ನ್ಯೂಸ್ ನಾಟೌಟ್: ಇಲ್ಲಿಯವರೆಗೆ ‘ಕರಿಮಣಿ ಮಾಲೀಕ ನೀನಲ್ಲ’ ಎಂದು ಮಜಾ ತಕೊಂಡು ರೀಲ್ಸ್ ಮಾಡುತ್ತಿರುವವರಿಗೆ ಇದೀಗ ಒಂದು ಶಾಕಿಂಗ್ ನ್ಯೂಸ್ .ಅತಿಯಾದ್ರೆ ಅಮೃತವೂ ವಿಷವೆಂಬ ಮಾತಿದೆ.ಹೌದು, ಇಲ್ಲೊಬ್ಬ ವ್ಯಕ್ತಿ ತನ್ನ ಹೆಂಡ್ತಿ ಕರಿಮಣಿ ಮಾಲೀಕ ನೀನಲ್ಲ ಎಂದು ರೀಲ್ಸ್ ಮಾಡಿದ್ದಕ್ಕೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವರದಿಯಾಗಿದೆ.
ಈ ರೀಲ್ಸ್ ಹುಚ್ಚು ತಂದಿಡುವ ಆಪತ್ತು ಒಂದೆರಡಲ್ಲ.. ಇದರಿಂದ ಎಷ್ಟು ಉಪಯೋಗವಿದೆಯೋ ಅಷ್ಟೇ ಅಪಾಯವು ಇದೆ. ಚಿಕ್ಕ ಮಕ್ಕಳಿಂದ ಹಿಡಿದು ಹಿರಿಯರನ್ನು ಬಿಟ್ಟಿಲ್ಲ ಈ ರೀಲ್ಸ್. ದಿನ ಕಳೆದಂತೆ ಹಲವಾರು ವೈರಲ್ ವೀಡಿಯೋಗಳು ಸೃಷ್ಠಿಯಾಗಿತ್ತಲೇ ಇರುತ್ತವೆ. ಈ ಬೆನ್ನಲ್ಲೇ ಎಲ್ಲೂ ನೋಡಿದ್ರೂ ಕರಿಮಣಿ ಮಾಲೀಕ ನೀನಲ್ಲ ಅನ್ನೋ ಹಾಡು ಕೇಳಿಸ್ತಿದೆ.ಆದರೆ ಪತ್ನಿ ಮಾಡಿದ ರೀಲ್ಸ್ ನೋಡಿ ಬೇಸತ್ತ ಗಂಡ ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಹನೂರು ತಾಲೂಕಿನ ಪಿ.ಜಿ.ಪಾಳ್ಯ ಗ್ರಾಮದಲ್ಲಿ ನಡೆದಿದೆ.
ಕಳೆದ ಫೆಬ್ರವರಿ 10ರಂದು ರೂಪಾಳ ತವರು ಮನೆಯಾದ ಗುಂಡಾಪುರಕ್ಕೆ ಕುಮಾರ್ ಹಾಗೂ ರೂಪಾ ತೆರಳಿದ್ದರು. ಒಂದು ದಿನ ಇದ್ದು ಕುಮಾರ್ ಪಿ.ಜಿ.ಪಾಳ್ಯಕ್ಕೆ ವಾಪಾಸಾದರೇ ರೂಪಾ ಅಲ್ಲೇ ಉಳಿದುಕೊಂಡಿದ್ದರು.ರೂಪಾ ಊರಿನಲ್ಲಿದ್ದ ವೇಳೆ ಸೋದರಮಾವ ಹಾಗೂ ಸಹೋದರಿ ಜೊತೆ ಸೇರಿ ಕರಿಮಣಿ ಮಾಲೀಕ ಎಂಬ ಹಾಡಿಗೆ ರೀಲ್ಸ್ ಮಾಡಿ ಸಾಮಾಜಿಕ ಜಾಲತಾಣಕ್ಕೆ ಅಪ್ ಲೋಡ್ ಮಾಡಿದ್ದಾರೆ. ಸುಮ್ಮನಿರಲಾರದ ಸ್ನೇಹಿತರು ಇದನ್ನು ಕುಮಾರ್ನ ಗಮನಕ್ಕೆ ತಂದ ವೇಳೆ ದಂಪತಿ ನಡುವೆ ಮಾತಿನ ಚಕಮಕಿ ನಡೆದು ಕೊನೆಗೆ ಮನನೊಂದ ಪತಿ ಕುಮಾರ್ (33) ಮನೆ ಮುಂಭಾಗದ ಮರಕ್ಕೆ ಸೀರೆಯಿಂದ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.. ಕರಿಮಣಿ ಮಾಲೀಕ ನೀನಲ್ಲ ರೀಲ್ಸ್ ಮಾಡಲು ಹೋಗಿ ಆಕೆಯ ಬಾಳಲ್ಲಿ ಆ ಹಾಡಿನ ಸಾಲು ಶಾಶ್ವತವಾಗಿ ನಿಜವಾದಂತಾಗಿದೆ.