ನ್ಯೂಸ್ ನಾಟೌಟ್ : ಸಾಮಾಜಿಕ ಜಾಲತಾಣಗಳನ್ನು ಉಪಯೋಗಿಸುವಾಗ ತುಂಬಾ ಎಚ್ಚರಿಕೆಯಿಂದ ಇರಬೇಕಾಗುತ್ತದೆ ಅನ್ನೋದರ ಬಗ್ಗೆ ನಿಮ್ಗೆಲ್ಲಾ ಮಾಹಿತಿಯಿದೆ.ಆದರೂ ಕೆಲವೊಂದಷ್ಟು ಮಂದಿ ಅಪರಿಚಿತರನ್ನು ಪರಿಚಯ ಮಾಡಿಕೊಂಡು ಮೋಸ ಹೋಗುತ್ತಿದ್ದಾರೆ.ಇದೀಗ ಇಂತಹುದ್ದೇ ಘಟನೆಯೊಂದು ನಡೆದಿದ್ದು,ತನ್ನ ನಿಜವಾದ ಗುರುತನ್ನು ಮರೆಮಾಚಿ ಹರ್ಷ ಎಂಬ ಹೆಸರಿನಲ್ಲಿ ಯುವತಿಯನ್ನು ಪ್ರೀತಿಯ ಬಲೆಗೆ ಬೀಳಿಸಿದ್ದ ಅರ್ಷದ್ ಎಂಬಾತನನ್ನು ಪೊಲೀಸರು ಇದೀಗ ಬಂಧಿಸಿದ್ದಾರೆ.
ಆತ ತನ್ನನ್ನು ಹರ್ಷ ಎಂದು ಯುವತಿಗೆ ಪರಿಚಯಿಸಿಕೊಂಡು ನಂಬಿಸಿದ್ದ.ಆದರೆ ಆಕೆಗೆ ಪ್ರೇಮ ನಿವೇದನೆ ಮಾಡುವ ಸಂದರ್ಭದಲ್ಲಿ ಬಜರಂಗದಳದ ಕಾರ್ಯಕರ್ತರು ಬಂದು ಆತನನ್ನು ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ.ಇಂದೋರ್ನ ಚಂದನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಪೊಲೀಸರು ಆರೋಪಿಯನ್ನು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಅನ್ಯ ಸಮುದಾಯದ ಯುವಕನೊಬ್ಬ ತಾನು ಹಿಂದೂ ಎಂದು ನಂಬಿಸಿದ್ದ ಆಕೆಗೆ ಪ್ರೇಮ ನಿವೇದನೆ ಮಾಡಲು ಅಲ್ಲಿಗೆ ಬಂದಿದ್ದ, ಆರೋಪಿಯನ್ನು ಅರ್ಷದ್ ಎಂದು ಗುರುತಿಸಲಾಗಿದೆ.ಹುಡುಗಿ ಬಳಿ ತನ್ನ ಹೆಸರು ಹರ್ಷ ಎಂದು ಆತ ಹೇಳಿದ್ದ, ಆರೋಪಿಯ ಪ್ರೇಮ ನಿವೇದನೆಯನ್ನು ಆಕೆ ಒಪ್ಪಿಕೊಂಡಿದ್ದಳು, ಬಳಿಕ ಆಕೆಯ ಮನೆಗೂ ಆತ ಬಂದಿದ್ದ ಎನ್ನಲಾಗಿದೆ. ಆಕೆಯ ಬಳಿ ಬಾ ವಾಕಿಂಗ್ಗೆ ಹೋಗೋಣ ಎಂದು ಪದೇ ಪದೇ ಹೇಳುತ್ತಿದ್ದ, ಬಳಿಕ ಆತನ ವರ್ತನೆ ಸ್ವಲ್ಪ ಬದಲಾಗಿತ್ತು, ಅನುಮಾನಗೊಂಡ ಯುವತಿ ಬಜರಂಗದಳಕ್ಕೆ ವಿಷಯ ಮುಟ್ಟಿಸಿದ್ದಾಳೆ.
ಈ ವೇಳೆ ಆರೋಪಿಯ ಬಳಿ ಆಧಾರ್ ಕಾರ್ಡ್ತೋರಿಸುವಂತೆ ಕೇಳಿಕೊಂಡಾಗ ಆರೋಪಿ ಸಿಕ್ಕಿಬಿದ್ದಿದ್ದಾನೆ.ಆರೋಪಿಯ ಹೆಸರು ಅರ್ಷದ್ ಮತ್ತು ಆತನ ತಂದೆಯ ಹೆಸರು ಸಲೀಂ ಎಂದು ತಿಳಿದುಬಂದಿದೆ. ಇದಾದ ನಂತರ ಬಜರಂಗದಳದ ಕಾರ್ಯಕರ್ತರು ಆತನಿಗೆ ತೀವ್ರವಾಗಿ ಥಳಿಸಿ ನಂತರ ಪೊಲೀಸರನ್ನು ಕರೆಸಿ ಒಪ್ಪಿಸಿದ್ದಾರೆ.ಸಂತ್ರಸ್ತೆ ಆರೋಪಿ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪೊಲೀಸರು ಕಿರುಕುಳ ಮತ್ತು ಲವ್ ಜಿಹಾದ್ ಸೆಕ್ಷನ್ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿದ್ದಾರೆ. ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.