲಯ ಧನಸಹಾಯ ಆಯೋಗ (UGC) ಉನ್ನತ ಶಿಕ್ಷಣ ಇಲಾಖೆ ಸಾವಿತ್ರಿಬಾಯಿ ಜ್ಯೋತಿರಾವ್ ಫುಲೆ ಫೆಲೋಶಿಪ್ ಯೋಜನೆಯು ಮಹಿಳಾ ಪಿಎಚ್ಡಿ ವಿದ್ಯಾರ್ಥಿಗಳಿಗೆ ಸಂಶೋಧನಾ ಕಾರ್ಯವನ್ನು ಮುಂದುವರಿಸಲು ವಿದ್ಯಾರ್ಥಿವೇತನವನ್ನು ಒದಗಿಸುತ್ತದೆ.ಇ ಯೋಜನೆಯಡಿಯಲ್ಲಿ ಕೆಲವೊಂದು ನಿಭಂಧನೆಗಳಿದ್ದು,ಅದು ಪೂರಕವಾಗಿದ್ದರೆ ಆ ಮಹಿಳೆಯರು ಈ ಯೋಜನೆಗಳಿಗೆ ಅರ್ಹ ಎಂದು ಪರಿಗಣಿಸಲಾಗಿದೆ. ‘ಒಂಟಿ ಹೆಣ್ಣು ಮಗು’ ಶಿಕ್ಷಣ ವಿದ್ಯಾರ್ಥಿವೇತನ ಯೋಜನೆಯು ಕುಟುಂಬದಲ್ಲಿ ಸಹೋದರನನ್ನು ಹೊಂದಿರದ ಹೆಣ್ಣು ಮಗುವಿಗೆ ಇರುವ ಒಂದು ಯೋಜನೆಯಾಗಿದೆ. ಗಂಡು ಮಕ್ಕಳಿಲ್ಲದ ಮನೆಯಲ್ಲಿ, ಒಂದಕ್ಕಿಂತ ಹೆಚ್ಚು ಹೆಣ್ಣು ಮಕ್ಕಳಿದ್ದರೆ, ಈ ಸ್ಟೈಫಂಡ್ ಅನ್ನು ಮನೆಯ ಒಬ್ಬ ಮಹಿಳೆಗೆ ಮಾತ್ರ ನೀಡಲಾಗುತ್ತದೆ. ಈ ಯೋಜನೆಯಡಿಯಲ್ಲಿ, ಪ್ರತಿ ವರ್ಷ ಆನ್ಲೈನ್ನಲ್ಲಿ ಸ್ವೀಕರಿಸುವ ಅರ್ಹ ಅರ್ಜಿಗಳ ಆಧಾರದ ಮೇಲೆ ವಿದ್ಯಾರ್ಥಿವೇತನ ನೀಡಬೇಕಾದ ವಿದ್ಯಾರ್ಥಿಗಳ ಸಂಖ್ಯೆಯನ್ನು ನಿರ್ಧರಿಸಲಾಗುತ್ತದೆ.
ಪದವಿಯ ನಂತರ ಉನ್ನತ ಶಿಕ್ಷಣವನ್ನು ಪಡೆಯಲು ಬಯಸುವ ಹೆಣ್ಣುಮಕ್ಕಳು ಕೇಂದ್ರ ಸರ್ಕಾರದ ಈ ಯೋಜನೆಗೆ ಅರ್ಜಿ ಸಲ್ಲಿಸಲು ಅಗತ್ಯವಾದ ಷರತ್ತುಗಳನ್ನು ಪೂರೈಸಬೇಕು. ವಿದ್ಯಾರ್ಥಿನಿಯರ ಪೋಷಕರು ಈ ಯೋಜನೆಗೆ ಸೇರಲು 100 ರೂಪಾಯಿ ಮೌಲ್ಯದ ಸ್ಟ್ಯಾಂಪ್ನಲ್ಲಿ ಅಫಿಡವಿಟ್ ಸಲ್ಲಿಸಬೇಕು. ಅಫಿಡವಿಟ್ ಅನ್ನು ಮ್ಯಾಜಿಸ್ಟ್ರೇಟ್ ಅಥವಾ ತಹಶೀಲ್ದಾರ್ ದರ್ಜೆಯ ಸರ್ಕಾರಿ ಅಧಿಕಾರಿ ದೃಢೀಕರಿಸಬೇಕು.
ವಿದ್ಯಾರ್ಥಿಯು ಆಧಾರ್, ಬ್ಯಾಂಕ್ ಖಾತೆ ಮತ್ತು ಮೊಬೈಲ್ ಸಂಖ್ಯೆಯನ್ನು ಹೊಂದಿರಬೇಕು. ಈ ಯೋಜನೆಯಲ್ಲಿ ಜೂನಿಯರ್ ರಿಸರ್ಚ್ ಫೆಲೋ ವಿದ್ಯಾರ್ಥಿನಿಯರಿಗೆ ಮಾಸಿಕ 31 ಸಾವಿರ ರೂಪಾಯಿ ಸ್ಟೈಫಂಡ್ ನೀಡಲಾಗುವುದು. ಹಿರಿಯ ಸಂಶೋಧನಾ ವಿದ್ಯಾರ್ಥಿಗಳಿಗೆ 35 ಸಾವಿರ ರೂ ನೀಡಲಾಗುವುದು.ವಿಕಲಚೇತನರಿಗೆ ಮಾಸಿಕ 31 ಸಾವಿರ ರೂಪಾಯಿ ಬದಲು 35 ಸಾವಿರ ರೂಪಾಯಿ ಆರ್ಥಿಕ ನೆರವು ನೀಡಲಾಗುವುದು ಎಂದು ಹೇಳಲಾಗಿದೆ.
ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಕಾಲೇಜು ಅಥವಾ ಸಂಸ್ಥೆಯಲ್ಲಿ ಪೂರ್ಣ ಸಮಯದ ಪಿಎಚ್ಡಿ ಕೋರ್ಸ್ ಅನ್ನು ಮುಂದುವರಿಸುವುದು. ಅರೆಕಾಲಿಕ ಪಿಎಚ್ಡಿ ವಿದ್ಯಾರ್ಥಿಗಳು ಸಾವಿತ್ರಿಬಾಯಿ ಜ್ಯೋತಿರಾವ್ ಫುಲೆ ಫೆಲೋಶಿಪ್ ಯೋಜನೆಗೆ ಅರ್ಹರಲ್ಲ. 40 ವರ್ಷದೊಳಗಿನ ಮಹಿಳಾ ವಿದ್ಯಾರ್ಥಿಗಳು ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು. SC/ST/OBC ಮತ್ತು PWD ವಿದ್ಯಾರ್ಥಿಗಳಿಗೆ 45 ವರ್ಷಗಳವರೆಗೆ ಸಡಿಲಿಕೆ ಇರುತ್ತದೆ ಎಂದು ತಿಳಿಸಲಾಗಿದೆ.