ನ್ಯೂಸ್ ನಾಟೌಟ್: ‘ಪ್ರೇಮ ಲೋಕದಿಂದ ಬಂದ ಪ್ರೇಮದ ಸಂದೇಶ’ ಎಂದು ಹೇಳಿದ್ದ ನಟಿ ಈಗ ಹಸಿರನ್ನು ಉಳಿಸಲು ಸಂದೇಶ ಸಾರುತ್ತಿದ್ದಾರೆ. ಹೌದು, ನಿಮ್ಗೆಲ್ಲಾ ಗೊತ್ತಿರೋ ಹಾಗೆ ನಟಿ ಜೂಹಿ ಚಾವ್ಲಾ ಕನ್ನಡದ ಪ್ರೇಮ ಲೋಕ ಚಿತ್ರದಲ್ಲಿ ನಟಿಸಿದವರು. ಪ್ರೇಮ ಲೋಕ ಚಿತ್ರವೆಂದರೆ ಬಹುಶಃ ಗೊತ್ತಿಲ್ಲ ಎನ್ನುವವರು ಯಾರು ಇರಲಿಕ್ಕಿಲ್ಲ.ರವಿಚಂದ್ರನ್ ಈ ಚಿತ್ರದಲ್ಲಿ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದರು.
ಇದೀಗ ನಟಿ ಸೆಲೆಬ್ರಿಟಿಯಾದ್ರೂ ಕೂಡ ತಮ್ಮ ಮಕ್ಕಳ ಬರ್ತ್ ಡೇಯನ್ನು ಸರಳವಾಗಿ ಆಚರಿಸಿದ್ದಾರೆ.ಜೂಹಿ ಚಾವ್ಲಾ ಮಗಳು ಜಾಹ್ನವಿ ಮೆಹ್ತಾ ಹುಟ್ಟುಹಬ್ಬವನ್ನು ವಿನೂತನವಾಗಿ ಆಚರಿಸಿ ಎಲ್ಲರಿಗೂ ಮಾದರಿಯಾದರು. ಅದೇನೆಂದರೆ.. ಜಾಹ್ನವಿ ಹುಟ್ಟುಹಬ್ಬವನ್ನು ಆಚರಿಸಲು ಜೂಹಿ ‘1000ಕ್ಕೂ’ ಹೆಚ್ಚು ಸಸಿಗಳನ್ನು ನೆಟ್ಟಿದ್ದಾರೆ. ಇದೀಗ ಈ ಸುದ್ದಿ ವೈರಲ್ ಆಗಿದೆ.
ಜೂಹಿ ಚಾವ್ಲಾ ಅವರ ಮಗಳು ಜಾಹ್ನವಿಗೆ ಪ್ರಸ್ತುತ 23 ವರ್ಷ. ಜೂಹಿ ಚಾವ್ಲಾ ತನ್ನ ಮಗಳ ಹುಟ್ಟುಹಬ್ಬದ ಸಂದರ್ಭದಲ್ಲಿ ತನ್ನ ಜೀವನದುದ್ದಕ್ಕೂ ನೆನಪಿನಲ್ಲಿ ಉಳಿಯುವ ಉಡುಗೊರೆಯನ್ನು ನೀಡಲು ಬಯಸಿದ್ದರು. ಅದಕ್ಕಾಗಿಯೇ ಸಾವಿರ ಸಸಿ ನೆಟ್ಟಿದ್ದೇನೆ ಎಂದರು.ಪರಿಸರ ಪ್ರೀತಿಯನ್ನು ತೋರಿಸೋಣ. ‘ಜಾಹ್ನವಿಗಾಗಿ ಆಕೆಯ ಹುಟ್ಟುಹಬ್ಬದಂದು 1000 ಗಿಡಗಳನ್ನು ನೆಟ್ಟಿದ್ದೇನೆ. ಅವಳು ಮತ್ತು ಅವಳ ಪೀಳಿಗೆಯು ಶುದ್ಧ ಗಾಳಿಯನ್ನು ಉಸಿರಾಡಬಹುದು ಮತ್ತು ಅಳಿಲುಗಳು, ಪಕ್ಷಿಗಳು ಮತ್ತು ಚಿಟ್ಟೆಗಳು ಸಹ ಶಾಂತಿಯಿಂದ ಬದುಕಬಹುದು ಎಂಬುದು ನಮ್ಮ ಆಶಯ. ಜನ್ಮದಿನದ ಶುಭಾಶಯಗಳು ಪ್ರಿಯ ಜಾಹ್ನವಿ’ ಎಂದು ಜೂಹಿ ಚಾವ್ಲಾ ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಮಾಡಿದ್ದಾರೆ.