ನ್ಯೂಸ್ ನಾಟೌಟ್ : ಇತ್ತೀಚಿನ ದಿನಗಳಲ್ಲಿ ಕಾಡುಪ್ರಾಣಿಗಳು ನಾಡಿನತ್ತ ಹೆಜ್ಜೆ ಇಡುತ್ತಿರುವ ಸಂಖ್ಯೆ ಜಾಸ್ತಿಯಾಗ್ಬಿಟ್ಟಿದೆ.ಹುಲಿ,ಚಿರತೆ,ಕಾಡಾನೆಗಳ ಹಾವಳಿಯಿಂದಾಗಿ ಜನರ ನಿದ್ದೆ ಕೆಡುತ್ತಿದೆ.ಇದೀಗ ಈ ಭಯದ ಮಧ್ಯೆಯೇ ಇಲ್ಲೊಂದೆಡೆ ಬ್ಯಾಂಕ್ವೊಂದಕ್ಕೆ ಗೂಳಿ ನುಗ್ಗಿದ್ದು,ಗ್ರಾಹಕರು ಹಾಗೂ ಸಿಬ್ಬಂದಿ ವರ್ಗ ಗಲಿಬಿಲಿಗೊಂಡಿರುವ ಘಟನೆ ಬಗ್ಗೆ ವರದಿಯಾಗಿದೆ.
ಈ ಘಟನೆ ವರದಿಯಾಗಿದ್ದು, ಉತ್ತರ ಪ್ರದೇಶದ ಉನ್ನಾವೊದ ಶಹಗಂಜ್ ಪ್ರದೇಶದಲ್ಲಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಶಾಖೆಯೊಂದರಲ್ಲಿ . ಗೂಳಿಯೊಂದು ಏಕಾಏಕಿ ಎಂಟ್ರಿ ಕೊಟ್ಟು ಅತ್ತಿಂದಿತ್ತ ಹೆಜ್ಜೆ ಹಾಕಿದೆ. ಈ ವೇಳೆ ಬ್ಯಾಂಕಿನೊಳಗೆ ಇದ್ದ ಗ್ರಾಹಕರು ಹಾಗೂ ಸಿಬ್ಬಂದಿಗಳು ಒಮ್ಮೆಗೆ ಶಾಕ್ಗೊಳಗಾಗಿದ್ದಾರೆ.ಆದರೆ ಬ್ಯಾಂಕಿನೊಳಗೆ ಪ್ರವೇಶಿಸಿದ ಗೂಳಿ ಯಾರಿಗೂ ತೊಂದರೆ ಕೊಡದೆ ತನ್ನ ಪಾಡಿಗೆ ನಿಂತು ಬಿಟ್ಟಿದೆ .ಇದನ್ನು ಕಂಡ ಕೆಲ ಗ್ರಾಹಕರು ಬೇಗ ಬೇಗನೆ ಕೆಲಸ ಮುಗಿಸಿ ಬ್ಯಾಂಕ್ ನಿಂದ ಹೊರ ಹೋಗಿದ್ದಾರೆ. ಇನ್ನೂ ಕೆಲವರು ಕೆಲಸವನ್ನು ಅರ್ಧಕ್ಕೆ ನಿಲ್ಲಿಸಿ ಬದುಕಿದೆಯಾ ಬಡ ಜೀವ ಎನ್ನುತ್ತಾ ಸ್ಥಳದಿಂದ ಜಾಗ ಖಾಲಿ ಮಾಡಿದ್ದಾರೆ.
ಇದರ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಸುಮಾರು ಮೂವತ್ತು ಸೆಕುಂಡುಗಳ ವಿಡಿಯೋದಲ್ಲಿ ಗೂಳಿ ಸುಮ್ಮನೆ ನಿಂತಿದ್ದು ಅದನ್ನು ಕಂಡ ಕೆಲ ಗ್ರಾಹಕರು ಆಶ್ಚರ್ಯದಿಂದ ನೋಡಿದರೆ ಇನ್ನು ಕೆಲವರು ಭಯಗೊಂಡು ಹೊರ ಓಡಿದ್ದಾರೆ. ಬಳಿಕ ಬಂದ ಭದ್ರತಾ ಸಿಬಂದಿ ಗೂಳಿಯನ್ನು ಬ್ಯಾಂಕ್ ನಿಂದ ಹೊರ ಓಡಿಸಿದ್ದಾರೆ.
ಮಾಹಿತಿ ಪ್ರಕಾರ ಬ್ಯಾಂಕ್ ನ ಹೊರಭಾಗದಲ್ಲಿ ಎರಡು ಗೂಳಿಗಳು ಕಾದಾಡಿಕೊಂಡಿವೆ.ಈ ವೇಳೆ ಒಂದು ಗೂಳಿ ಸೀದಾ ಬ್ಯಾಂಕ್ ಒಳಗೆ ಪ್ರವೇಶಿದೆ ಎಂದು ಹೇಳಲಾಗಿದೆ. ಗೂಳಿ ಬ್ಯಾಂಕ್ ಪ್ರವೇಶಿಸುವ ವೇಳೆ ಭದ್ರತಾ ಸಿಬ್ಬಂದಿ ಪ್ರವೇಶ ದ್ವಾರದಲ್ಲಿ ಇರಲಿಲ್ಲ ಹಾಗಾಗಿ ಗೂಳಿ ಆರಾಮವಾಗಿ ಬ್ಯಾಂಕ್ ಪ್ರವೇಶಿಸಿದೆ ಎನ್ನಲಾಗಿದೆ. ಘಟನೆಯಿಂದ ಯಾರಿಗೂ ತೊಂದರೆ ಆಗಲಿಲ್ಲ. ಬ್ಯಾಂಕಿನಲ್ಲೂ ಕಡಿಮೆ ಗ್ರಾಹಕರು ಇದ್ದ ಪರಿಣಾಮ ಹೆಚ್ಚಿನ ಅವಘಡ ಸಂಭವಿಸಲಿಲ್ಲ.