ನ್ಯೂಸ್ ನಾಟೌಟ್ : ಮದುವೆಗೂ ಮೊದಲೆ ಜತೆ ಇರುವುದನ್ನು ಲಿವ್ ಇನ್ ರಿಲೇಶನ್ಶಿಪ್ ಎಂದು ಕರೆಯಲಾಗುತ್ತದೆ. ಇದನ್ನು ಯಾರು ಇಷ್ಟ ಪಡೋದಿಲ್ಲ. ಅದರಲ್ಲೂ ಗ್ರಾಮೀಣ ಪ್ರದೇಶಗಳಲ್ಲಿ ಇದಕ್ಕೆ ಸಮ್ಮತಿಯೇ ಇಲ್ಲ. ಹಳ್ಳಿಗಳಲ್ಲಿ ಮದುವೆಗಿಂತ ಮುಂಚೆ ಹುಡುಗಿ ಹುಡುಗನನ್ನು ಕಣ್ಣೆತ್ತಿ ಕೂಡ ನೋಡ ಬಾರದು ಎನ್ನುವ ನಿಯಮ ಆಗಿನ ಕಾಲದಲ್ಲಿತ್ತು. ಕ್ರಮೇಣ ಹಳ್ಳಿ ಜನ ಕೂಡ ಬದಲಾವಣೆ ಕಾಣುತ್ತಿದ್ದರೂ ಕೂಡ ಲಿವ್-ಇನ್ ಸಂಬಂಧಗಳಿಗೆ ನಮ್ಮ ರಾಜ್ಯದಲ್ಲಿ ಬೆಲೆ ಇಲ್ಲ. ಆದರೆ ಇಲ್ಲೊಂದು ಪ್ರದೇಶದ ಬುಡಕಟ್ಟು ಸಮುದಾಯದಲ್ಲಿ ಲಿವ್ ಇನ್ ಸಂಬಂಧಗಳು ತುಂಬಾ ಸಾಮಾನ್ಯ ಅಂದ್ರೆ ನೀವು ನಂಬ್ತಿರಾ?
ಗರಾಸಿಯಾ ಬುಡಕಟ್ಟುಗಳ ಜನರು ರಾಜಸ್ಥಾನ ಮತ್ತು ಗುಜರಾತ್ನ ಹೆಚ್ಚಿನ ಭಾಗಗಳಲ್ಲಿ ವಾಸಿಸುತ್ತಾರೆ. ಈ ಬುಡಕಟ್ಟಿನ ಹೆಚ್ಚಿನ ಮಹಿಳೆಯರು ಮದುವೆಗೆ ಮುಂಚೆಯೇ ತಾಯಂದಿರಾಗುತ್ತಾರಂತೆ. ನಂತರ ಆ ಸಂಗಾತಿಯೊಂದಿಗೆ ಮದುವೆಯಾಗಿ ಸಾಂಸರಿಕ ಜೀವನ ನಡೆಸುತ್ತಾರಂತೆ.ಅಚ್ಚರಿಯಾಗುತ್ತಿದೆಯಲ್ವ? ಹೌದು, ಈ ಸಮುದಾಯದಲ್ಲಿ ಮದುವೆಗಾಗಿಯೇ ಎರಡು ದಿನದ ಜಾತ್ರೆಯನ್ನು ಆಚರಿಸಲಾಗುತ್ತದೆ. ಇಲ್ಲಿ ಸಂಗಾತಿ ಆಯ್ಕೆಗಾಗಿ ಮೇಳವನ್ನು ನಡೆಸಲಾಗುತ್ತದೆ. ಈ ಮೇಳದಲ್ಲಿ ಭಾಗಿಯಾಗಲು ಹೆಚ್ಚಿನ ಸಂಖ್ಯೆಯ ಯುವಕ ಮತ್ತು ಯುವತಿಯರು ಸೇರುತ್ತಾರೆ. ಇಲ್ಲಿ ಯುವತಿಗೆ ಯಾರಾದ್ರು ಇಷ್ಟವಾದ್ರೆ ಆತನೊಂದಿಗೆ ವಾಸಿಸಲು ಆರಂಭಿಸುತ್ತಾರೆ.
ಮದುವೆಯಾಗದೆಯೂ ಪರಸ್ಪರ ಮಿಲನ ಕ್ರಿಯೆ ಹೊಂದಬಹುದು. ಆನಂತರ ಒಪ್ಪಿಗೆ ಸೂಚಿಸಿದ್ರೆ ಪೋಷಕರು ಮಕ್ಕಳ ಮದುವೆಯನ್ನು ಅತ್ಯಂತ ಸಡಗರ ಸಂಭ್ರಮದಿಂದ ಮಾಡುತ್ತಾರೆ.ವರ್ಷಗಳ ಹಿಂದೆ ಈ ಬುಡಕಟ್ಟಿನ ನಾಲ್ವರು ಸಹೋದರರು ಬೇರೆಡೆ ವಾಸಿಸಲು ಹೋಗಿದ್ದರಂತೆ. ಅದರಲ್ಲಿ ಮೂವರು ಮೊದಲು ಮದುವೆಯಾಗಿ ಸಂಸಾರ ಆರಂಭಿಸಿದರೆ, ಓರ್ವ ಮಾತ್ರ ಮದುವೆಯಾಗದೇ ಲಿವ್-ಇನ್ ಸಂಬಂಧ ಆರಂಭಿಸಿದ್ದನಂತೆ. ಮದುವೆಯಾಗಿ ಜೀವನ ಆರಂಭಿಸಿದ ಮೂವರಿಗೆ ಮಕ್ಕಳು ಆಗಲಿಲ್ಲವಂತೆ. ಆದ್ರೆ ಲಿವ್ ಇನ್ ಸಂಬಂಧದಲ್ಲಿದ್ದ ಒಬ್ಬನಿಗೆ ಮಗು ಆಯ್ತಂತೆ. ಅಂದಿನಿಂದ ಈ ಸಮುದಾಯದಲ್ಲಿ ಲಿವ್ ಇನ್ ಸಂಬಂಧ ಶುರುವಾಯ್ತಂತೆ..!