ನ್ಯೂಸ್ ನಾಟೌಟ್: ಸ್ಕೂಲ್ನಲ್ಲಿ ಕೊಟ್ಟ ಪ್ರೊಟೀನ್ ಮಾತ್ರೆ ನುಂಗಿ ವಿದ್ಯಾರ್ಥಿನಿ ದುರಂತ ಅಂತ್ಯ ಕಂಡಿರುವ ಘಟನೆ ಬೆಂಗಳೂರಿನ ಕರಿಸಂದ್ರದ ಉರ್ದು ಶಾಲೆಯಲ್ಲಿ ನಡೆದಿದೆ. ನಾಲ್ಕನೇ ತರಗತಿಯ 9 ವರ್ಷದ ಝೋಯಾ ಸಾವನ್ನಪ್ಪಿದ ವಿದ್ಯಾರ್ಥಿನಿಯೆಂದು ತಿಳಿದು ಬಂದಿದೆ.
ಝೋಯಾಗೆ ಶಾಲೆಯಲ್ಲಿ ಪ್ರೋಟೀನ್ ಮಾತ್ರೆ ಕೊಟ್ಟಿದ್ದರು.ಆಕೆ ಬನಶಂಕರಿಯ 1ನೇ ಹಂತದ ಬಳಿ ಇರುವ ಸರ್ಕಾರಿ ಉರ್ದು ಶಾಲೆಯಲ್ಲಿ ಓದುತ್ತಿದ್ದಳೆಂದು ತಿಳಿದು ಬಂದಿದೆ.ಶಾಲೆಯಲ್ಲಿ ಕೊಟ್ಟ ಪ್ರೋಟೀನ್ ಮಾತ್ರೆ ತಿನ್ನುತ್ತಿದ್ದಂತೆ ಆರೋಗ್ಯದಲ್ಲಿ ಏರು ಪೇರಾಗಿದೆ.ಕೂಡಲೇ ಆಕೆಯ ಆರೋಗ್ಯದಲ್ಲಿ ಏರುಪೇರಾಗುತ್ತಿದ್ದಂತೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಬನಶಂಕರಿಯಲ್ಲಿರುವ ಸೇವಾಕ್ಷೇತ್ರ ಆಸ್ಪತ್ರೆಯಲ್ಲಿ ತಡ ರಾತ್ರಿ ಮಗು ಕೊನೆಯುಸಿರೆಳೆದಿದೆ ಎಂದು ತಿಳಿದು ಬಂದಿದೆ.