ನ್ಯೂಸ್ ನಾಟೌಟ್ : ಮತದಾರರನ್ನು ಸೆಳೆಯಲು ಮದ್ಯ ಹಂಚೋದನ್ನು ,ಹಣ ಹಂಚೋದನ್ನು ಕೇಳಿದ್ದೇವೆ. ಆದರೆ ಇದೇನಿದು ಹೊಸ ವಿಧಾನ..?ಸದ್ಯ ಈ ಸುದ್ದಿ ಎಲ್ಲೆಡೆ ವೈರಲ್ ಆಗುತ್ತಿದೆ. ಮಾತ್ರವಲ್ಲ ಈ ಕುರಿತಾದ ವಿಡಿಯೋ ತುಣುಕೊಂದು ಹರಿದಾಡುತ್ತಿದ್ದು, ನೆಟ್ಟಿಗರು ಗರಂ ಆಗಿದ್ದಾರೆ.
ಆಡಳಿತಾರೂಢ ವೈಎಸ್ಆರ್ ಕಾಂಗ್ರೆಸ್ ಪಕ್ಷದ ನಾಯಕರು ಮತ್ತು ವಿರೋಧ ಪಕ್ಷ ತೆಲುಗು ದೇಶಂ ಪಕ್ಷದ ನಾಯಕರು ತಮ್ಮ ಪಕ್ಷದ ಚಿಹ್ನೆಗಳನ್ನು ಒಳಗೊಂಡ ಕಾಂಡೋಮ್ ಪ್ಯಾಕೆಟ್ಗಳನ್ನು ಹಂಚಿದ್ದಾರೆ ಎಂದು ಹೇಳಲಾಗಿದೆ. ಲೋಕಸಭಾ ಚುನಾವಣೆಯ ಹೊತ್ತಲ್ಲೇ ಕಾಂಡೋಮ್ ಇದೀಗ ಸದ್ದು ಮಾಡುತ್ತಿದ್ದು, ಆಂಧ್ರಪ್ರದೇಶದಲ್ಲಿ ಇವುಗಳು ಚುನಾವಣಾ ಪ್ರಚಾರದ ಸಾಧನವಾಗಿ ಮಾರ್ಪಟ್ಟಿವೆ ಎಂದರೆ ಖೇದಕರ ಸಂಗತಿ.
ಸದ್ಯ ಈ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಕಾಂಡೋಮ್ ಪ್ಯಾಕ್ಗಳನ್ನು ಎರಡೂ ಪಕ್ಷಗಳ ಚಿಹ್ನೆಗಳೊಂದಿಗೆ ಗುರುತಿಸಲಾಗಿದ್ದು, ಆಡಳಿತ ವೈಎಸ್ಆರ್ ಕಾಂಗ್ರೆಸ್ ಪಕ್ಷ ಮತ್ತು ಪ್ರಮುಖ ವಿರೋಧ ಪಕ್ಷವಾದ ತೆಲುಗು ದೇಶಂ ಪಾರ್ಟಿ (ಟಿಡಿಪಿ), ಪಕ್ಷದ ಕಾರ್ಯಕರ್ತರು ಮತದಾರರಿಗೆ ಹಂಚುತ್ತಿದ್ದಾರೆ ಎಂದು ಆರೋಪ ಕೇಳಿ ಬಂದಿದೆ.ಈ ಕಾಂಡೋಮ್ ಪ್ಯಾಕೆಟ್ಗಳು ಲೋಕಸಭೆ ಚುನಾವಣೆಗಾಗಿ ಮನೆ ಮನೆಗೆ ಪ್ರಚಾರ ನಡೆಸುತ್ತಿರುವ ಪಕ್ಷದ ಮುಖಂಡರು ಸಾರ್ವಜನಿಕರಿಗೆ ವಿತರಿಸಿದ ಕಿಟ್ನ ಭಾಗವಾಗಿದೆ ಎಂದೂ ಹೇಳಲಾಗಿದೆ.
ಈ ವೇಳೆ ವ್ಯಕ್ತಿಯೊಬ್ಬ ಕಾಂಡೋಮ್ಗಳನ್ನು ಏಕೆ ವಿತರಿಸಲಾಗುತ್ತಿದೆ ಎಂದು ಟಿಡಿಪಿ ಕಾರ್ಯಕರ್ತ ಎಂದು ಹೇಳಲಾದವನನ್ನು ಕೇಳಿದಾಗ,ಆತ ಕೊಟ್ಟ ಉತ್ತರ ಹೀಗಿತ್ತು..’ಹೆಚ್ಚು ಮಕ್ಕಳಿದ್ದರೆ, ಹೆಚ್ಚಿನ ಹಣವನ್ನು ವಿತರಿಸಬೇಕು. ಅದಕ್ಕಾಗಿಯೇ ಈ ಕಾಂಡೋಮ್ಗಳನ್ನು ವಿತರಿಸಲಾಗುತ್ತಿದೆ’ ಎಂದು ಉತ್ತರಿಸಿರುವುದನ್ನು ವೀಡಿಯೋದಲ್ಲಿ ಗಮನಿಸಬಹುದಾಗಿದೆ.ಒಟ್ಟಿನಲ್ಲಿ ಮತದಾರರನ್ನು ಸೆಳೆಯೋದಕ್ಕೆ ಇನ್ಯಾವ ತಂತ್ರಗಳಿಯೋ ಅನ್ನೋದನ್ನು ಕಾದು ನೋಡಬೇಕಾಗಿದೆ.