ನ್ಯೂಸ್ ನಾಟೌಟ್: ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನಲ್ಲಿ ಜನ ಮೆಚ್ಚುವ ಘಟನೆಯೊಂದು ವರದಿಯಾಗಿದೆ. ಹೌದು, ಖಾಸಗಿ ಆಸ್ಪತ್ರೆ ಅಂಬುಲೆನ್ಸ್ ಚಾಲಕ (Ambulance Driver) ಶಿಜು ವರ್ಗಿಸ್ ಎಂಬವರು Zero Traffic ವ್ಯವಸ್ಥೆ ಇಲ್ಲದೆಯೂ 300 ಕಿಮೀ ದೂರವನ್ನು ಕೇವಲ 3 ಗಂಟೆ ಅವಧಿಯಲ್ಲಿ ಕ್ರಮಿಸಿದ್ದಾರೆ.ಈ ಮೂಲಕ 7 ದಿನದ ಹೆಣ್ಣು ಮಗುವಿನ ಜೀವ ಉಳಿಸಿದ್ದಾರೆ.
ಸದ್ಯ ಅಂಬುಲೆನ್ಸ್ ಚಾಲಕನ ಸಮಯಪ್ರಜ್ಞೆಗೆ ಸಾರ್ವಜನಿಕರಿಂದ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.ಮಡಿಕೇರಿ (Madikeri) ಜಿಲ್ಲಾ ಆಸ್ಪತ್ರೆಯಲ್ಲಿ ದಾಖಲಾಗಿದ್ದ 7 ದಿನದ ಹೆಣ್ಣು ಮಗುವಿಗೆ ತೀವ್ರ ಉಸಿರಾಟದ ತೊಂದರೆಯಿಂದ ಬಳಲಿತ್ತು. ಈ ವೇಳೆ ಮಗುವನ್ನು ತುರ್ತು ಚಿಕಿತ್ಸೆಗಾಗಿ 300 ಕಿಮೀ ದೂರದಲ್ಲಿದ್ದ ಕೇರಳದ ಪೆರಂದಲ್ ಮಣ್ಣನ್ ಊರಿನಲ್ಲಿರೋ ಖಾಸಗಿ ಆಸ್ಪತ್ರೆಗೆ (Private Hospital) ಕರೆದೊಯ್ಯಬೇಕಾಗಿತ್ತು. ಆದರೆ ವೈದ್ಯರ ಸಲಹೆ ಮೇರೆಗೆ ಚಾಲಕ ಶಿಜು ವರ್ಗಿಸ್ ಜೀರೋ ಟ್ರಾಫಿಕ್ ವ್ಯವಸ್ಥೆ ಇಲ್ಲದೆಯೂ 300 ಕಿಮೀ ದೂರವನ್ನು 3 ಗಂಟೆಯಲ್ಲಿ ಕ್ರಮಿಸಿ, ಮಗುವಿಗೆ ಚಿಕಿತ್ಸೆ ಕೊಡಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ತಿಳಿದು ಬಂದಿದೆ.