ನ್ಯೂಸ್ ನಾಟೌಟ್: ಬಾಲಿವುಡ್ನ ಜನಪ್ರಿಯ ಜೋಡಿ ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ಅವರ ಅಭಿಮಾನಿಗಳಿಗೆ ಸಿಹಿ ಸುದ್ದಿಯೊಂದನ್ನು ದಂಪತಿ ನೀಡಿದ್ದಾರೆ. ಕಾರಣ ಈ ದಂಪತಿಯು ಶೀಘ್ರದಲ್ಲೇ ಪೋಷಕರಾಗಲಿದ್ದಾರೆ.
ಈ ಕುರಿತು ನಟಿ ದೀಪಿಕಾ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ವೊಂದನ್ನು ಹಂಚಿಕೊಳ್ಳುವ ಮೂಲಕ ತಮ್ಮ ಗರ್ಭಧಾರಣೆಯನ್ನು ಘೋಷಿಸಿದ್ದು.. ಸೆಪ್ಟೆಂಬರ್ನಲ್ಲಿ(Deepika Ranveer first child due date September 2024) ಮಗುವಿಗೆ ಜನ್ಮ ನೀಡುವುದಾಗಿ ತಿಳಿಸಿದ್ದಾರೆ. ದೀಪಿಕಾ ಪ್ರೆಗ್ನೆನ್ಸಿ ಸುದ್ದಿ ಕೇಳಿ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ.
ಇತ್ತೀಚೆಗಷ್ಟೇ ದೀಪಿಕಾ 77ನೇ ಬ್ರಿಟಿಷ್ ಅಕಾಡೆಮಿ ಫಿಲ್ಮ್ ಅವಾರ್ಡ್ಸ್ (BAFTA)ನಲ್ಲಿ ಭಾಗವಹಿಸಿದ್ದರು.. ಆಗ ಸೀರೆಯಲ್ಲಿ ಕಾಣಿಸಿಕೊಂಡ ದೀಪಿಕಾ ಅವರನ್ನು ಗಮನಿಸಿ ಅವರು ಗರ್ಭಿಣಿಯಾಗಿರಬಹುದು ಎಂಬ ಊಹಾಪೋಹಗಳು ಸೋಷಿಯಲ್ ಮಿಡಿಯಾದ ತುಂಬೆಲ್ಲ ಹರಿದಾಡುತ್ತಿದ್ದವು.ಇದೀಗ ಅವರ ಹೇಳಿಕೆ ನಿಜವಾಗಿದೆ.ಇನ್ನು ನಟಿ ದೀಪಿಕಾ ಹಾಗೂ ರಣವೀರ್ 2018ರಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು.ಮದುವೆಯಾಗಿ ಆರು ವರ್ಷಗಳ ನಂತರ ದಂಪತಿ 2024ರ ಸೆಪ್ಟೆಂಬರ್ನಲ್ಲಿ ತಮ್ಮ ಚೊಚ್ಚಲ ಮಗುವಿನ ಆಗಮನದ ನಿರೀಕ್ಷೆಯಲ್ಲಿದ್ದಾರೆ.