ನ್ಯೂಸ್ ನಾಟೌಟ್ :ಆರೋಗ್ಯ ಸಮಸ್ಯೆಗಳಿಂದಾಗಿ ಯುವಕರು ಬಲಿಯಾಗುತ್ತಿರುವವರ ಸಂಖ್ಯೆ ಜಾಸ್ತಿಯಾಗಿದೆ.ಇದೀಗ ಡೆಂಗ್ಯೂ ಜ್ವರದಿಂದಾಗಿ ಯುವತಿಯೊಬ್ಬರು ಮೃತಪಟ್ಟ ಹೃದಯ ವಿದ್ರಾವಕ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ.ನಗರದ ಮಹಮ್ಮದ್ ಖಾನ್ ಗಲ್ಲಿ ನಿವಾಸಿ ಸಹರಾ ಬಾನು (18) ಮೃತಪಟ್ಟವರು ಎಂದು ತಿಳಿದು ಬಂದಿದೆ.
ಎಂಇಎಸ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ ಈಕೆ ಕಳೆದ ಎರಡು ತಿಂಗಳಿಂದ ಜ್ವರದಿಂದ ಬಳಲುತ್ತಿದ್ದಳು ಎಂದು ತಿಳಿದು ಬಂದಿದೆ.ಈ ಜ್ವರ ಇಲ್ಲಿನ ಕೆಲ ಸಮಸ್ಯೆಗಳಿಂದಾಗಿಯೇ ಬಂದಿದೆ ಅನ್ನೋದು ಸ್ಥಳೀಯರ ವಾದ.ಕಳೆದ ನಾಲ್ಕು ತಿಂಗಳ ಹಿಂದೆ ಯುಜಿಡಿ ಪೈಪ್ ಬದಲಾವಣೆ ಮಾಡಲು ರಸ್ತೆ ಅಗೆದು, ರಸ್ತೆ ಕ್ಲಿಯರ್ ಮಾಡದೆ ಚರಂಡಿಯಲ್ಲಿ ಮಣ್ಣು, ಕಸ, ಕಡ್ಡಿ, ಕೊಳಚೆ ತುಂಬಿದ್ದು, ಇಲ್ಲಿನ ನಿವಾಸಿಗಳು ನಗರಸಭೆ ಗಮನಕ್ಕೂ ತಂದಿದ್ದರೂ ಪ್ರಯೋಜನವಾಗಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ದೂರು ನೀಡಿದಾಗ ಕೆಲಸ ವಹಿಸಿಕೊಂಡ ಕಂಟ್ರಾಕ್ಟರ್ ಕಾಟಾಚಾರಕ್ಕೆ ಕೆಲಸ ನಿರ್ವಹಿಸಿ ತೆರಳುತ್ತಿದ್ದಾರೆ ಎನ್ನುವ ಆರೋಪವು ಇದ್ದು, ಅಕ್ಕಪಕ್ಕದ ಮನೆಯವರೂ ಕಸ ಕಡ್ಡಿಯನ್ನು ರಸ್ತೆಗೆ ಬಿಸಾಕುವ ಪರಿಪಾಠ ಹೊಂದಿದ್ದು ಇದರಿಂದಾಗಿ ಸೊಳ್ಳೆಗಳ ಉತ್ಪತ್ತಿ ಜೋರಾಗಿದೆ ಎನ್ನುವುದು ನಗರಸಭೆ ಕಠಿಣ ಕ್ರಮ ತೆಗೆದುಕೊಳ್ಳುವಂತೆ ಆಗ್ರಹಿಸಿದ್ದಾರೆ.