ಡ್ರೋನ್ ಪ್ರತಾಪ್ ವಿರುದ್ಧ ಜೆಡಿಎಸ್ ದೂರು ನೀಡಲು ಸಿದ್ಧತೆ ನಡೆಸುತ್ತಿರುವುದೇಕೆ..? ಏನಿದು ಬಿಗ್ ಬಾಸ್ ರನ್ನರ್ ಅಪ್ ವಿರುದ್ಧ ಮತ್ತೊಂದು ವಂಚನೆ ಆರೋಪ..?

ನ್ಯೂಸ್ ನಾಟೌಟ್: ಒಂದಿಲ್ಲೊಂದು ವಂಚನೆ ಆರೋಪಗಳನ್ನು ಎದುರಿಸುತ್ತಿರುವ ಬಿಗ್ ಬಾಸ್ ರನ್ನರ್ ಅಪ್ ಡ್ರೋನ್ ಪ್ರತಾಪ್ ಜೆಡಿಎಸ್ (JDS) ನಿಂದ ಟಿಕೆಟ್ ಕೊಡಿಸೋದಾಗಿ ಹಣ ಪಡೆದು ವಂಚನೆ ಮಾಡಿರೊ ಆರೋಪ ಎದುರಿಸುತ್ತಿದ್ದು, ಆತನ ವಿರುದ್ಧ ದೂರು ನೀಡಲು ಜೆಡಿಎಸ್ ಮುಂದಾಗಿದೆ ಎಂದು ವರದಿ ತಿಳಿಸಿದೆ. 2 ಲಕ್ಷ ಹಣ ಪಡೆದು ಜಿಲ್ಲಾ ಪಂಚಾಯಿತಿ ಚುನಾವಣೆಗೆ ಜೆಡಿಎಸ್ ಟಿಕೆಟ್ ಕೊಡಿಸೋದಾಗಿ ವಂಚನೆ ಮಾಡಿರೋ ಬಗ್ಗೆ ಚಂದನ್ ಎಂಬುವರಿಂದ ಕಮೀಷನರ್ ಗೆ ದೂರು (Complainant) ನೀಡಲಾಗಿತ್ತು. ದೂರಿನ ಜೊತೆಗೆ ಚಂದನ್ ಗೆ ಡ್ರೋನ್ ಪ್ರತಾಪ್ ಟಿಕೆಟ್ ಕೊಡಿಸುವ ಬಗ್ಗೆ ಮಾತನಾಡಿರೋ ಆಡಿಯೋ ಬಿಡುಗಡೆ ಮಾಡಿದ್ದಾರೆ. ಆಡಿಯೋದಲ್ಲಿ ಮಾಜಿ ಮುಖ್ಯಮಂತ್ರಿ ಕುಮಾರ ಸ್ವಾಮಿ (H.D. Kumaraswamy) ಹಾಗೂ ಡಿಕೆಶಿ, ಅನ್ನದಾನಿಯ ಹೆಸರು ಪ್ರಸ್ತಾಪ ಮಾಡಿ ಡ್ರೋನ್ ಮಾತನಾಡಿದ್ದಾರೆ ಹಾಗಾಗಿ ಹೆಚ್ ಡಿಕೆ ಹೆಸರು ಹೇಳಿಕೊಂಡು ವಂಚನೆ ಮಾಡಿರೋ ಆರೋಪದ ಮೇಲೆ ಡ್ರೋನ್ ಪ್ರತಾಪ್ ವಿರುದ್ಧ ದೂರು ಕೊಡಲು ಜೆಡಿಎಸ್ ಮುಂದಾಗಿದೆ. ಈ ಹಿಂದೆಯು ಡ್ರೋನ್ ಪ್ರತಾಪ್ (Drone Pratap) ಬಿಗ್ ಬಾಸ್ ಮನೆಯಲ್ಲಿ ಇದ್ದಾಗ ಹಲವಾರು ರೀತಿಯಲ್ಲಿ ಅವರ ಮೇಲೆ ಆರೋಪ ಮಾಡಲಾಗಿತ್ತು. ಡಾ.ಪ್ರಯಾಗ್ ಮಾನನಷ್ಟ ದಾವೆ ಹೂಡಿದ್ದರೆ, ಸಾರಂಗ ಎನ್ನುವವರು ಹಣಕಾಸಿನ ವಿಷಯದಲ್ಲಿ ತಮಗೆ ಮೋಸವಾಗಿದೆ ಎಂದು ಆರೋಪ ಮಾಡಿದ್ದರು.