ನ್ಯೂಸ್ ನಾಟೌಟ್ : ಸೀಮಾ ಹೈದರ್ ಎನ್ನುವ ಪಾಕಿಸ್ತಾನದ ಮಹಿಳೆಯೊಬ್ಬಳು ಪ್ರಿಯತಮನನ್ನು ಹುಡುಕಿಕೊಂಡು ೪ ಮಕ್ಕಳೊಂದಿಗೆ ಭಾರತಕ್ಕೆ ಬಂದಿರುವ ಘಟನೆ ಭಾರಿ ವೈರಲ್ ಆಗಿತ್ತು.ಇದೀಗ ಇಲ್ಲೊಬ್ಬಳು ಮಹಿಳೆ ವಾಟ್ಸಾಪ್ನಲ್ಲಿ ಪರಿಚಯವಾದ ವ್ಯಕ್ತಿಗಾಗಿ ಜಮ್ಮುನಿಂದ ಪಾಕಿಸ್ತಾನಕ್ಕೆ ಹೋಗಿರುವ ಘಟನೆ ಬಗ್ಗೆ ವರದಿಯಾಗಿದೆ.
ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯ 22 ವರ್ಷದ ಮಹಿಳೆ ವಾಟ್ಸಾಪ್ನಲ್ಲಿ ಸಂಪರ್ಕದಲ್ಲಿದ್ದ ವ್ಯಕ್ತಿಯನ್ನು ಮದುವೆಯಾಗಲು ತನ್ನ ಒಂದೂವರೆ ವರ್ಷದ ಮಗಳೊಂದಿಗೆ ಪಾಕಿಸ್ತಾನಕ್ಕೆ ಹೋಗಿದ್ದಾಳೆ.ಪೂಂಚ್ ಖಾದಿ ಕರ್ಮದ ನಿವಾಸಿಯಾಗಿರುವ ಶಬ್ನಮ್ ಬಿ ಅವರು ಗುಲಾಮ್ ರುಬಾನಿ ಅವರನ್ನು ಮದುವೆಯಾಗಿದ್ದಾರೆ ಮತ್ತು ಇಬ್ಬರು ಹೆಣ್ಣುಮಕ್ಕಳ ತಾಯಿಯಾಗಿದ್ದಾರೆ. ಮಹಿಳೆಯ ಪತಿ ಭಾನುವಾರ ನಾಪತ್ತೆ ದೂರು ನೀಡಿದ್ದು, ಜಮ್ಮು ಮತ್ತು ಕಾಶ್ಮೀರ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಒಂದು ಮಾಹಿತಿಯ ಪ್ರಕಾರ ಮಹಿಳೆಯ ಸಂಬಂಧಿಕರು ಪಾಕಿಸ್ತಾನದಲ್ಲಿ ವಾಸಿಸುತ್ತಿದ್ದಾರೆ ಎಂದು ಹೇಳಲಾಗಿದೆ. ಆಕೆಯನ್ನು ಮದುವೆಯಾಗುವುದಾಗಿ ಭರವಸೆ ನೀಡಿದ ವ್ಯಕ್ತಿ ಈಕೆಗೆ ಸೋಶಿಯಲ್ ಮೀಡಿಯಾ ಮೂಲಕ ಪರಿಚಯವಾಗಿದ್ದ.ಈಕೆಗೆ ಅವನ ಮೇಲೆ ಪ್ರೀತಿಯಾಗಿದೆ. ಮದುವೆಯಾಗುವುದಾಗಿ ಭರವಸೆ ನೀಡಿದ್ದಾನೆ ಎಂದು ಹೇಳಲಾಗಿದೆ.ಹೀಗಾಗಿ ಪ್ರಿಯಕರನಿಗಾಗಿ ಮಹಿಳೆ ತನ್ನ ದೊಡ್ಡ ಮಗಳನ್ನು ಮನಯಲ್ಲಿಯೆ ಬಿಟ್ಟು, ಚಿಕ್ಕ ಮಗಳ ಜತೆ ಪಾಕಿಸ್ತಾನಕ್ಕೆ ಪರಾರಿಯಾಗಿದ್ದಾಳೆ ಎನ್ನಲಾಗಿದೆ.ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಕಳೆದ ವರ್ಷ ಸೀಮಾ ಹೈದರ್ ಎಂಬಾಕೆ ತನ್ನ ಮಕ್ಕಳನ್ನು ಕರೆದುಕೊಂಡು ಭಾರತದಲ್ಲಿರುವ ಸಚಿನ್ ಮೀನಾ ಎಂಬವರನ್ನು ಮದುವೆಯಾಗಲು ಪಾಕಿಸ್ತಾನದಿಂದ ಬಂದಿದ್ದ ಬಳಿಕ , ರಾಜಸ್ಥಾನದ ವಿವಾಹಿತ ಮಹಿಳೆ ಫೇಸ್ಬುಕ್ನಲ್ಲಿ ಪರಿಚಯವಾದ ವ್ಯಕ್ತಿಯನ್ನು ಮದುವೆಯಾಗಲು ಪಾಕಿಸ್ತಾನಕ್ಕೆ ಹೋಗಿದ್ದಳು. ಎರಡು ಮಕ್ಕಳ ತಾಯಿ ಅಂಜು ತನ್ನ ಫೇಸ್ಬುಕ್ ಸ್ನೇಹಿತ ನಸ್ರುಲ್ಲಾರನ್ನು ಮದುವೆಯಾಗಲು ಖೈಬರ್ ಪಖ್ತುಂಖ್ವಾಗೆ ಪ್ರಯಾಣ ಬೆಳೆಸಿದ್ದಳು.ಹೀಗೆ ಈ ಸೋಶಿಯಲ್ ಮೀಡಿಯಾ ಮೂಲಕ ಪರಿಚಯದಿಂದಾಗಿ ಇಂತಹ ಘಟನೆಗಳು ಮತ್ತೆ ಮತ್ತೆ ಮರುಕಳಿಸುತ್ತಲೇ ಇದೆ.