ನ್ಯೂಸ್ ನಾಟೌಟ್ : ಆತ ಕಳ್ಳತನ ಮಾಡಿ ಜೈಲುಪಾಲಾಗಿದ್ದ, ಆತ ಮಾಡಿದ ತಪ್ಪಿಗೆ ಶಿಕ್ಷೆ ಪ್ರಮಾಣ ಪ್ರಕಟಿಸುತ್ತಿದ್ದ ವೇಳೆಯೇ ಆತ ನ್ಯಾಯಾಧೀಶೆಗೆ ಪ್ರಫೋಸ್ ಮಾಡಿ ಮತ್ತೊಂದು ಯಡವಟ್ಟು ಮಾಡಿಕೊಂಡಿದ್ದಾನೆ.
ಈ ಘಟನೆ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದ್ದು, ಆತನ ವರ್ತನೆಗೆ ಅನೇಕರು ಕಿಡಿಕಾರಿದ್ದಾರೆ. ಈ ವಿಚಿತ್ರ ಘಟನೆಗೆ ನಡೆದದ್ದು ಫ್ಲೋರಿಡಾದ ಬ್ರೋವರ್ಡ್ ಕೌಂಟಿ ಕೋರ್ಟ್ ನಲ್ಲಿ ಎನ್ನಲಾಗಿದೆ. ವಿಡಿಯೋದಲ್ಲಿ ಒಂದೆಡೆ ಕಳ್ಳತನದ ಆರೋಪಿ ಡೆಮೆಟ್ರಿಯಸ್ ಲೂಯಿಸ್ ಇದ್ದರೆ, ಮತ್ತೊಂದು ಕಡೆ ಮಹಿಳಾ ಜಡ್ಜ್ ತಬಿತಾ ಬ್ಲ್ಯಾಕ್ಮನ್ ವಿಚಾರಣೆ ನಡೆಸಲು ಹಾಜರಾಗುತ್ತಾರೆ.
ವರ್ಚುವಲ್ ಕೋರ್ಟ್ ಮೂಲಕ ನ್ಯಾಯಾಧೀಶೆ ತೀರ್ಪಿನ ಪ್ರತಿ ಓದಲು ಆರಂಭಿಸುತ್ತಿದ್ದಂತೆ ಸುಮ್ಮನೇ ನಿಲ್ಲದ ಆರೋಪಿ ವಿಚಿತ್ರವಾಗಿ ವರ್ತಿಸಲು ಶುರು ಮಾಡುತ್ತಾನೆ. ನ್ಯಾಯಾಧೀಶರೇ ನೀವು ನೋಡಲು ಬಹಳ ಸುಂದರವಾಗಿದ್ದೀರಾ.. ನಾನು ನಿಮಗೆ ಹೇಳುವುದು ಇಷ್ಟೇ, ನಾನು ನಿಮ್ಮನ್ನು ಪ್ರೀತಿಸುತ್ತಿದ್ದೇನೆ’ ಎಂದು ಹೇಳುವ ಮೂಲಕ ತೀರ್ಪು ಪ್ರಕಟಿಸಲು ಆತ ಅಡ್ಡಿಯನ್ನುಂಟು ಮಾಡಿದ್ದಾನೆ.
ಆರೋಪಿ ಹೀಗೆ ಹೇಳುತ್ತಿದ್ದಂತೆಯೇ ತುಸು ವಿಚಲಿತರಾದ ಮಹಿಳಾ ಜಡ್ಜ್ ಬಳಿಕ ನಗೆಯಾಡಿದ್ದಾರೆ. ಅಲ್ಲದೇ ಎಲ್ಲಿ ಬೇಕಿದ್ದರೂ ನೀನು ಕಳ್ಳತನ ಮಾಡಬಹುದು. ಆದರೆ ಕೋರ್ಟ್ನಲ್ಲಿ ಅಲ್ಲ ಎಂದು ಹೇಳಿದ್ದಾರೆ.
ಈ ವಿಡಿಯೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಲೂಯಿಸ್ನ ಕಳ್ಳತನದ ಆರೋಪ ಹಾಗೂ ಕೋರ್ಟ್ನಲ್ಲಿ ಆತ ಈ ರೀತಿ ವರ್ತಿಸಲು ಕಾರಣವೇನು ಎಂಬುದನ್ನು ಕಂಡುಕೊಂಡ ನ್ಯಾಯಾಧೀಶೆ ತಬಿತಾ, ಆತನಿಗೆ 5 ಸಾವಿರ ಡಾಲರ್ ದಂಡ ವಿಧಿಸಿ ಆದೇಶಿಸಿದ್ದಾರೆ. ನ್ಯೂಯಾರ್ಕ್ ಪೋಸ್ಟ್ ವರದಿಯ ಪ್ರಕಾರ, ಲೂಯಿಸ್ ಈಗಾಗಲೇ 4 ವರ್ಷಗಳ ಜೈಲುವಾಸ ಅನುಭವಿಸಿದ್ದಾನೆ. ನ್ಯಾಯಾಧೀಶೆ ಜೊತೆ ಅನುಚಿತವಾಗಿ ವರ್ತಿಸಿದ್ದಕ್ಕೆ ಆತನಿಗೆ ಯಾವುದೇ ಶಿಕ್ಷೆ ವಿಧಿಸಿಲ್ಲ ಎನ್ನಲಾಗಿದೆ.