ನ್ಯೂಸ್ ನಾಟೌಟ್ : ಮದುವೆ (Marriage) ಅಂದರೆ ಗಂಡು – ಹೆಣ್ಣಿನ ಮನೆಯಲ್ಲಿ ಸಂಭ್ರಮ ಮನೆ ಮಾಡಿರುತ್ತದೆ. ಎರಡೂ ಕಡೆಯವರು ಬಂದು ಗಂಡು -ಹೆಣ್ಣಿಗೆ ಶಾಸ್ತ್ರೋಕ್ತವಾಗಿ ಮದುವೆಯನ್ನು ನೆರವೇರಿಸುತ್ತಾರೆ.ಇಲ್ಲಿ ಹಬ್ಬದ ವಾತಾವರಣವಿದೆ.ಸಂತೋಷವಿದೆ.ಮದುಮಗಳಿಗೆ ಗಂಡನ ಮನೆ ಬಗ್ಗೆ ಹಾಗೂ ಮುಂದಿನ ಜೀವನದ ಬಗ್ಗೆ ಬೇಜಾರಿದ್ದರೂ ಕೂಡ ಆ ದಿನ ಆಕೆ ಆ ಕ್ಷಣವನ್ನು ಎಂಜಾಯ್ ಮಾಡುತ್ತಾಳೆ.ಇದೀಗ ವಿವಾಹದ ಸಂತೋಷವನ್ನು ಮತ್ತಷ್ಟು ಹೆಚ್ಚಿಸಲು ತಮಾಷೆಯಿಂದ ಕೂಡಿದ ಸಮಾರಂಭವನ್ನು ಆಯೋಜಿಸುವುದು ಇತ್ತೀಚಿನ ದಿನಗಳಲ್ಲಿ ಹೊಸ ಟ್ರೆಂಡ್ ಆಗಿದೆ.ಸೇರಿದ ಜನರೆಲ್ಲ ಡಿಜೆ ಹಾಡಿಗೆ ಕುಣಿದು ಕುಪ್ಪಳಿಸುತ್ತಾರೆ. ಹೀಗೆ ಮದುವೆ ಮದುವೆಯಲ್ಲಿ ನೃತ್ಯ ಮಾಡುವ ವೇಳೆ ಡಿಜೆ ಹಾಡುಗಳಿಗಾಗಿ ಜಗಳವಾಡಿ ಕುಟುಂಬಸ್ಥರು ಠಾಣೆ ಮೆಟ್ಟಿಲೇರಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
ಮದುವೆ ಅಂದರೆ ಎಲ್ಲೆಡೆ ಸಂಭ್ರಮ ಮನೆಮಾಡಿರುತ್ತದೆ. ಆದರೆ ಲಕ್ನೋದಲ್ಲಿ ನಡೆದ ಮುದುವೆಯಲ್ಲಿ ಡಿಜೆಗಾಗಿ ಕಿತ್ತಾಡಿಕೊಂಡಿರುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ. ಎರಡೂ ಕಡೆಯವರು ಪರಸ್ಪರ ಜಗಳವಾಡಿ, ಮದುವೆ ಮನೆಯಲ್ಲಿದ್ದ ಕುರ್ಚಿಗಳನ್ನು ಎಸೆದು ಕುಟುಂಬಸ್ಥರು ಹೊಡೆದಾಡಿಕೊಂಡಿರುವ ವಿಡಿಯೋ ನೋಡಿದ್ರೆ ಇವರು ಜಗಳವಾಡೋಕೆ ಬಂದ್ರಾ? ಅಥವಾ ಮದುವೆಗೆ ಬಂದ್ರಾ ಅನ್ನುವಂತಹ ಅನುಮಾನ ಮೂಡದಿರದು..
ಮದುವೆ ಮನೆಯಲ್ಲಿ ಮೊದಲು ಎರಡು ಕಡೆಯವರಿಗೆ ಊಟದ ವಿಚಾರವಾಗಿ ಜಗಳವಾಗಿದೆ. ನಂತರ ಆರತಕ್ಷತೆಗೆ ಸಿದ್ಧತೆಗಳು ನಡೆದಿದ್ದು, ವಧು-ವರ ಎಂಟ್ರಿಗೆ ಕುಟುಂಬಸ್ಥರು ನೃತ್ಯ ಮಾಡಿದ್ದಾರೆ. ಅದೇ ಸಮಯದಲ್ಲಿ ಡಿಜೆ ಹಾಡುಗಳಿಗಾಗಿ ಜಗಳವಾಗಿದೆ. ಇದರಿಂದ ಇನ್ನಷ್ಟು ಕೋಪಗೊಂಡು ಎರಡು ಕುಟುಂಬಗಳ ನಡುವೆ ಮಾತಿನ ಚಕಮಕಿ ನಡೆದಿದೆ.ಮಾತಿಗೆ ಮಾತು ಬೆಳೆದು ಮದುವೆಯಲ್ಲಿ ಜಗಳ ಶರುವಾಗಿದೆ. ಕುಟುಂಬಸ್ಥರು ಮದುವೆ ಮನೆಯಲ್ಲಿದ್ದ ಕುರ್ಚಿಗಳನ್ನು ತಳ್ಳಿ ಹಾಕಿ ಅದರಿಂದ ಪರಸ್ಪರ ಹೊಡೆದಾಡಿಕೊಂಡಿದ್ದಾರೆ. ಘಟನೆ ತಿಳಿದು ಸ್ಥಳಕ್ಕೆ ಬಂದ ಪೊಲೀಸರು ಎರಡು ಕಡೆಯವರನ್ನು ಸಮಾಧಾನ ಮಾಡಿ ಠಾಣೆಗೆ ಕರೆದುಕೊಂಡು ಹೋಗಿದ್ದಾರೆ.