ನ್ಯೂಸ್ ನಾಟೌಟ್:ಶಾಲೆಯ ಮೆಟ್ಟಿಲು ಹತ್ತಿ ಆಟ-ಪಾಠಗಳನ್ನು ಕಲಿಯಬೇಕಾದ ಪ್ರಾಯದಲ್ಲಿಯೇ ಹಿಂದಿನ ಕಾಲದಲ್ಲಿ ಹುಡುಗ -ಹುಡುಗಿಗೆ ಮದುವೆ ಮಾಡಿಸಲಾಗುತ್ತಿತ್ತು.ಆದರೆ ಅಂತಹ ಅನಿಷ್ಟ ಪದ್ಧತಿಗೆ ಬ್ರೇಕ್ ಹಾಕಲಾಗಿದೆ. ದೇಶದಲ್ಲಿ ಬಾಲ್ಯ ವಿವಾಹವನ್ನು ನಿಷೇಧಿಸಲಾಗಿದ್ದರೂ ಇದು ಸಂಪೂರ್ಣ ನಿಯಂತ್ರಣ ಬಂದಿಲ್ಲ ಅನ್ನೋದಕ್ಕೆ ಈ ಘಟನೆಯೇ ಇದೀಗ ಸಾಕ್ಷಿಯಾಗಿದೆ.
ಹೌದು, ಹುಡುಗಿಯರಿಗೆ 18 ಹಾಗೂ ಹುಡುಗರಿಗೆ 21 ವರ್ಷವೆಂದು ವಿವಾಹಕ್ಕೆ ವಯಸ್ಸನ್ನು ನಿಗದಿಪಡಿಸಲಾಗಿದ್ದರೂ ಬಾಲ್ಯ ವಿವಾಹಗಳು ನಡೆಯುತ್ತಿರುವ ಬಗ್ಗೆ ವರದಿಯಾಗುತ್ತಲೇ ಇದೆ.ಇಂತಹದ್ದೆ ಒಂದು ಘಟನೆ ಇದೀಗ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ನಡೆದಿದೆ. ತಂದೆ ತಾಯಿಗೆ ಮಾಹಿತಿಯನ್ನು ನೀಡದ ಅಪ್ರಾಪ್ತ ಬಾಲಕಿಯನ್ನು ಆಕೆಯ ದೊಡ್ಡಪ್ಪ ದೊಡ್ಡಮ್ಮ ಯುವಕನೊಂದಿಗೆ ಮದುವೆ ಮಾಡಿಸಿರುವ ಘಟನೆ ಬೆಳಕಿಗೆ ಬಂದಿದೆ.
ಸದ್ಯ ಯುವತಿ ಎಂಟನೇ ತರಗತಿಯಲ್ಲಿ ಓದುತ್ತಿದ್ದು, ಈಗ ಆಕೆಗೆ ಕೇವಲ 14 ವರ್ಷವಾಗಿದೆಯಷ್ಟೆ. ಯುವಕನಿಗೆ 24 ವರ್ಷವಾಗಿದೆ. ದೂರುದಾರ ಮಹಿಳೆಯ ಅತ್ತೆ , ಭಾವ, ಭಾವನ ಪತ್ನಿ ವಿರುದ್ದ ದೂರು ದಾಖಲು ಮಾಡಲಾಗಿದೆ. ಇದೇ ತಿಂಗಳು 15 ರಂದು ಯುವತಿಯ ಅಜ್ಜಿ, ದೊಡ್ಡಪ್ಪ-ದೊಡ್ಡಮ್ಮ ತಂದೆ-ತಾಯಿಯಾಗಿರುವ ನಮಗೆ ಗೊತ್ತೆ ಇಲ್ಲದೆ ಮದುವೆ ಮಾಡಿಸಿದ್ದಾರೆ.ಜೊತೆಗೆ ಹಲಸಿನಕಾಯಿಪುರ ಗ್ರಾಮದ ವಿನೋದ್ ಕುಮಾರ್ ಜೊತೆಯಲಿ ಮದುವೆ ಮಾಡಿಸಿದ್ದಾರೆ. ಮದುವೆಗೆ ವಿನೋದ್ ಕುಮಾರ್ ತಂದೆ ಮುನಿಯಪ್ಪ, ತಾಯಿ ರತ್ನಮ್ಮ, ವಿನೋದ್ ಕುಮಾರ್, ಅಣ್ಣ ವಿಜಯ್ ಕುಮಾರ್ ಮತ್ತು ಮುನಿಯಪ್ಪ, ವೆಂಕಟಮ್ಮರವರು ಸೇರಿ ಮದುವೆ ಮಾಡಿದ್ದಾರೆ. ಯುವತಿಯ ತಾಯಿ ಸರ್ಜಾಪುರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಬಾಲ್ಯವಿವಾಹದ ಪಿಡುಗಿಗೆ ಮತ್ತೊಂದು ಬಾಲಕಿಯ ಜೀವನ ಬಲಿಯಾಗಿದೆ.