ನ್ಯೂಸ್ ನಾಟೌಟ್ :ಕಳೆದ ವಿಧಾನಸಭೆ ಚುನಾವಣೆಯಲ್ಲಿ (assembly election) ಪುತ್ತೂರು ಕ್ಷೇತ್ರ ಭಾರಿ ಕುತೂಹಲದ ಕೇಂದ್ರವಾಗಿತ್ತು. ಬಿಜೆಪಿಯಿಂದ (BJP) ಹೊರಬಿದ್ದು ಅರುಣ್ ಪುತ್ತಿಲ ಅವರು ಪುತ್ತೂರು ಕ್ಷೇತ್ರದಿಂದ ಸ್ವತಂತ್ರವಾಗಿ (independent candidate) ಸ್ಪರ್ಧಿಸಿ,ಸೋತಿದ್ದರು. ಇದೀಗ ಅರುಣ್ ಕುಮಾರ್ ಪುತ್ತಿಲ (Arun Kumar Puthila) ಮತ್ತೆ ಬಿಜೆಪಿಗೆ ಸೇರೋ ಬಗ್ಗೆ ಮಹತ್ವದ ಚರ್ಚೆ ನಡೆದಿತ್ತು.ಮಾತ್ರವಲ್ಲ ಬಿಜೆಪಿಗೆ ಕೆಲವು ಕಂಡಿಷನ್ಸ್ನ್ನು ಪುತ್ತಿಲ ಪರಿವಾರ ನಾಯಕರು ಅವರು ನೀಡಿದ್ದರು.ಇದೀಗ ಬಿಜೆಪಿ ಪ್ರಮುಖರ ಜತೆಗೆ ಅರುಣ್ ಕುಮಾರ್ ಪುತ್ತಿಲ ಸಂಧಾನ ಯಶಸ್ವಿಯಾಗಿದೆಯೆಂದು ತಿಳಿದು ಬಂದಿದೆ.
ಎಲ್ಲವೂ ಅಂದು ಕೊಂಡಂತೆ ನಡೆದರೆ ಇದೀಗ ಇನ್ನೆರಡು ದಿನಗಳಲ್ಲಿ ಬಿಜೆಪಿ ಸೇರ್ಪಡೆಗೆ ಮುಹೂರ್ತ ಫಿಕ್ಸ್ ಆಗಿದೆ ಎನ್ನಲಾಗಿದೆ.ಪುತ್ತಿಲ ಜೊತೆ ಫೋನ್ ಮೂಲಕ ರಾಜ್ಯ ಬಿಜೆಪಿ ನಾಯಕರು ಮಾತುಕತೆ ನಡೆಸಿದ್ದು,ಈ ವೇಳೆ ಪುತ್ತಿಲ ಬೇಡಿಕೆಗೆ ಅಸ್ತು ಎಂದಿದ್ದಾರೆ ಎನ್ನಲಾಗಿದೆ.ಅರುಣ್ ಕುಮಾರ್ ಪುತ್ತಿಲ ಪರ ಆರ್ ಎಸ್ ಎಸ್ ಪ್ರಮುಖರು ನಿಂತಿದ್ದಾರಂತೆ. ಈ ಹಿನ್ನೆಲೆಯಲ್ಲಿ ಪುತ್ತಿಲ ಅವರೊಂದಿಗೆ ಗೌಪ್ಯ ಮಾತುಕತೆ ನಡೆಸಿದ ಬಿಜೆಪಿ ಪ್ರಮುಖರು ಸಂಧಾನ ಯಶಸ್ವಿಗೊಳಿಸಿದ್ದಾರೆ ಎನ್ನಲಾಗುತ್ತಿದೆ.ಕೆಲ ದಿನಗಳ ಹಿಂದೆ ಸಭೆ ನಡೆದಿದ್ದು ಪುತ್ತಿಲ ಪರಿವಾರದ ಕಾರ್ಯಕರ್ತರು ಬಿಜೆಪಿ ಸೇರಲು ಸಿದ್ಧ ಆದರೆ ಯಾವುದೇ ಕಾರಣಕ್ಕೂ ಕ್ಷಮೆ ಕೇಳೋಕೆ ಸಾಧ್ಯವಿಲ್ಲ ಎಂದು ಪುತ್ತಿಲ ಪರಿವಾರದವರು ಹೇಳಿದ್ದರು.
