ನ್ಯೂಸ್ ನಾಟೌಟ್: ಪ್ರಿ-ವೆಡ್ಡಿಂಗ್ ಹಾಗೂ ಪೋಸ್ಟ್ ವೆಡ್ಡಿಂಗ್ ಫೋಟೋಶೂಟ್ಗಳು ವಿಚಿತ್ರ ರೀತಿಗಳು ಆಗಾಗ ಸುದ್ದಿಯಾಗುತ್ತಿರುತ್ತವೆ.
ಈಗ ಚಿತ್ರದುರ್ಗದ (Chitradurga) ಜಿಲ್ಲಾಸ್ಪತ್ರೆಯಲ್ಲಿ ವೈದ್ಯರೊಬ್ಬರು ಪ್ರಿ-ವೆಡ್ಡಿಂಗ್ ವೀಡಿಯೋ ಶೂಟ್ ಮಾಡಿ ಹಲವರ ಆಕ್ರೋಶಕ್ಕೆ ಗುರಿಯಾಗಿದ್ದಾರೆ. ಭರಮಸಾಗರ ಮೂಲದ ಜಿಲ್ಲಾಸ್ಪತ್ರೆಯ ಗುತ್ತಿಗೆ ಅಧಾರಿತ ವೈದ್ಯ ಡಾ.ಅಭಿಷೇಕ್ ಈ ರೀತಿ ಮಾಡಿದ್ದಾರೆ ಎನ್ನಲಾಗಿದೆ.
ಚಿತ್ರದುರ್ಗ ತಾಲೂಕಿನ ಭರಮಸಾಗರ ಗ್ರಾಮದಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದೆ. ಆಸ್ಪತ್ರೆಯನ್ನೇ ವೆಡ್ಡಿಂಗ್ ಶೂಟ್ ಲೋಕೇಶನ್ ಮಾಡಿಕೊಂಡಿರುವ ಅಭಿಷೇಕ್, ರೋಗಿಯೊಬ್ಬರನ್ನು ಬೆಡ್ ಮೇಲೆ ಮಲಗಿಸಿ, ಆಪರೇಷನ್ ಮಾಡುವಂತೆ, ಇನ್ನೊಂದೆಡೆ ಭಾವಿ ಪತ್ನಿ ಅಭಿಷೇಕ್ಗೆ ಸಹಾಯ ಮಾಡುವಂತೆ ಚಿತ್ರೀಕರಿಸಿದ್ದಾರೆ.
ಅಂತಿಮವಾಗಿ ಆಪರೇಷನ್ ಮುಗಿಯಿತು ಅಂದ ಬಳಿಕ ರೋಗಿ ಎದ್ದು ಕುಳಿತುಕೊಳ್ಳುತ್ತಾನೆ. ಈ ಎಲ್ಲಾ ದೃಶ್ಯಗಳನ್ನು ವೀಡಿಯೋದಲ್ಲಿ ಸೆರೆಯಾಗಿದೆ. ಸದ್ಯ ಡಾ.ಅಭಿಷೇಕ್ ಜೋಡಿಯ ಪ್ರಿ-ವೆಡ್ಡಿಂಗ್ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ. ಸರ್ಕಾರಿ ಆಸ್ಪತ್ರೆಯ ಆಪರೇಷನ್ ಥಿಯೇಟರ್ ದುರ್ಬಳಕೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.