ನ್ಯೂಸ್ ನಾಟೌಟ್ : ಕೊಡಗಿನಲ್ಲಿ ಕಾಡು ಪ್ರಾಣಿಗಳ ಹಾವಳಿ ಮಿತಿ ಮೀರಿದೆ.ಅದರಲ್ಲೂ ಕಾಡಾನೆಗಳು ರಾಜಾರೋಷವಾಗಿ ನಾಡಿನತ್ತ ಹೆಜ್ಜೆ ಹಾಕುತ್ತಿದ್ದು,ಕೃಷಿ ತೋಟಗಳಿಗೆ ಹಾನಿ ಮಾಡುತ್ತಿದೆ. ಈ ಹಿಂದೆಯೂ ಕಾಡಾನೆಗಳು ಉಪಟಳದ ಬಗ್ಗೆ ವರದಿಯಾಗಿತ್ತು.ಇದರ ಬೆನ್ನಲ್ಲೇ ಇದೀಗ ಮತ್ತೊಂದು ಅಂತಹುದ್ದೇ ಘಟನೆ ಬಗ್ಗೆ ವರದಿಯಾಗಿದೆ.
ಕೊಡಗಿನ ಕುಶಾಲನಗರ ತಾಲೂಕಿನ ಕಣಿವೆ ಸಮೀಪದ ಚಿನ್ನೇನಹಳ್ಳಿಯಲ್ಲಿ ಕಾಡಾನೆ ದಾಳಿಗೆ ವೃದ್ಧೆಯೊಬ್ಬರು ಕಾಲು ಮುರಿದುಕೊಂಡಿದ್ದಾರೆ. ಚಿನ್ನೇನಹಳ್ಳಿಯ ವೆಂಕಟಮ್ಮ ಆನೆ ದಾಳಿಗೆ ಒಳಗಾದವರು ಎಂದು ತಿಳಿದು ಬಂದಿದೆ.ಪರಿಣಾಮ ಅವರ ಕಾಲು ಸಂಪೂರ್ಣ ಜಖಂ ಗೊಂಡ ಸ್ಥಿತಿಯಲ್ಲಿದೆ.
ವೆಂಕಟಮ್ಮ ಬಹಿರ್ದೆಸೆಗೆಂದು ತೆರಳಿದಾಗ ಸಲಗವೊಂದು ದಿಢೀರ್ ದಾಳಿ ನಡೆಸಿದೆ. ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಗಾಯಾಳು ವೆಂಕಟಮ್ಮರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ತಿಳಿದು ಬಂದಿದೆ.