ನ್ಯೂಸ್ ನಾಟೌಟ್ : ಕ್ರಿಕೆಟಿಗ ವಿರಾಟ್ ಕೊಹ್ಲಿ, ಅನುಷ್ಕಾ ಶರ್ಮಾ ದಂಪತಿ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ ಎನ್ನುವ ಬಗ್ಗೆ ಮತ್ತೆ ವದಂತಿ ಹಬ್ಬಿದೆ. ದಂಪತಿ ತಮ್ಮ ಎರಡನೇ ಗರ್ಭಧಾರಣೆಯನ್ನು ಅಧಿಕೃತವಾಗಿ ದೃಢೀಕರಿಸದಿದ್ದರೂ, ಮೂಲಗಳ ಪ್ರಕಾರ ನಟಿ ಲಂಡನ್ನಲ್ಲಿ ಕೆಲವೇ ದಿನಗಳಲ್ಲಿ ಮಗುವಿಗೆ ಜನ್ಮ ನೀಡಲಿದ್ದಾರೆ ಎಂದು ವರದಿಯಾಗಿದೆ.ಹಾಗಾದರೆ ಈ ಸುದ್ದಿ ನಿಜವೇ? ಅನ್ನೋದಕ್ಕೆ ಇಲ್ಲಿದೆ ವರದಿ..
ನಟಿ ಅನುಷ್ಕಾ ಗರ್ಭಿಣಿಯಾಗಿದ್ದು, ಶೀಘ್ರದಲ್ಲೇ ಎರಡನೇ ಮಗುವಿಗೆ ಜನ್ಮ ನೀಡಲಿದ್ದಾರೆ ಎಂಬ ವದಂತಿಗಳು ಈ ಹಿಂದೆ ಕೇಳಿ ಬಂದಿದ್ದವು. ಇದಕ್ಕೆ ಪೂರಕವೆಂಬಂತೆ ಕೆಲವೊಂದಷ್ಟು ವಿಡಿಯೋಗಳು ವೈರಲ್ ಆಗಿದ್ದವು.ಆದರೂ ಈ ಬಗ್ಗೆ ದಂಪತಿ ಏನೂ ಉತ್ತರ ಕೊಟ್ಟಿರಲಿಲ್ಲ. ಇದೀಗ ಖ್ಯಾತ ಉದ್ಯಮಿಯೊಬ್ಬರು ಟ್ವೀಟ್ ಮಾಡಿ ಇವರ ಮಗುವಿನ ಬಗ್ಗೆ ಮಹತ್ವದ ಮಾಹಿತಿ ನೀಡಿದ್ದಾರೆ.ಕೈಗಾರಿಕೋದ್ಯಮಿ ಹರ್ಷ್ ಗೋಯೆಂಕಾ ಟ್ವಿಟರ್ನಲ್ಲಿ ಪೋಸ್ಟ್ ಮಾಡಿದ್ದು, ವಿರಾಟ್ ಮತ್ತು ಅನುಷ್ಕಾ ಮಗುವಿನ ಬಗ್ಗೆ ದೊಡ್ಡ ಅಪ್ಡೇಟ್ವೊಂದನ್ನು ನೀಡಿದ್ದು, ನಟಿ ಅನುಷ್ಕಾ ಗರ್ಭಿಣಿಯಾಗಿರುವ ಬಗ್ಗೆ ಪೋಸ್ಟ್ ಶೇರ್ ಮಾಡುವ ಮೂಲಕ ಸಂಚಲನ ಮೂಡಿಸಿದ್ದಾರೆ.ಹಾಗಾದರೆ ಆ ಪೋಸ್ಟ್ನಲ್ಲೇನಿದೆ?
ವಿರಾಟ್ , ಅನುಷ್ಕಾ ಹೆಸರನ್ನು ಉಲ್ಲೇಖಿಸದಿದ್ದರೂ, ಪೋಸ್ಟ್ ಅವರ ಮಗುವಿನ ಬಗ್ಗೆ ಎಂಬುದು ಸ್ಪಷ್ಟವಾಗಿದೆ. “ಈ ಸೆಲೆಬ್ರಿಟಿ ಜೋಡಿಗಳಿಗೆ ಶೀಘ್ರದಲ್ಲೇ ಎರಡನೇ ಮಗು ಜನಿಸುತ್ತದೆ. ಈ ಮಗು ತನ್ನ ಶ್ರೇಷ್ಠ ಕ್ರಿಕೆಟಿಗ ತಂದೆಯಂತೆ ಭಾರತವನ್ನು ಎತ್ತರಕ್ಕೆ ಕೊಂಡೊಯ್ಯುತ್ತದೆಯೇ ಅಥವಾ ತಾಯಿಯನ್ನು ಅನುಸರಿಸಿ ಸಿನಿಮಾ ತಾರೆಯಾಗುವುದೇ? ಆದರೆ ಈ ಭಾರತೀಯ ಮಗು ಲಂಡನ್ ನಲ್ಲಿ ಹುಟ್ಟುತ್ತದೆ ಎಂದು ಕೈಗಾರಿಕೋದ್ಯಮಿ ಹರ್ಷ್ ಗೋಯೆಂಕಾ ಅವರು ಎಕ್ಸ್ ಖಾತೆಯಲ್ಲಿ ಟ್ವೀಟ್ ಮಾಡಿದ್ದಾರೆ. ಈ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು.. ಅಭಿಮಾನಿಗಳು ಪೋಸ್ಟ್ಗೆ ವಿರುಷ್ಕಾ ಎಂದು ಕಾಮೆಂಟ್ ಮಾಡುತ್ತಿದ್ದಾರೆ.
ಅನುಷ್ಕಾ ಶರ್ಮಾ ಡಿಸೆಂಬರ್ 2017 ರಲ್ಲಿ ವಿರಾಟ್ ಕೊಹ್ಲಿಯೊಂದಿಗೆ ಮದುವೆ ಹಾಕಿದರು. ನಂತರ 2018 ರಲ್ಲಿ ನಟಿ ಅನುಷ್ಟಾ ನಟನೆಯ ಚಲನಚಿತ್ರ ಝೀರೋ ಬಿಡುಗಡೆಯಾಯಿತು. ನಟನೆಯಿಂದ ವಿರಾಮ ತೆಗೆದುಕೊಂಡ ನಟಿ 2021 ರ ಜನವರಿಯಲ್ಲಿ ದಂಪತಿಗಳು ತಮ್ಮ ಮಗಳು ವಾಮಿಕಾ ಅವರನ್ನು ಸ್ವಾಗತಿಸಿದರು.