ನ್ಯೂಸ್ ನಾಟೌಟ್ : ಮಾಡೆಲ್ ಕಮ್ ಮಾದಕ ನಟಿ ಪೂನಂ ಪಾಂಡೆ ಅವರು ನಿನ್ನೆ ಕೊನೆಯುಸಿರೆಳೆದಿದ್ದಾರೆನ್ನುವ ನ್ಯೂಸ್ ಭಾರಿ ಸಂಚಲನ ಸೃಷ್ಟಿ ಮಾಡಿತ್ತು. ಕೇವಲ ಮನೋರಂಜನಾ ಕ್ಷೇತ್ರ ಮಾತ್ರವಲ್ಲ, ಕ್ರೀಡೆ, ಸೋಶಿಯಲ್ ಮೀಡಿಯಾ ಸೇರಿದಂತೆ ಎಲ್ಲಾ ಕ್ಷೇತ್ರದಲ್ಲೂ ಭಾರಿ ಜನಪ್ರಿಯರಾಗಿದ್ದ ನಟಿ ಇದ್ದಕ್ಕಿದ್ದ ಹಾಗೆ ಇನ್ನಿಲ್ಲವಾಗಿದ್ದು ಹೇಗೆ ಎನ್ನುವ ಅನುಮಾನಗಳು ದಟ್ಟವಾಗಿದ್ದವು. ಅದರೆ ಇದೀಗ ಇನ್ಸ್ಟಾಗ್ರಾಮ್ನಲ್ಲಿ ವಿಡಿಯೋ ಹರಿಯ ಬಿಟ್ಟಿದ್ದು ನಾನು ಜೀವಂತವಾಗಿದ್ದೆನೆಂದು ಹೇಳಿಕೊಂಡಿದ್ದಾರೆ.
ಪೂನಂ ವಿಡಿಯೊದಲ್ಲಿ ʻʻನಿಮ್ಮೆಲ್ಲರೊಂದಿಗೆ ಮಹತ್ವದ ಸಂಗತಿಯೊಂದನ್ನು ಹೇಳಲೇಬೇಕಾಗಿದೆ. ನಾನು ಇನ್ನೂ ಇದ್ದೇನೆ. ಜೀವಂತವಾಗಿದ್ದೇನೆ. ಗರ್ಭಕಂಠದ ಕ್ಯಾನ್ಸರ್ ನನ್ನನ್ನು ಮುಗಿಸಿಲ್ಲ, ದುರಂತವೆಂದರೆ, ಈ ರೋಗವನ್ನು ಹೇಗೆ ನಿಭಾಯಿಸುವುದು ಎಂಬುದರ ಬಗ್ಗೆ ಜ್ಞಾನದ ಕೊರತೆಯಿಂದಾಗಿ ಸಾವಿರಾರು ಮಹಿಳೆಯರು ಜೀವ ತೆತ್ತಿದ್ದಾರೆ. ಇತರ ಕೆಲವು ಕ್ಯಾನ್ಸರ್ ಗಳಿಗಿಂತ ಭಿನ್ನವಾಗಿ ಗರ್ಭಕಂಠದ ಕ್ಯಾನ್ಸರ್ ಅನ್ನು ಸಂಪೂರ್ಣವಾಗಿ ತಡೆಗಟ್ಟಬಹುದು. ಎಚ್ಪಿವಿ ಲಸಿಕೆ ಮತ್ತು ಆರಂಭಿಕ ಪರೀಕ್ಷೆಗಳು ಇಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಈ ರೋಗದಿಂದ ಯಾರೂ ಪ್ರಾಣ ಕಳೆದುಕೊಳ್ಳುವುದಿಲ್ಲ ಎಂದು ಖಚಿತಪಡಿಸಿಕೊಳ್ಳಲು ನಮಗೆ ಹಲವಾರು ಮಾರ್ಗಗಳಿವೆ. ವಿಮರ್ಶಾತ್ಮಕ ಜಾಗೃತಿಯೊಂದಿಗೆ ಪರಸ್ಪರರನ್ನು ಸಬಲೀಕರಣಗೊಳಿಸೋಣ ಮತ್ತು ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಪ್ರತಿಯೊಬ್ಬ ಮಹಿಳೆಗೆ ಮಾಹಿತಿ ನೀಡಬೇಕಾಗಿದೆ. ಈ ರೋಗದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳುವುದಕ್ಕೆ ನನ್ನ ಬಯೊದಲ್ಲಿರುವ ಲಿಂಕ್ ಗೆ ಭೇಟಿ ನೀಡಿ. ಈ ರೋಗದ ವಿನಾಶಕಾರಿ ಪರಿಣಾಮವನ್ನು ಕೊನೆಗೊಳಿಸಲು ಒಟ್ಟಾಗಿ ಪ್ರಯತ್ನಿಸೋಣʼʼ ಎಂದು ಪೂನಂ ಪಾಂಡೆ ತಮ್ಮ ಇನ್ಸ್ಟಾಗ್ರಾಮ್ ಪೋಸ್ಟ್ನಲ್ಲಿ ಬರೆದುಕೊಂಡಿದ್ದಾರೆ.
