ನ್ಯೂಸ್ ನಾಟೌಟ್: ಬ್ಯಾಂಕ್ ನೌಕರನ ಹೆಸರಿನಲ್ಲಿ ಬಂದ ಕರೆಗೆ ಸ್ಪಂದಿಸಿ ಮೊಬೈಲ್ ಗೆ ಬಂದ ಒಟಿಪಿಯನ್ನು ಕೊಟ್ಟ ಪುತ್ತೂರಿನ ವ್ಯಕ್ತಿಯೊಬ್ಬರು ಬರೋಬ್ಬರಿ 1,73, 000 ರೂ. ಅನ್ನು ಕಳೆದುಕೊಂಡಿದ್ದಾರೆ. ಸಂತ್ರಸ್ಥರು ಇದೀಗ ಹಣವನ್ನೆಲ್ಲ ಕಳೆದುಕೊಂಡು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.
ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ಅ.ಕ್ರ 24-2024 ಕಲಂ: IPC 1860 ಕಲಂ-417,419,420 ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.
ಮೋಸ ಹೋಗುವವರು ಇರುವವರೆಗೆ ಮೋಸ ಮಾಡುವವರೂ ಕೂಡ ಇರುತ್ತಾರೆ. ಕೆಲವು ಸಲ ಬೇಲಿಯೇ ಎದ್ದು ಹೊಲ ಮೇದ ಸ್ಥಿತಿ ಕೂಡ ನಿರ್ಮಾಣವಾಗುತ್ತದೆ. ಚಂದ್ರಶೇಖರ ಭಟ್ (62 ವರ್ಷ) ಬ್ಯಾಂಕ್ ಸಿಬ್ಬಂದಿ ಹೆಸರಿನಲ್ಲಿ ಕೆವೈಸಿ ಅಪ್ಡೆಟ್ ಮಾಡುವ ಕುರಿತು ಸಂದೇಶ ಬಂದಿದೆ. ಸದ್ರಿ ಸಂದೇಶದಲ್ಲಿ ಬಂದಿರುವ ಒಟಿಪಿಯನ್ನು ಚಂದ್ರಶೇಖರ ಭಟ್ ಅಪರಿಚಿತನಿಗೆ ಫೋನ್ ಕರೆಯಲ್ಲಿ ನೀಡಿದ್ದಾರೆ. ಇದಾದ ತಕ್ಷಣ ಇವರ ಅಕೌಂಟ್ ನಿಂದ ಹಣ ಹೋಗುವುದಕ್ಕೆ ಶುರುವಾಗಿದೆ. ಹಂತ ಹಂತವಾಗಿ ಖಾತೆಯಿಂದ ಹಣ ಕಳೆದುಕೊಂಡ ಅವರು ಅಂತಿಮವಾಗಿ 1,73, 000 ರೂ. ಅನ್ನು ಕಳೆದುಕೊಂಡಿದ್ದಾರೆ.