ಪುತ್ತೂರು ಗ್ರಾಮಾಂತರ ಮತ್ತು ನಗರ ಮಂಡಲ ಒಟ್ಟು ಸೇರಿಸಿ ಅಧ್ಯಕ್ಷ ಸ್ಥಾನ ನೀಡಬೇಕೆಂಬುದು ಪುತ್ತಿಲ ಪರಿವಾರದ ಮುಖಂಡರ ಬೇಡಿಕೆಯಾಗಿತ್ತು. ಈ ತೀರ್ಮಾನಕ್ಕೆ ನಾನು ಬದ್ಧ ಅಂತ ಹೇಳಿದ್ದರು.ಅಲ್ಲದೇ, ನನಗೆ ಅಧ್ಯಕ್ಷ ಸ್ಥಾನ ನೀಡದಿದ್ದರೂ ಪರವಾಗಿಲ್ಲ. ಆದರೆ ಬಿಜೆಪಿ ಪಕ್ಷಕ್ಕಾಗಿಯೇ ದುಡಿದಿರುವ ಇಬ್ಬರು ನಾಯಕರಿಗೆ ಮಂಡಲ ಸ್ಥಾನವನ್ನು ನೀಡಿ ಎಂದು ಅರುಣ್ ಕುಮಾರ್ ಪುತ್ತಿಲ ಬೇಡಿಕೆ ಮುಂದಿಟ್ಟಿದ್ದರು.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಅರುಣ್ ಕುಮಾರ್ ಪುತ್ತಿಲ ಸ್ಪರ್ಧೆಯಿಂದ ಬಿಜೆಪಿ ಹೀನಾಯ ಸೋಲು ಕಂಡಿತ್ತು. ಸುಮಾರು 63 ಸಾವಿರ ಮತಗಳನ್ನು ಪಡೆದುಕೊಂಡಿದ್ದ ಅರುಣ್ ಕುಮಾರ್ ಪುತ್ತಿಲ ಅವರು ಬಿಜೆಪಿಯನ್ನು ಮೂರನೇ ಸ್ಥಾನಕ್ಕೆ ತಳ್ಳಿದ್ದರು.ದಕ್ಷಿಣ ಕನ್ನಡದ ಬಿಜೆಪಿ ಭದ್ರಕೋಟೆ ಎಂದು ಖ್ಯಾತಿ ಪಡೆದಿದ್ದ ಕ್ಷೇತ್ರದಲ್ಲಿ ಬಿಜೆಪಿಗೆ ಮುಖಭಂಗ ಎದುರಾಗಿತ್ತು. ಈ ಹಿನ್ನೆಲೆಯಲ್ಲಿ ಅರುಣ್ ಕುಮಾರ್ ಅವರು ಕ್ಷಮೆ ಕೇಳಿ, ಯಾವುದೇ ಹುದ್ದೆ ಇಲ್ಲದೇ ಪಕ್ಷಕ್ಕೆ ಬರುವುದಾದರೆ ಸ್ವಾಗತ ಮಾಡ್ತೀವಿ ಅಂತ ಸ್ಥಳೀಯ ಬಿಜೆಪಿ ಮುಖಂಡರು ಹೇಳಿದ್ದರು.ಇದೀಗ ಭಾರಿ ಬೆಳವಣಿಗೆಗಳಾಗಿದ್ದು,ಭಾರಿ ಸಂಚಲನ ಮೂಡಿಸಿದೆ.