ನ್ಯೂಸ್ ನಾಟೌಟ್: ಪುಟ್ಟ ಮಕ್ಕಳು ಮನೆಯಲ್ಲಿದ್ದರೆ ನಿಗಾ ಇರಬೇಕು ಎಂದು ಹೇಳುವುದು ಇದಕ್ಕೆ.ಅವರು ಯಾವುದಾದರೂ ಒಂದು ಸಂದರ್ಭದಲ್ಲಿ ಏನಾದರೊಂದು ಕಿತಾಪತಿ ಮಾಡುತ್ತಲೇ ಇರುತ್ತಾರೆ. ಕೆಲವು ಬಾರಿ ಪೋಷಕರು ಎಷ್ಟೇ ಗಮನ ಹರಿಸಿದ್ರು ಆಗೋ ಅವಘಡ ಹೇಗಾದ್ರೂ ಆಗಿಬಿಡುತ್ತೆ. ಇಲ್ಲೂ ಅದೇ ಆಗಿದೆ ಒಂದು ವರ್ಷದ ಪುಟ್ಟ ಕಂದಮ್ಮ ಮನೆಯಲ್ಲಿ ಅಡುಗೆ ಮಾಡಲು ತಂದಿದ್ದ ಮೀನನ್ನು ನುಂಗಿಯೇ ಬಿಟ್ಟಿದೆ..!
ಹೌದು, ಪ್ರತೀಕ್ (1) ಮೀನು ನುಂಗಿದ ಮಗು. ಮನೆಯಲ್ಲಿ ಅಡುಗೆ ಮಾಡಲು ತಂದಿದ್ದ 2 ಇಂಚಿನ ಜಿಲೇಬಿ ಮೀನನ್ನ ಮಗು ಕೈಯಲ್ಲಿ ಹಿಡಿದುಕೊಂಡು ಆಡುತ್ತಿತ್ತು. ಇದೇ ವೇಳೆ ಬಾಯಲ್ಲಿ ಹಿಡಿಯುತ್ತಾ ಆಕಸ್ಮಿಕವಾಗಿ ನುಂಗಿ ಬಿಟ್ಟಿದೆ. ಗಂಟಲಲ್ಲೇ ಮೀನು ಸಿಕ್ಕಿಹಾಕಿಕೊಂಡಿದ್ದರಿಂದ ಉಸಿರಾಡಲಾಗದೇ ಮಗು ಕಷ್ಟ ಪಡುತ್ತಿತ್ತು.
ಇದನ್ನು ಗಮನಿಸಿದ ಕೂಡಲೇ ಪೋಷಕರು ಮಗುವನ್ನ ಕೂಡಲೇ ಶಿವಮೊಗ್ಗದ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲೂಕಿನ ಗಂಜಿನಹಳ್ಳಿ ಯೋಗೇಶ್ ಹಾಗೂ ರೋಜಾ ದಂಪತಿಗೆ ಸೇರಿದ ಮಗು ಇದಾಗಿದೆ. ಇನ್ನೂ ಮಗುವಿನ ಗಂಟಲಿನಲ್ಲಿ ಸಿಕ್ಕಿಹಾಕಿಕೊಂಡಿರೋ ವೀನನ್ನು ವೈದ್ಯರು ಎಂಡೋಸ್ಕೋಪಿ ಮೂಲಕ ಹೊರತೆಗೆದಿದ್ದಾರೆ. ಸದ್ಯ ಮಗು ಪ್ರಾಣಾಪಾಯದಿಂದ ಪಾರಾಗಿದ್ದು. ಆತಂಕಗೊಂಡಿದ್ದ ಪೋಷಕರು ನಿಟ್ಟಿಸಿರು ಬಿಟ್ಟಿದ್ದಾರೆ.