ನ್ಯೂಸ್ ನಾಟೌಟ್:ಜೀವನದಲ್ಲಿ ಹಲವಾರು ಕನಸುಗಳನ್ನು ಕಟ್ಟಿಕೊಂಡು ಆಕೆ ಮದುವೆಯಾದಳು.ಆದರೆ ದಿನ ಹೋದಂತೆ ಮನೆಯಲ್ಲಿ ಕಿರಿ ಕಿರಿ ಅನುಭವಿಸತೊಡಗಿದಳು.ಹೀಗಾಗಿ ಗಂಡನ ವಿರುದ್ಧ ವರದಕ್ಷಿಣೆ ಕಿರುಕುಳದ ದೂರನ್ನು ದಾಖಲಿಸಿದಳು.ಆದರೆ ರೊಚ್ಚಿಗೆದ್ದ ಪತಿ ಆಕೆಯನ್ನ ಮುಗಿಸಿಯೇ ಬಿಟ್ಟಿದ್ದ. ಇಂತಹ ಹೃದಯ ವಿದ್ರಾವಕ ಘಟನೆ ವರದಿಯಾಗಿದ್ದು ಕೋಲಾರದ ಕೆಜಿಎಫ್ನ (KGF) ಸಂಜಯ್ ಗಾಂಧಿ ನಗರದಲ್ಲಿ.
ಈತ ತನ್ನ ಪತ್ನಿಯನ್ನ (Wife) ಚಾಕುವಿನಿಂದ ಇರಿದು ಕೊಲೆಗೈದಿದ್ದಾನೆ. ಹತ್ಯೆಯಾದ ಮಹಿಳೆಯನ್ನು ಪವಿತ್ರ (36) ಎಂದು ಗುರುತಿಸಲಾಗಿದೆ. ಮೃತಳ ಪತಿ ಲೋಕೇಶ್ ಹತ್ಯೆಗೈದ ಆರೋಪಿ ಎಂದು ತಿಳಿದು ಬಂದಿದೆ.ಮಹಿಳೆ ಸಂಜೆ ಗಾರ್ಮೆಂಟ್ಸ್ ಕೆಲಸ ಮುಗಿಸಿಕೊಂಡು ಬರುತ್ತಿರುವ ವೇಳೆ ಆರೋಪಿ ಪತಿ ಮಹಿಳೆಯ ದೇಹದ ಹಲವೆಡೆ ಚಾಕುವಿನಿಂದ ಇರಿದಿದ್ದಾನೆ.ತೀವ್ರ ರಕ್ತಸ್ರಾವವಾಗಿ ಆಕೆ ಆಸ್ಪತ್ರೆಗೆ ಸಾಗಿಸುವ ಮಾರ್ಗದಲ್ಲಿ ಅಸುನೀಗಿದ್ದಾಳೆ. ಕೊಲೆಯ ಬಳಿಕ ಆತ ತಲೆಮರೆಸಿಕೊಂಡಿದ್ದು ಆತನ ಪತ್ತೆಗೆ ಪೊಲೀಸರು (Police) ಬಲೆ ಬೀಸಿದ್ದಾರೆ.
ಈ ಸಂಬಂಧ ಊರಿಗಾಂ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಸ್ಥಳಕ್ಕೆ ಕೆಜಿಎಫ್ ಎಸ್ಪಿ ಶಾಂತರಾಜು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.