ನ್ಯೂಸ್ ನಾಟೌಟ್ : ಒಂದೊದ್ಸಲ ಗ್ಯಾಸ್ ತಕ್ಷಣ ಖಾಲಿಯಾದಾಗ ಏನು ಮಾಡಬೇಕೆಂಬುದೇ ತೋಚೋದೇ ಇಲ್ಲ.. ಅದರಲ್ಲೂ ರಾತ್ರಿ ವೇಳೆ ಈ ಸಮಸ್ಯೆ ತಲೆದೋರಿದ್ರೆ ಇನ್ನೂ ಕಷ್ಟವಾಗ್ಬಿಡುತ್ತೆ.ಆದರೆ ಇಲ್ಲೊಬ್ಬ ಯುವಕ ಅದ್ಯಾವುದಕ್ಕೂ ಟೆನ್ಷನ್ ಮಾಡಿಕೊಳ್ಳಲೇ ಇಲ್ಲ. ವಾಟರ್ ಹೀಟರ್ ರಾಡ್ ನ್ನು ಬಳಸಿ ಅಡುಗೆ ಮಾಡಿದ್ದಾನೆ..!
ಸಾಮಾಜಿಕ ಜಾಲತಾಣದಲ್ಲಿ ದೇಸಿ ಜುಗಾಡ್ ಉಪಾಯಗಳ ಕುರಿತ ಒಂದಲ್ಲಾ ಒಂದು ವಿಡಿಯೋಗಳು ಹರಿದಾಡುತ್ತಲೇ ಇರುತ್ತವೆ. ಸದ್ಯ ಅದೇ ರೀತಿಯ ವಿಡಿಯೋವೊಂದು ಇದೀಗ ಹರಿದಾಡುತ್ತಿದ್ದು, ಗ್ಯಾಸ್ ಖಾಲಿಯಾಯಿತೆಂದು ವ್ಯಕ್ತಿಯೊಬ್ಬ ವಾಟರ್ ಹೀಟರ್ ರಾಡ್ ಸಹಾಯದಿಂದ ಸಾಂಬಾರ್ ಬೇಯಿಸಿದ್ದಾನೆ. ಈ ವಿಡಿಯೋವನ್ನು @sahoo_341 ಎಂಬ ಹೆಸರಿನ ಇನ್ಸ್ಟಾಗ್ರಾಮ್ ಪೇಜ್ ಒಂದರಲ್ಲಿ ಹಂಚಿಕೊಳ್ಳಲಾಗಿದೆ.
ವೈರಲ್ ವಿಡಿಯೋದಲ್ಲಿ ವ್ಯಕ್ತಿಯೊಬ್ಬ ಅಡುಗೆ ಮಾಡುವ ಸಮಯದಲ್ಲಿ ಗ್ಯಾಸ್ ಖಾಲಿಯಾಗಿ ಹೋಗುತ್ತೆ. ಈ ಸಾಂಬಾರ್ ಅನ್ನು ಇನ್ನೂ ಹೇಗಪ್ಪಾ ಬೇಯಿಸೋದು ಎಂದು ಯೋಚಿಸಿದ ಆತ, ತನ್ನ ಜುಗಾಡ್ ಐಡಿಯಾವನ್ನು ಉಪಯೋಗಿಸಿಕೊಂಡು ವಾಟರ್ ಹೀಟರ್ ರಾಡ್ ಸಹಾಯದಿಂದ ಸಾಂಬಾರ್ ಬೇಯಿಸುತ್ತಿರುವ ದೃಶ್ಯವನ್ನು ಕಾಣಬಹುದು.
ಸದ್ಯ ಈ ವಿಡಿಯೋ ಬಾರಿ ವೈರಲ್ ಆಗಿದೆ.ಫೆಬ್ರವರಿ 03 ರಂದು ಹಂಚಿಕೊಳ್ಳಲಾದ ಈ ವಿಡಿಯೋ 15.1 ಮಿಲಿಯನ್ ವೀಕ್ಷಣೆಗಳನ್ನು ಹಾಗೂ ನಾಲ್ಕುವರೆ ಲಕ್ಷಕ್ಕೂ ಅಧಿಕ ಲೈಕ್ಸ್ ಗಳನ್ನು ಪಡೆದುಕೊಂಡಿದೆ ಹಾಗೂ ತರಹೇವಾರಿ ಕಾಮೆಂಟ್ಸ್ ಗಳೂ ಹರಿದು ಬಂದಿವೆ.