ಪೂನಂ ಪಾಂಡೆ ಗರ್ಭಕಂಠ ಕ್ಯಾನ್ಸರ್ನಿಂದ ಬಾರದ ಲೋಕಕ್ಕೆ ತೆರಳಿದ್ದಾರೆ ಅನ್ನೋ ಸುದ್ದಿ ಆ*ಘಾ*ತ ತಂದಿತ್ತು. ಇದಕ್ಕಿದ್ದಂತೆ ಪೂನಂ ಪಾಂಡೆ ಇನ್ನಿಲ್ಲ ಅನ್ನುವ ನೋವನ್ನು ಅರಗಿಸಿ ಕೊಳ್ಳೊದಕ್ಕು ಅವರ ಅಭಿಮಾನಿಗಳಿಗೆ ಕಷ್ಟವಾಗಿತ್ತು. ಆದರೆ ಇದನ್ನು ಪೂನಂ ಪಾಂಡೆ ಮ್ಯಾನೇಜರ್ ಖಚಿತಪಡಿಸಿದ್ದಾದರೂ ಕೂಡ ಜನ ಮಾತ್ರ ಇದನ್ನು ನಂಬಲೇ ಇಲ್ಲ.ಇದೊಂದು ಪ್ರಚಾರದ ಗಿಮಿಕ್ ಎಂದು ಹೇಳಿಕೊಂಡು ಬರುತ್ತಲೇ ಇದ್ದರು.ಈ ಸುದ್ದಿ ನೆಟ್ಟಿಗರು ಕಾಮೆಂಟ್ ಮಾಡುತ್ತಾ ಇದೊಂದು ಸುಳ್ಳು ಸುದ್ದಿ ಎಂದಿದ್ದರು.ಮುಖ್ಯವಾಗಿ ಆಕೆ ಜನಪ್ರಿಯ ನಟಿ.ಜನರಿಂದಲೇ ಆಕೆ ಪ್ರಚಾರಕ್ಕೆ ಬಂದಿದ್ದು.. ಹೀಗಾಗಿ ಆಕೆಯ ಉಸಿರು ನಿಂತ ದೇಹವನ್ನು ಜನರಿಗೆ ತೋರಿಸಬಹುದಾಗಿತ್ತು ಎನ್ನುವ ಮಾತುಗಳ ಮೂಲಕ ಜನರು ವ್ಯಕ್ತ ಪಡಿಸಿದ್ದರು.ಹೀಗೆ ಈ ಸುದ್ದಿ ಹಲವು ಅನುಮಾನಗಳನ್ನೇ ಉಂಟು ಮಾಡುತ್ತಲೇ ಇತ್ತು.
ಗರ್ಭಕಂಠ ಕ್ಯಾನ್ಸರ್ನಿಂದ ದೀಢೀರ್ ಈ ಘಟನೆಗಳು ಸಂಭವಿಸುವುದಿಲ್ಲ ಅನ್ನೋ ತಜ್ಞ ವೈದ್ಯರ ಮಾತುಗಳ ಬೆನ್ನಲ್ಲೇ ಪೂನಂ ಪಾಂಡೆ ನಿಧನದ ಸುತ್ತ ಅನುಮಾನಗಳು ಮೂಡಲಾರಂಭಿಸಿದ್ದವು. ಪೂನಂ ಪಾಂಡೆ ಜೀವಂತ ವಾಗಿದ್ದಾಳೆ ಅನ್ನೋ ಸುದ್ದಿ ಮತ್ತೊಂದೆಡೆಯಿಂದ ಹರಿದಾಡುತ್ತಲೇ ಇತ್ತು. ಇದು ಪ್ರಚಾರಕ್ಕಾಗಿ ಮಾಡಿದ ತಂತ್ರ ಅನ್ನೋ ಮಾತುಗಳು ಒಂದು ಕಡೆಯಿಂದ ಬಲವಾಗಿ ಕೇಳಿಬಂದಿತ್ತು. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ ಮಧ್ಯಂತರ ಬಜೆಟ್ನಲ್ಲಿ ಗರ್ಭಕಂಠ ಕ್ಯಾನ್ಸರ್ ಲಸಿಕೆ ಕುರಿತು ಮಹತ್ವದ ನಿರ್ಧಾರ ಘೋಷಿಸಿದ್ದರು. ಆರೋಗ್ಯ ಕ್ಷೇತ್ರದಲ್ಲಿನ ಸವಾಲು ಎದುರಿಸಲು ಅನುದಾನ ಮಾಹಿತಿ ನೀಡಿದ್ದರು. ಇದರ ಮುಂದುವರಿದ ಭಾಗವಾಗಿ ಮಾರ್ಕೆಟಿಂಗ್ ಎಜೆನ್ಸಿಗಳು ಈ ರೀತಿಯ ಕತೆ ಕಟ್ಟಿದೆ ಅನ್ನೋ ಮಾತುಗಳು ಕೇಳಿ ಬಂದಿದ್ದವು.
ಪೂನಂ ಪಾಂಡೆ ಸಾಮಾಜಿಕ ಮಾಧ್ಯಮಗಳಲ್ಲಿ ಸಂಪೂರ್ಣ ಸಕ್ರಿಯವಾಗಿದ್ದರು. ನಾಲ್ಕು ದಿನದ ಹಿಂದೆ ಈವೆಂಟ್ ಒಂದರಲ್ಲಿ ಪೂನಂ ಪಾಂಡೆ ತಮ್ಮ ಎಂದಿನ ಶೈಲಿಯಲ್ಲಿ ಕಾಣಿಸಿಕೊಂಡಿದ್ದರು. ಈ ವಿಡಿಯೋಗಳನ್ನು ಪೂನಂ ಪಾಂಡೆ ಅಧಿಕೃತ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಈಗಲೂ ಲಭ್ಯವಿದೆ. ಹೀಗಾಗಿ ಏಕಾಏಕಿ ಪೂನಂ ಗರ್ಭಕಂಠ ಕ್ಯಾನ್ಸರ್ನಿಂದ ದುರಂತ ಅಂತ್ಯ ಸಾಧ್ಯವಿಲ್ಲ ಎಂದಿತ್ತು ವೈದ್ಯಕೀಯ ಮೂಲಗಳು. ಪೂನಂ ಪಾಂಡೆ ಈ ಸುದ್ದಿ ಕುರಿತು ಆಸ್ಪತ್ರೆ ಮೂಲಗಳಿಂದಾಗಲಿ, ಪೂನಂ ಕುಟುಂಬಸ್ಥರಿಂದಾಗಲಿ ಯಾವುದೇ ಅಧಿಕೃತ ಮಾಹಿತಿಗಳನ್ನು ಕೊಟ್ಟಿರಲಿಲ್ಲ. ಮುಖ್ಯವಾಗಿ ಜನಪ್ರಿಯ ನಟಿಯಾದ್ರೂ ಅವರ ಉಸಿರು ಚೆಲ್ಲಿದ ದೇಹವನ್ನು ಎಲ್ಲೂ ತೋರಿಸಿಯೇ ಇರಲಿಲ್ಲ ಎಂದು ಜನರಾಡಿಕೊಳ್ಳುತ್ತಿದ್ದರು.